ಉದ್ಯೋಗಿಗಳಿಗೆ ಕಾರು ಬೈಕ್ ಉಡುಗೊರೆ ನೀಡುವ ಸೂರತ್ ಉದ್ಯಮಿ ಈ ಬಾರಿ ವಿಶೇಷ ಘೋಷಣೆ!

By Chethan Kumar  |  First Published Aug 6, 2024, 8:12 PM IST

ಪ್ರತಿ ವರ್ಷ ದೀಪಾವಳಿ ವೇಳೆ ತನ್ನ ಕಂಪನಿಯ ಉದ್ಯೋಗಿಗಳಿಗೆ ಕಾರು, ಬೈಕ್ ಉಡುಗೊರೆನ ನೀಡುವ ಸೂರತ್ ಡೈಮಂಡ್ ಉದ್ಯಮಿ ಈ ಬಾರಿ ಹೊಸ ಉಡುಗೊರೆ ಘೋಷಣೆ ಮಾಡಿದ್ದಾರೆ. ಈ ಬಾರಿ 50,000 ಉದ್ಯೋಗಿಗಳಿಗೆ ಘೋಷಿಸಿದ ಗಿಫ್ಟ್ ಏನು?
 


ಸೂರತ್(ಆ.06) ದೀಪಾವಳಿ ವೇಳೆ ಉದ್ಯೋಗಿಳಿಗೆ ಕಂಪನಿ ಬೋನಸ್ ಸೇರಿದಂತೆ ಕೆಲ ಉಡುಗೊರೆ ನೀಡುತ್ತದೆ. ಈ ಪೈಕಿ ಸೂರತ್ ಡೈಮಂಡ್ ಉದ್ಯಮಿ ವಲ್ಲಭಾಯಿ ಲಖಾನಿ ಇತರ ಎಲ್ಲರಿಗಿಂತ ಭಿನ್ನ. ಉದ್ಯೋಗಿಳಿಗೆ ಕಾರು, ಮನೆ ಸೇರಿದಂತೆ ಹಲವು ದುಬಾರಿ ಉಡುಗೊರೆ ನೀಡಿ ಜನಪ್ರಿಯರಾಗಿದ್ದಾರೆ. ಈ ಬಾರಿ ಇನ್ನು ದೀಪಾವಳಿ ಬಂದಿಲ್ಲ. ಆಗಲೆ ಕಿರನ್ ಜೆಮ್ ಡೈಮಂಡ್ ಕಂಪನಿ ವಿಶೇಷ ಘೋಷಣೆ ಮಾಡಿದೆ. ಕಂಪನಿಯ ಎಲ್ಲಾ 50,000 ಉದ್ಯೋಗಿಗಳಿಗೆ 10 ದಿನ ರಜೆ ಘೋಷಿಸಿದೆ. 

ಆಗಸ್ಟ್ 17 ರಿಂದ 27ರ ವರೆಗೆ 50 ಸಾವಿರ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಕಂಪನಿ ಉದ್ಯೋಗಿಗಳಿಗೆ ಉಡುಗೊರೆ ನೀಡಿ ಬಳಿಕ ದೀರ್ಘ ರಜೆ ನೀಡುತ್ತದೆ. ಆದರೆ ಈ ಬಾರಿ ಆಗಸ್ಟ್ ತಿಂಗಳಲ್ಲೇ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಇದಕ್ಕೆ ಮುಖ್ಯ ಕಾರಣ ಡೈಮಂಡ್ ಮಾರಾಟದಲ್ಲಿ ಆಗಿರುವ ಕುಸಿತ. 

Tap to resize

Latest Videos

undefined

ಕೋಟಿ ಕುಳದ ಮಗನಾಗಿದ್ದರೂ ಕೇರಳ, ಬೆಂಗಳೂರಿನಲ್ಲಿ ಸಾಮಾನ್ಯರಂತೆ ಬದುಕಿದ ವಜ್ರದ ವ್ಯಾಪಾರಿ ಮೊಮ್ಮಗ!

ಡೈಮಂಡ್ ಬೇಡಿಕೆ ಇಳಿಮುಖಾಗಿದೆ. ವಿವಿದ ದೇಶಗಳಲ್ಲಿ ರಫ್ತಾಗುವ ಡೈಮಂಡ್ ಬೇಡಿಕೆ ಇಳಿಕೆಯಾಗಿದೆ. ಹೀಗಾಗಿ ನಮಲ್ಲಿ ಉತ್ಪಾದನೆ ಹೆಚ್ಚಾಗಿದೆ. ಇದೀಗ ಈ ಅಸಮತೋಲನ ಸರಿದೂಗಿಸಲು ಹಾಗೂ ಉತ್ಪಾದನಾ ವೆಚ್ಚ ಕಡಿತಗೊಳಿಸಲು ಇದೀಗ 50,000 ಉದ್ಯೋಗಿಗಳಿಗೆ 10 ದಿನ ರಜೆ ನೀಡಲಾಗಿದೆ. ಕಿರಮ್ ಜೆಮ್ ಕಂಪನಿ ಈ ರೀತಿ ಸುದೀರ್ಘ ರಜೆ ಘೋಷಿಸಿರುವುದು ಇದೇ ಮೊದಲು.

ಕುಸಿಯುತ್ತಿರುವ ಡೈಮಂಡ್ ಬೇಡಿಕೆ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಉತ್ಪಾದನೆ 10 ದಿನ ಸ್ಥಗಿತಗೊಳ್ಳಲಿದೆ. ಆಗಸ್ಟ್ 27ರ ಬಳಿಕ ಕಂಪನಿ ಎಂದಿನಂತೆ ಉತ್ಪಾದನೆಯಲ್ಲಿ ತೊಡಗಲಿದೆ. ಈ ವೇಳೆ ಬೇಡಿಕೆ ಹಾಗೂ ಪೊರೈಕೆ ಸರಿದೂಗಲಿದೆ ಎಂದು ವಲ್ಲಭಾಯಿ ಲಖಾನಿ ಹೇಳಿದ್ದಾರೆ. 

ಕಿರಣ್ ಜೆಮ್ ವಿಶ್ವದ ಅತೀ ದೊಡ್ಡ ನೈಸರ್ಗಿಕ ಡೈಮಂಡ್ ಉತ್ಪಾದನಾ ಕಂಪನಿಯಾಗಿದೆ. ವಾರ್ಷಿಕ 17,000 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಮುಂಬೈನಲ್ಲಿನಲ್ಲಿದ್ದ ಅತೀ ದೊಡ್ಡ ಕಿರಣ್ ಜೆಮ್ ಕಂಪನಿಯನ್ನು ವಲ್ಲಭಾಯಿ ಲಖಾನಿ ಗುಜರಾತ್‌ನ ಸೂರತ್‌ಗೆ ಸ್ಥಳಾಂತರಿಸಿ ಅದೇ ವ್ಯವಹಾರ ಮುಂದುವರಿಸಿಕೊಂಡು ಸಾಗಿದ್ದಾರೆ. 2023ರಲ್ಲಿ ಸೂರತ್ ಕಿರಣ್ ಜಿಮ್ ಕಂಪನಿ ಕಟ್ಟಡ ಹಾಗೂ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಭಾರತದ ಮಾತ್ರವಲ್ಲ ವಿಶ್ವದ ಅತೀ ದೊಡ್ಡ ಡೈಮಂಡ್ ಕಚೇರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊಘಲರು ಮತ್ತು ಬ್ರಿಟಿಷರ ಕೈ ಸೇರುವ ಮುನ್ನ ಕೊಹಿನೂರ್ ಯಾರ ಬಳಿ ಇತ್ತು? ಈಗಿದರ ಬೆಲೆ ಹಲವು ದೇಶಗಳ ಜಿಡಿಪಿಗಿಂತ ಹೆಚ್ಚು!
 

click me!