ಅಜ್ಜ ಖರೀದಿಸಿದ್ದ L&T ಷೇರುಗಳಿಂದ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ಮಹಿಳೆ!

Published : Aug 06, 2024, 01:59 PM ISTUpdated : Aug 06, 2024, 03:05 PM IST
ಅಜ್ಜ ಖರೀದಿಸಿದ್ದ L&T ಷೇರುಗಳಿಂದ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ಮಹಿಳೆ!

ಸಾರಾಂಶ

ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರಿಯಾ, ತನ್ನ ಅಜ್ಜನ ದಾಖಲೆಗಳನ್ನು ಪಡೆಯಲು ಮತ್ತು ಕಾರ್ಯವಿಧಾನವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳನ್ನು ಎದುರಿಸಿದರು.  

ಬೆಂಗಳೂರು (ಆ.6): ಹಿಂದಿಯ ಪ್ರಖ್ಯಾತ ಸಿನಿಮಾ ಹೇರಾ ಫೇರಿಯಲ್ಲಿ ಪ್ರಸಿದ್ಧ ಹಾಡೊಂದಿದೆ. 'ದೇನೇವಾಲಾ ಜಬ್ಬೀ ದೇತಾ, ದೇತಾ ಥಪ್ಪಡ್‌ ಪಾಡ್‌ ಕೇ..' ಇದರರ್ಥ. ದೇವರು ಕೊಡೋ ಟೈಮ್‌ನಲ್ಲಿ ಹೇಗೆ ಕೊಡ್ತಾನೆ ಅಂದ್ರೆ ನಿಮಗೆ ಅದನ್ನ ಹಿಡಿದುಕೊಳ್ಳೋಕು ಸಾಧ್ಯವಿಲ್ಲ. ಬೆಂಗಳೂರಿನ ಯುವತಿಯ ಬಾಳಿನಲ್ಲಿ ಈ ಮಾತು ನಿಜವಾಗಿದೆ. 2020ರಲ್ಲಿ ಕೋವಿಡ್‌ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ಉಳಿದುಕೊಂಡಿದ್ದಾಗ, ಮುಂಬೈ ಮಹಿಳೆಯೊಬ್ಬಳ ಜೀವನವನ್ನೇ ಬದಲಾಯಿಸಿದಂಥ ಘಟನೆ ನಡೆದಿದೆ. ಅಜ್ಜ ಬರೆದಿಟ್ಟಿದ್ದ ವಿಲ್‌ಅನ್ನು ನೋಡುವಾಗ ಪ್ರಿಯಾ ಶರ್ಮ ಎನ್ನುವ ಮಹಿಳೆಗೆ ಅಜ್ಜನ ಹೆಸರಲ್ಲಿರುವ ಷೇರುಗಳ ಬಗ್ಗೆ ಗೊತ್ತಾಗಿದೆ. ಹಾಗಂತ ಇದೇನು ಸುಖಾಸುಮ್ಮನೆಯ ಷೇರುಗಳಾಗಿರಲಿಲ್ಲ. 2004ರಲ್ಲಿ ಈಕೆಯ ಅಜ್ಜ ಲಾರ್ಸೆನ್‌ & ಟೌರ್ಬೋ (ಎಲ್‌ & ಟಿ) ಕಂಪನಿಯ 500 ಷೇರುಗಳನ್ನು ಖರೀದಿ ಮಾಡಿದ್ದರು. ಪ್ರಸ್ತುತ ಇದು ದೇಶದ ಅತ್ಯಂತ ಪ್ರಖ್ಯಾತ ಬ್ಲ್ಯೂ ಚಿಪ್‌ ಕನ್‌ಸ್ಟ್ರಕ್ಷನ್‌ ಕಂಪನಿ. ಆದರೆ, ಬಳಿಕ ಷೇರುಗಳ ಮೇಲೆ ಮತ್ತೇನೂ ವ್ಯವಹಾರಗಳಾಗದ ಹಿನ್ನಲೆಯಲ್ಲಿ ಅವರ ಅವರ ಷೇರು ಕೂಡ ಡೋರ್ಮಾಟ್‌ ಆಗತ್ತು. ಹಾಗಂತ ಅಜ್ಜ ಕೂಡ ಷೇರನ್ನು ಮಾರಾಟ ಮಾಡಿರಲಿಲ್ಲ. ಈಗ ಇದೇ ಷೇರುಗಳು ಪ್ರಿಯಾ ಶರ್ಮ ಅವರ ಜೀವನವನ್ನೇ ಬದಲಾಯಿಸಿದೆ.

ಫಸ್ಟ್ ಪೋಸ್ಟ್ ಪ್ರಕಾರ, ಪ್ರಿಯಾ ಕೇವಲ 500 L&T ಷೇರುಗಳನ್ನು ಮಾತ್ರವೇ ಆನುವಂಶಿಕವಾಗಿ ಪಡೆದಿಲ್ಲ. ಬೋನಸ್ ಷೇರುಗಳು ಮತ್ತು ಸ್ಟಾಕ್ ವಿಭಜನೆಯ ಪರಿಣಾಮವಾಗಿ ಅವರು ಈಗ 4,500 ಷೇರುಗಳನ್ನು ಸಂಪಾದನೆ ಮಾಡಿದ್ದಾರೆ.

ಇದು ಹೇಗೆ ಸಾಧ್ಯ ಎಂದು ನಿಮಗೆ ಅಚ್ಚರಿಯಾಗಬಹುದು. ಕಂಪನಿಯಲ್ಲಿ ಲಿಕ್ವಿಡಿಟಿ ಸುಧಾರಿಸಲು ಸಾಮಾನ್ಯವಾಗಿ ಬಾಕಿ ಇರುವ ಷೇರುಗಳನ್ನು ಸ್ಟಾಕ್‌ ವಿಭಜನೆ ಮಾಡಿ ನೀಡುತ್ತದೆ. 1:2 ಪ್ರಮಾಣದಲ್ಲಿ ಸ್ಟಾಕ್‌ ವಿಭಜನೆ ಆದಾಗ ಪ್ರತಿ ಷೇರುಗಳು ಎರಡಾಗಿ ಬದಲಾಗುತ್ತದೆ. ಇದು ಹೂಡಿಕೆದಾರರ ಷೇರು ಪ್ರಮಾಣ ಡಬಲ್‌ ಆದರೂ, ಅವರ ಹೂಡಿಕೆ ಮೊತ್ತ ಅಷ್ಟೇ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬೋನಸ್ ಷೇರುಗಳನ್ನು ನೀಡಲಾಗುತ್ತದೆ. ಪ್ರಸ್ತುತ ಮಾಲೀಕರಿಗೆ ಅವರು ಹೊಂದಿರುವ ಷೇರುಗಳ ಪ್ರಮಾಣವನ್ನು ಆಧರಿಸಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಷೇರುಗಳನ್ನು ಬೋಷನ್‌ ರೂಪದಲ್ಲಿ ನೀಡಲಾಗುತ್ತದೆ.

ಪ್ರಿಯಾ ಶರ್ಮ ವಿಚಾರಕ್ಕೆ ಬರುವುದಾದರೆ, 2004ರಿಂದ ಈವರೆಗೂ ಎಲ್‌ & ಟಿ ಕಂಪನಿಯ ಷೇರುಗಳು 9 ಪಟ್ಟು ಹೆಚ್ಚಾಗಿದೆ. ಅವುಗಳ ಮೌಲ್ಯದಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಪ್ರಿಯಾ ಶರ್ಮ ಬಳಿ ಇರುವ 4500 ಎಲ್‌ & ಟಿ ಷೇರುಗಳ ಪ್ರಸ್ತುತ ಮೌಲ್ಯ 1.72 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದರೆ, ಈ ಷೇರುಗಳನ್ನು ತಮ್ಮ ಹೆಸರಿನಲ್ಲಿ ಮಾಡಿಸಿಕೊಳ್ಳುವ ಅವರ ಪ್ರಯತ್ನ ಸುಲಭದ್ದಾಗಿರಲಿಲ್ಲ. ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರಿಯಾ, ತನ್ನ ಅಜ್ಜನ ದಾಖಲೆಗಳನ್ನು ಪಡೆಯಲು ಮತ್ತು ಕಾರ್ಯವಿಧಾನವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳನ್ನು ಎದುರಿಸಿದರು.

ಮೊದಲಿಗೆ L&T ಕಂಪನಿಗೆ ಅವರು ಪತ್ರ ಬರೆದು ಕೆಲಸ ಆರಂಭಿಸಿದರು. ಇದಕ್ಕಾಗಿ ಆಕೆ ಕೆಲವೊಂದು ಆಡಳಿತಾತ್ಮಕ ಅವಶ್ಯಕತೆ ಪೂರೈಸಬೇಕಿದೆ. ಇದಕ್ಕಾಗಿ ತನಗೆ ವೃತ್ತಿಪರರ ಅಗತ್ಯವಿದೆ ಅನ್ನೋದನ್ನ ಆಕೆ ಅರಿತುಕೊಂಡಿದ್ದಳು. ಕಳೆದುಹೋದ ಹೂಡಿಕೆಗಳನ್ನು ಹಿಂಪಡೆಯುವಲ್ಲಿ ಪರಿಣತಿ ಹೊಂದಿರುವ ಕಂಪನಿ ಶೇರ್ ಸಮಾಧಾನ್ ಅವರ ಜೀವನದಲ್ಲಿ ಎಂಟ್ರಿ ಆಯಿತು. ಪ್ರಿಯಾ ಅವರ ಅಜ್ಜನ ಉಯಿಲು ಸೇರಿದಂತೆ ಕಾಗದಪತ್ರಗಳನ್ನು ಕಂಪನಿಯು ಕೂಲಂಕಷವಾಗಿ ಪರಿಶೀಲನೆ ಮಾಡಿತು. 

ರಾಕೇಶ್‌ ಜುಂಜುನ್‌ವಾಲಾ ಪತ್ನಿಗೆ ಒಂದೇ ದಿನ 800 ಕೋಟಿ, ಒಂದು ತಿಂಗಳಲ್ಲಿ 2360 ಕೋಟಿ ನಷ್ಟ!

"ಷೇರುಗಳ ಸಂಖ್ಯೆ ಗಣನೀಯವಾಗಿರುವುದರಿಂದ ಮತ್ತು ಕ್ಲೈಂಟ್ ಮೂಲ ಷೇರುಗಳನ್ನು ಹೊಂದಿರದ ಕಾರಣ, ಕಂಪನಿಯು ಬಹು ಪರಿಶೀಲನೆಗಳನ್ನು ಮಾಡಬೇಕಾಗಿರುವುದರಿಂದ ಇದು ಕಠಿಣ ಕಾರ್ಯವಾಗಿದೆ ಎಂದು ನಾವು ಅರಿತುಕೊಂಡೆವು. ಉಯಿಲಿನ ಹೆಚ್ಚಿನ ಪರಿಶೀಲನೆ ಕೂಡ ಮಾಡಬೇಕಾಗಿತ್ತು" ಎಂದು ಶೇರ್ ಸಮಾಧಾನ್ ತಿಳಿಸಿದ್ದರು. ಮೊದಲ ಮತ್ತು ಬಹುಶಃ ಅತ್ಯಂತ ಮುಖ್ಯವಾದ ಕೆಲಸವೆಂದರೆ ವಿಲ್‌ನ ಕೂಲಂಕಷ ಪರಿಶೀಲನೆ. ಬಳಿಕ ಪ್ರಿಯಾ ಅವರ KYC (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಡೇಟಾವನ್ನು ನವೀಕರಿಸಲು ಮತ್ತು ಮುಂಬೈನಲ್ಲಿ ಪ್ರೊಬೇಟ್ ಪಡೆಯಲು ಅಗತ್ಯವಿರುವ ಸಮಗ್ರ ಷೇರುದಾರರ ಹೇಳಿಕೆಯನ್ನು ಪಡೆಯಲು ಸಮಾಧಾನ್ L&T ಜೊತೆಗೆ ಕೆಲಸ ಮಾಡಿತ್ತು ಎಂದು ಕಂಪನಿ ತಿಳಿಸಿದೆ.

Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

ಪ್ರೊಬೇಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, L&T ಪ್ರಿಯಾ ಅವರ ಅಜ್ಜನ ಔಪಚಾರಿಕ ದಾಖಲೆಗಳು ಮತ್ತು ಷೇರು ಪ್ರಮಾಣಪತ್ರದಲ್ಲಿನ ಹೆಸರಿನ ನಡುವಿನ ಹೊಂದಾಣಿಕೆಯನ್ನು ಕಂಡುಹಿಡಿದಿದೆ. ಈ ಅಸಮಾನತೆಯನ್ನು ಸಮನ್ವಯಗೊಳಿಸಲು, ಅಫಿಡವಿಟ್ ಅಗತ್ಯವಿತ್ತು. ಷೇರುಗಳ ಹೆಚ್ಚಿನ ಮೌಲ್ಯದ ಕಾರಣದಿಂದ, L&T ನಕಲು ಷೇರುಗಳನ್ನು ವಿತರಿಸಲು ಯಾರಾದರೂ ಜಾಮೀನು ಬಾಂಡ್‌ಗೆ ಸಹಿ ಹಾಕಬೇಕು ಮತ್ತು ಹಣಕಾಸಿನ ಖಾತರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿತ್ತು. ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಿಯಾ ಅಂತಿಮವಾಗಿ ದೂರದ ಸಂಬಂಧಿಯನ್ನು ಕಂಡುಕೊಂಡಿದ್ದರು ಎಂದು ವರದಿಯಾಗಿದೆ. ಸುಳ್ಳು ಕ್ಲೈಮ್‌ಗಳನ್ನು ತಡೆಗಟ್ಟುವ ಸಲುವಾಗಿ, L&T ವೈಯಕ್ತಿಕ ಪರಿಶೀಲನೆಯನ್ನು ಕೋರಿತು, ಇದು ಸಮಾಲೋಚನಾ ಪ್ರಕ್ರಿಯೆ ಮತ್ತು ಅಗತ್ಯವಿರುವ ಪುರಾವೆಗಳ ಒದಗಿಸುವ ಮೂಲಕ ನಡೆದಿತ್ತು. ಅಂದಾಜು ಒಂದು ವರ್ಷಗಳ ಕಾಲ ನಡೆಸಿದ ಹೋರಾಟದ ಬಳಿಕ ತನ್ನ ಅಜ್ಜನ ಹೆಸರಲ್ಲಿದ್ದ 4500 ಎಲ್‌ & ಟಿ ಷೇರುಗಳನ್ನು ಪಡೆಯಲು ಆಕೆ ಯಶಸ್ವಿಯಾಗಿದ್ದಾರೆ. ಈಗ ಆಕೆ 1.72 ಕೋಟಿ ರೂಪಾಯಿಯ ಒಡತಿಯಾಗಿದ್ದಾಳೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!