ಜನಸಾಮಾನ್ಯರಿಗೆ ಗುಡ್ ನ್ಯೂಸ್, ಪೆಟ್ರೋಲ್ ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆ!

By Chethan KumarFirst Published Sep 12, 2024, 4:02 PM IST
Highlights

ಗಗನಕ್ಕೇರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆಯಾಗುತ್ತಿದೆ. ಇಂಧನ ಮೇಲಿನ ವಿಂಡ್‌ಫಾಲ್ ತೆರಿಗೆ ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ  ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಲಿದೆ.
 

ನವದೆಹಲಿ(ಸೆ.12) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುತ್ತಿದೆ. ಇದೀಗ ಜನ ಸಾಮಾನ್ಯರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಬರಲಿದೆ. ಪೆಟ್ರೋಲ್ ಡೀಸೆಲ್ ಮೇಲೆ ವಿಧಿಸಿರುವ ವಿಂಡ್‌ಫಾಲ್ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರಿ ಕಡಿತಗೊಳ್ಳಲಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್ ಸಭೆ ನಡೆಸಿದ್ದಾರೆ.

ವಿಂಡ್‌ಫಾಲ್ ತೆರಿಗೆಯನ್ನು ನಿರ್ಮೂಲನೆ ಮಾಡುವದರಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಲಿದೆ ಎಂದು ಪಂಕಜ್ ಜೈನ್ ಹೇಳಿದ್ದಾರೆ. ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ 3 ವರ್ಷದಲ್ಲಿ ದಾಖಲಾದ ಕಡಿಮೆ ದರ ಇದಾಗಿದೆ. ಹೀಗಾಗಿ ಹೊಸ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯದ ಮುಂದೆ ಇಡಲಾಗಿದೆ ಎಂದು ಪಂಕಜ್ ಜೈನ್ ಹೇಳಿದ್ದಾರೆ.

Latest Videos

ನಿಮ್ಮ ವಾಹನ ಪೆಟ್ರೋಲ್ ಕುಡಿಯುತ್ತಿದೆಯೇ? ಮೈಲೇಜ್ ಹೆಚ್ಚಿಸಲು ಇಲ್ಲಿವೆ 10 ಟಿಪ್ಸ್!

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದರೆ ಮಾರ್ಚ್ 14ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ 2 ರೂಪಾಯಿ ಕಡಿತಗೊಳಿಸಿತ್ತು. ಇದಾದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚೂ ಕಡಿಮೆ ಸ್ಥಿರವಾಗಿದೆ. ಆದರೂ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಇದೀಗ ವಿಂಡ್‌ಪಾಲ್ ತೆರಿಗೆಯನ್ನು ತೆಗೆದುಹಾಕುವುದರ ಮೂಲಕ ಮತ್ತಷ್ಟು ಬೆಲೆ ಇಳಿಕೆಯಾಗಲಿದೆ.

ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಆಧರಿಸಿ ಪ್ರತಿ 15 ದಿನಕ್ಕೊಮ್ಮೆ ವಿಂಡ್‌ಫಾಲ್ ತೆರಿಗೆ ನಿರ್ಧಾರವಾಗುತ್ತದೆ. 2022ರ ಜುಲೈ 1ರಂದು ವಿಂಡ್‌ಫಾಲ್ ತೆರಿಗೆಯನ್ನು ಭಾರತದಲ್ಲಿ ಜಾರಿಗೆ ತರಲಾಗಿತ್ತು. ಪ್ರಮುಖವಾಗಿ ಆಯಿಲ್ ಕಂಪನಿಗಳ ಮೇಲೆ ಹಾಕಲಾಗಿದ್ದ ತೆರಿಗೆಯಾಗಿದೆ. ಈ ತೆರಿಗೆಯನ್ನು ಆಯಿಲ್ ಕಂಪನಿಗಳು ಪ್ರತಿ ಲೀಟರ್ ಇಂಧನದ ಮೇಲೆ ಹಾಕಿ ಜನಸಾಮಾನ್ಯರಿಗೆ ನೀಡುತ್ತಿತ್ತು. ಇದೀಗ ಈ ವಿಂಡ್‌ಫಾಲ್ ತೆರಿಗೆ ತೆಗೆದು ಹಾಕುವ ಮೂಲಕ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಡುತ್ತಿದೆ.

ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್ ಬೆಲೆ 70 ಅಮೆರಿಕನ್ ಡಾಲರ್‌ಗಿಂತ ಕೆಳಗಿಳಿದೆ. 2021ರ ಡಿಸೆಂಬರ್‌ನಲ್ಲಿ ಈ ಬೆಲೆ ದಾಖಲಾಗಿತ್ತು. ಬಳಿಕ ಪ್ರತಿ ದಿನ ಏರಿಕೆಯಾಗುತ್ತಲೇ ಸಾಗಿದೆ. ಇದೀಗ 3 ವರ್ಷಗಳ ಬಳಿಕ ಕಚ್ಚಾತೈಲ ಬೆಲೆ ಕೊಂಚ ಸಹಜ ಸ್ಛಿತಿಗೆ ಮರಳುವಂತೆ ಗೋಚರಿಸುತ್ತಿದೆ.

ಪೆಟ್ರೋಲ್ ತುಂಬಿಸಲು ಕಾಯುತ್ತಿದ್ದ ಶಿಕ್ಷಕನಿಗೆ ದಿಢೀರ್ ಹೃದಯಾಘಾತ, ಸಿಸಿವಿಯಲ್ಲಿ ಕೊನೆ ಕ್ಷಣ ಸೆರೆ!
 

click me!