ಟೆಲಿಕಾಂ ಉದ್ಯಮಿ ಸಕ್ಸಸ್ ಸ್ಟೋರಿ: ಸೈಕಲ್ ಪಾರ್ಟ್ಸ್ ಮಾರಾಟದಿಂದ ಬಿಸಿನೆಸ್ ಟೈಕೂನ್ ಆದ ವ್ಯಕ್ತಿಯ ಕಥೆ ಬಹಳ ಕುತೂಹಲಕಾರಿಯಾಗಿದೆ. ತಂದೆಯಿಂದ ಸಾಲ ಪಡೆದು ವೃತ್ತಿ ಜೀವನ ಆರಂಭಿಸಿ ಇಂದು 22.5 ಬಿಲಿಯನ್ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ.
Success Story: ನಿಮ್ಮಲ್ಲಿ ಕೌಶಲ್ಯವಿದ್ದರೆ ಮತ್ತು ನೀವು ಕಷ್ಟಪಡಲು ಹಿಂಜರಿಯದಿದ್ದರೆ, ನಿಮ್ಮನ್ನು ಯಶಸ್ವಿಯಾಗದಂತೆ ಯಾರೂ ತಡೆಯಲು ಸಾಧ್ಯವಿಲ್ಲ. ಒಬ್ಬ ಬ್ಯುಸಿನೆಸ್ ಟೈಕೂನ್ ಕಥೆಯೂ ಇದೇ ರೀತಿಯಾಗಿದೆ. ಒಂದು ಕಾಲದಲ್ಲಿ ಸೈಕಲ್ ಪಾರ್ಟ್ಸ್ ಮಾರುತ್ತಿದ್ದ ವ್ಯಕ್ತಿ ಇಂದು 22.5 ಬಿಲಿಯನ್ ಒಡೆಯ. ಈ ಕಥೆ ಬೇರೆ ಯಾರದ್ದೂ ಅಲ್ಲ, ಟೆಲಿಕಾಂ ಟೈಕೂನ್ ಮತ್ತು ಭಾರತಿ ಏರ್‌ಟೆಲ್ (Bharti Airtel) ಮಾಲೀಕ ಸುನಿಲ್ ಭಾರತಿ ಮಿತ್ತಲ್ (Sunil Bharti Mittal) ಅವರದ್ದು. ತಂದೆಯಿಂದ ಸಾಲ ಪಡೆದು ಬ್ಯುಸಿನೆಸ್ ಆರಂಭಿಸಿದ ಸುನಿಲ್ ಮಿತ್ತಲ್ ಅವರ ಸಕ್ಸಸ್ ಸ್ಟೋರಿ ಬಹಳ ಇಂಟರೆಸ್ಟಿಂಗ್ ಆಗಿದೆ. ಸುನೀಲ್ ಮಿತ್ತಲ್ 23 ಅಕ್ಟೋಬರ್ 1957 ರಂದು ಲೂಧಿಯಾನದ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ತಂದೆ ಸತ್ಪಾಲ್ ಮಿತ್ತಲ್ ಕಾಂಗ್ರೆಸ್‌ನಿಂದ (Congress) ಎರಡು ಬಾರಿ ಸಂಸದರಾಗಿದ್ದರು. ಸುನಿಲ್ ಮಿತ್ತಲ್ ಅವರ ಶಾಲಾ ಶಿಕ್ಷಣ ಮಸ್ಸೂರಿಯಲ್ಲಿರುವ ವಿನ್‌ಬರ್ಗ್ ಶಾಲೆಯಲ್ಲಿ ನಡೆಯಿತು.
ಗ್ವಾಲಿಯರ್‌ನ ಸಿಂಧಿಯಾ ಶಾಲೆ ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಿದರು. ಅವರಿಗೆ ತಂದೆಯಂತೆ ರಾಜಕಾರಣದಲ್ಲಿ ಸಕ್ರಿಯರಾಗುವ ಆಸಕ್ತಿ ಇರಲಿಲ್ಲ, ಆದರೆ ಬ್ಯುಸಿನೆಸ್ ಮಾಡುವ ಆಸಕ್ತಿ ಇತ್ತು. ಇದಕ್ಕಾಗಿ ಅವರು ತಂದೆಯಿಂದ 20,000 ರೂಪಾಯಿ ಸಾಲ ಪಡೆದು ಸೈಕಲ್ ಪಾರ್ಟ್ಸ್ ಕೆಲಸ ಮಾಡಲು ಪ್ರಾರಂಭಿಸಿದರು.
ಸೈಕಲ್ ಪಾರ್ಟ್ಸ್ ಮಾರಾಟದಿಂದ ಟೆಲಿಕಾಂ ಟೈಕೂನ್
ಸುನಿಲ್ ಮಿತ್ತಲ್ 18 ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮೊದಲಿಗೆ ಅವರು ತಮ್ಮ ಸ್ನೇಹಿತನೊಂದಿಗೆ ಸೇರಿ ಬ್ರಜ್‌ಮೋಹನ್ ಮುಂಜಾಲ್ ಅವರ ಹೀರೋ ಸೈಕಲ್ (Hero Cycle) ಕಂಪನಿಗೆ ಪಾರ್ಟ್ಸ್ ತಯಾರಿಸಲು ಪ್ರಾರಂಭಿಸಿದರು. ಮೂರು ವರ್ಷಗಳಲ್ಲಿ ಮೂರು ಯೂನಿಟ್‌ಗಳನ್ನು ಸ್ಥಾಪಿಸಿದರು. ಈ ಬ್ಯುಸಿನೆಸ್‌ನಲ್ಲಿ ಲಾಭ ಗಳಿಸಿದರು. ನಂತರ ಸೈಕಲ್ ಬಿಸಿನೆಸ್ ಅನ್ನು ಮಾರಾಟ ಮಾಡಿ ಎಲೆಕ್ಟ್ರಿಕ್ ಪವರ್ ಜನರೇಟರ್ ಕೆಲಸವನ್ನು ಪ್ರಾರಂಭಿಸಿದರು. ಆದರೆ 1983 ರಲ್ಲಿ ಸರ್ಕಾರವು ಜನರೇಟರ್ ರಫ್ತಿನ ಮೇಲೆ ನಿಷೇಧ ಹೇರಿದಾಗ ಅವರಿಗೆ ದೊಡ್ಡ ಹೊಡೆತ ಬಿತ್ತು. ಆದರೆ ಸುನಿಲ್ ಮಿತ್ತಲ್ ಧೃತಿಗೆಡದೇ ತಮ್ಮ ಕೆಲಸವನ್ನು ಮುಂದುವರಿಸಿದರು.
ಟೆಲಿಕಾಂ ಸೆಕ್ಟರ್‌ಗೆ ಎಂಟ್ರಿ
ಒಂದು ಸಂದರ್ಶನದಲ್ಲಿ ಸುನಿಲ್ ಮಿತ್ತಲ್ ಅವರು ಜನರೇಟರ್ ಬ್ಯುಸಿನೆಸ್ ಮುಚ್ಚಿದಾಗ ತೈವಾನ್‌ಗೆ ಹೋಗಿದ್ದೆ. ಅಲ್ಲಿ ಪುಶ್ ಬಟನ್ ಮೊಬೈಲ್ ಮೇಲೆ ಕಣ್ಣು ಬಿತ್ತು. ನಂತರ ಅವರು ಬೀಟಲ್ ಹೆಸರಿನಲ್ಲಿ ಟೆಲಿಫೋನ್ ಮತ್ತು ಫ್ಯಾಕ್ಸ್ ಮೆಷಿನ್ ಮಾರ್ಕೆಟಿಂಗ್ ಪ್ರಾರಂಭಿಸಿದರು. ನಂತರ ಅವರು ಸೀಮೆನ್ಸ್ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡು ಭಾರತಿ ಟೆಲಿಕಾಂ ಕಂಪನಿಯನ್ನು ಪ್ರಾರಂಭಿಸಿದರು, ಅದು ಇಂದು ಭಾರತಿ ಏರ್‌ಟೆಲ್ ಎಂದು ಕರೆಯಲ್ಪಡುತ್ತದೆ ಮತ್ತು ದೇಶದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಕೋಟಿ ಕೋಟಿ ಆಸ್ತಿಯಿದ್ರೂ ಫುಡ್ ಬಿಸಿನೆಸ್ ಆರಂಭಿಸಿ ಸಕ್ಸಸ್ ಆದ ಬಿಲಿಯನೇರ್ ಸೊಸೆ
ಏರ್‌ಟೆಲ್ ಟಾಪ್ ಟೆಲಿಕಾಂ ಕಂಪನಿಯಾಯಿತು
1992 ರಲ್ಲಿ ಸರ್ಕಾರವು ಮೊದಲ ಬಾರಿಗೆ ಮೊಬೈಲ್ ಫೋನ್ ಸೇವೆಗಳಿಗೆ ಲೈಸೆನ್ಸ್ ನೀಡುತ್ತಿತ್ತು. ಆಗ ಸುನಿಲ್ ಮಿತ್ತಲ್ ಕೂಡ ಸೆಲ್ಯುಲಾರ್ ಸರ್ಕಲ್ ಲೈಸೆನ್ಸ್ ಪಡೆದರು. ಇದರ ನಂತರ 1995 ರಲ್ಲಿ ಅವರು ಭಾರತಿ ಸೆಲ್ಯುಲಾರ್ ಲಿಮಿಟೆಡ್ (BCL) ಅನ್ನು ಪ್ರಾರಂಭಿಸಿದರು. ಇಲ್ಲಿಂದ ಏರ್‌ಟೆಲ್ ಬಂತು. 2008 ರ ವೇಳೆಗೆ ಕಂಪನಿಯ ಗ್ರಾಹಕರ ಸಂಖ್ಯೆ ಬಹಳ ಹೆಚ್ಚಾಯಿತು, ಈ ಕಂಪನಿ ವಿಶ್ವದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾಯಿತು.
ಸುನಿಲ್ ಮಿತ್ತಲ್ ಅವರ ನೆಟ್ ವರ್ತ್ ಎಷ್ಟು?
ಭಾರತಿ ಏರ್‌ಟೆಲ್ ಬಿಸಿನೆಸ್ 17 ದೇಶಗಳಲ್ಲಿ ಇದೆ. 49 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಕಂಪನಿಯಲ್ಲಿ ಸುನೀಲ್ ಮಿತ್ತಲ್ ಅವರ ಪಾಲು 25% ಇದೆ. ಇದರ ಜೊತೆಗೆ ಭಾರತಿ ಎಂಟರ್‌ಪ್ರೈಸಸ್ ಮತ್ತು ಇತರ ಹೋಲ್ಡಿಂಗ್ ಕಂಪನಿಗಳಲ್ಲಿ ಪಾಲುದಾರಿಕೆ ಇದೆ. ಇಂದು ಅವರು 22.5 ಬಿಲಿಯನ್ ಒಡೆಯರಾಗಿದ್ದಾರೆ.
ಇದನ್ನೂ ಓದಿ: ಅಂಬಾನಿಯನ್ನು ದಿಗ್ಬ್ರಮೆಗೊಳಿಸಿದ ಸುನಿಲ್ ಮಿತ್ತಲ್; ಜಿಯೋವನ್ನು ಹಿಂದಿಕ್ಕಿದ ಏರ್‌ಟೆಲ್