BSNL ತನ್ನ ಬಳಕೆದಾರರಿಗೆ 6 ತಿಂಗಳ ವ್ಯಾಲಿಡಿಟಿಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯವನ್ನು ಪಡೆಯಬಹುದು, ಇದು ಖಾಸಗಿ ಟೆಲಿಕಾಂಗಳಿಗೆ ಸವಾಲಾಗಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಹೊರ ತಂದಿದೆ. ಈ ಹೊಸ ಪ್ಲಾನ್ 6 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಬಜೆಟ್ ಸ್ನೇಹಿ ಪ್ಲಾನ್ ಬಿಡುಗಡೆಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಬಿಎಸ್‌ಎನ್‌ಎಲ್ ಮಾಡುತ್ತಿದ್ದು ಇದು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲು ಆಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಪದೇ ಪದೇ ರೀಚಾರ್ಜ್ ಮಾಡುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಖಾಸಗಿ ಟೆಲಿಕಾಂ ದೈತ್ಯರ ವಿರುದ್ಧ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನನ್ನು ಬಲಪಡಿಸಿಕೊಳ್ಳಲು ಬಿಎಸ್‌ಎನ್‌ಎಲ್ ಕಡಿಮೆ ಬಲೆಯ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಜೊತೆಯಲ್ಲಿ 4ಜಿ ನೆಟ್‌ವರ್ಕ್ ಅಳವಡಿಕೆ ಕಾರ್ಯವೂ ಅತ್ಯಂತ ವೇಗದಿಂದ ಸಾಗುತ್ತಿದೆ.
ದುಬಾರಿ ಪ್ರಿಪೇಯ್ಡ್ ರೀಚಾರ್ಜ್‌ಗಳಿಂದ ನೀವು ಬೇಸತ್ತಿದ್ದರೆ, ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಎಂದಿನಂತೆ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಗೆ 6 ತಿಂಗಳ ಅವಧಿಯ ಪ್ಲಾನ್ ಹೊರ ತಂದಿದೆ. ಬಿಎಸ್‌ಎನ್‌ಎಲ್ 6 ತಿಂಗಳ ಪ್ಲಾನ್ ಬೆಲೆ 750 ರೂಪಾಯಿಗಳಾಗಿದೆ. ಅಂದ್ರೆ ದಿನಕ್ಕೆ ನಿಮಗೆ ಕೇವಲ 4.66 ರೂಪಾಯಿ ಪಾವತಿಸಿದಂತೆ ಆಗುತ್ತದೆ.
750 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ವಿಶೇಷತೆ ಏನು?
ಈ ಯೋಜನೆಯನ್ನು ವಿಶೇಷವಾಗಿ GP2 ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ತಮ್ಮ ಹಿಂದಿನ ಪ್ಲಾನ್ ವ್ಯಾಲಿಡಿಟಿ ಮುಗಿದರೂ ರೀಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದ ಬಳಕೆದಾರರಿಗೆ ಈ ಪ್ಲಾನ್ ತರಲಾಗಿದೆ. ಪದೇ ಪದೇ ರೀಚಾರ್ಜ್ ಮಾಡಿಕೊಳ್ಳಲು ಕಿರಿಕಿರಿ ಅನುಭವಿಸುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್ 750 ರೂಪಾಯಿಯ ಪ್ಲಾನ್ ತಂದಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಗ್ರಾಹಕರಿಗೆ 180 ದಿನಗಳವರೆಗೆ ಯಾವುದೇ ರೀಚಾರ್ಜ್ ಮಾಡಿಕೊಳ್ಳುವ ಕಿರಿಕಿರಿ ಇರಲ್ಲ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಹಾಗೆಯೇ ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.
ಎಷ್ಟು ಡೇಟಾ ಸಿಗುತ್ತೆ?
750 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 180 ದಿನಕ್ಕೆ ಒಟ್ಟು 180GB ಡೇಟಾ ಸಿಗುತ್ತದೆ. ಅಂದ್ರೆ ಪ್ರತಿದಿನ ನಿಮಗೆ 1GB ಡೇಟಾ ಸಿಗುತ್ತದೆ. ದಿನದ ಡೇಟಾ ಪ್ಯಾಕ್ ಮುಕ್ತಾಗೊಳ್ಳತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 40kbpsಗೆ ಇಳಿಕೆಯಾಗುತ್ತದೆ.
ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿರುವ ಈ ಹೊಸ ಯೋಜನೆ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳಿಗೆ ತೀವ್ರ ಸ್ಪರ್ಧಯನ್ನು ನೀಡಲಿದೆ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮತ್ತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಮರಳುತ್ತಿರೋ ಗ್ರಾಹಕರನ್ನು ತಡೆಯಲು ಬಿಎಸ್‌ಎನ್‌ಎಲ್ ಬಜೆಟ್ ಸ್ನೇಹಿ ಪ್ಲಾನ್ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಬಿಎಸ್‌ಎನ್ಎಲ್; ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್
ಒಂದು ವರ್ಷ ವ್ಯಾಲಿಡಿಟಿಯ ಪ್ಲಾನ್
ಬಿಎಸ್‌ಎನ್ಎಲ್ ಪ್ರಿಪೇಯ್ಡ್ ಗ್ರಾಹಕರು 1,999 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಒಂದು ವರ್ಷ ರೀಚಾರ್ಜ್ ಮಾಡಿಕೊಳ್ಳುವ ಅವಶ್ಯಕತೆ ಇರಲ್ಲ. ಈ ವಿಶೇಷ ಪ್ಯಾಕ್‌ನಲ್ಲಿ ಗ್ರಾಹಕರಿಗೆ ಒಟ್ಟು 600GB ಡೇಟಾ ಸಿಗುತ್ತದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. ಹಾಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ಡೇಟಾ ಪ್ಯಾಕ್ ಮುಕ್ತಾಯವಾಗುತ್ತಿದ್ದಂತೆ ನೆಟ್ ಸ್ಪೀಡ್ 40 kbps ಆಗುತ್ತದೆ.
ಇದನ್ನೂ ಓದಿ: ಅಂಬಾನಿಯ BP ಹೆಚ್ಚಿಸಿದ BSNL; ಇತ್ತ Airtel, Viಗೂ ತಪ್ಪದ ಸಂಕಷ್ಟ: ಮತ್ತಷ್ಟು ಹೆಚ್ಚಾಯ್ತು ಬಿಎಸ್‌ಎನ್‌ಎಲ್ ತಾಕತ್ತು!