Cryptocurrency:ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ; ಕ್ರಿಪ್ಟೋಕರೆನ್ಸಿ ಸಮಸ್ಯೆ ಕುರಿತು ಮಹತ್ವದ ನಿರ್ಣಯ!

By Suvarna News  |  First Published Nov 13, 2021, 9:06 PM IST
  • ಕರ್ನಾಟಕದಲ್ಲಿ ಬಿಟ್‌ಕಾಯಿನ್ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಸಂಚಲನ
  • ಕ್ರಿಪ್ಟೋಕರೆನ್ಸಿ ಸಮಸ್ಯೆ ಕುರಿತು ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
  • ದೇಶದಲ್ಲಿ ಎದುರಿಸುತ್ತಿರುವ ಕ್ರಿಪ್ಟೋಕರೆನ್ಸಿ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ

ನವದೆಹಲಿ(ನ.13):  ದೇಶದಲ್ಲೀಗ ಕ್ರಿಪ್ಟೋಕರೆನ್ಸಿ(Cryptocurrency) ಭಾರಿ ಚರ್ಚೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಕ್ರಿಪ್ಟೋಕರೆನ್ಸಿ ಭಾರಿ ಕೋಲಾಹಲವನ್ನೇ ಎಬ್ಬಿಸಿದೆ. ಇದರಲ್ಲಿ ಕರ್ನಾಟಕ(Karnataka) ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ(Bitcoin scam) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಕ್ರಿಪ್ಟೋಕರೆನ್ಸಿ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳ ಪರಿಹಾರ ಕುರಿತು ಇಂದಿನ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) , ಹಣಕಾಸು ಸಚಿವಾಲಯ, ಗೃಹ ಸಚಿವಾಲಯ ಹಾಗೂ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ಜೊತೆ ಪ್ರಧಾನಿ ಮೋದಿ(PM Narendra Modi) ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದೇಶದಲ್ಲಿನ ಕ್ರಿಪ್ಟೋಕರೆನ್ಸಿ ಹಾಗೂ ಅದರಿಂದ ಎದುರಾಗಿರುವ ಸವಾಲುಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ದೇಶ ಹಾಗೂ ವಿಶ್ವದ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ಈ ಮಾಹಿತಿಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

Tap to resize

Latest Videos

ಈ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.  ಅನಿಯಂತ್ರಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳಿಂದ ದೇಶದ ಭದ್ರತೆಗೆ ಸವಾಲು ಎದುರಾಗಲಿದೆ. ಕ್ಪಿಪ್ಟೋಕರೆನ್ಸಿಯನ್ನು ಭಯೋತ್ಪಾದಕರಿಗೆ ಹಣಕಾಸು(terror funding) ಒದಗಿಸುವ ಮಾರ್ಗವಾಗಲು ಅವಕಾಶ ನೀಡಬಾರದು. ಇನ್ನು ಮನಿಲಾಂಡರಿಂಗ್ ಪ್ರಕರಣಕ್ಕೂ(money laundering cryptocurrency) ನಾಂದಿ ಹಾಡದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯ ರಾಜಕೀಯದಲ್ಲಿ Bitcoin ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ವಿಶೇಷ ಅಂದರೆ ಇದಕ್ಕೆ ಯಾವುದೇ ಸಂಸ್ಥೆಯ ನಿಯಂತ್ರಣವೂ ಇಲ್ಲ. ಹೀಗಾಗಿ ಅತಿಯಾದ ಭರವಸೆ, ಪಾರದರ್ಶಕವಲ್ಲದ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಈ ಮೂಲಕ ಯುವಕರನ್ನು ದಾರಿತಪ್ಪಿಸುವ ಕಲಸ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ವಿಕಸಿಸುತ್ತಿರುವ ತಂತ್ರಜ್ಞಾನ ಅನ್ನೋದು ಸರ್ಕಾರ ಅರಿತುಕೊಂಡಿದೆ. ಹೀಗಾಗಿ ಈ ತಂತ್ರಜ್ಞಾನ ಹಾಗೂ ಸಂಪೂರ್ಣ ಜಾಲವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತದೆ. ಇದಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಳ್ಳಲಿದೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ತಂತ್ರಜ್ಞಾನವೇ ಪ್ರಧಾನ. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅದರ ಕುರಿತು ಸಂಪೂರ್ಣ ಮಾಹಿತಿಯನ್ನು ಕಲೆಹಾಕಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Karnataka Bitcoin Scam| ಮಾರ್ಚ್, ಏಪ್ರಿಲ್‌ನಲ್ಲೇ ಇಡಿ, ಇಂಟರ್‌ ಪೋಲ್‌ಗೆ ದೂರು!

ಕ್ರಿಪ್ಟೋಕರೆನ್ಸಿಯನ್ನು ಭಾರತದಲ್ಲಿ ಬಳಕೆ ಹಾಗೂ ಇದರಿಂದ ಎದುರಾಗುವ ಸಮಸ್ಯೆ ಪರಿಹರಿಸಲು ಇದುವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ  ಮುಂಬರುವ ಸವಾಲುಗಳನ್ನು ಎದುರಿಸಲು ಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಇದಕ್ಕಾಗಿ ತಜ್ಞರು, ಮಧ್ಯಸ್ಥಗಾರರ ಜೊತೆಗ ನಿಕಟ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆ ಎಂದು ಸಭೆಯಲ್ಲಿ ಹೇಳಲಾಗಿದೆ. 

ಕ್ರಿಪ್ಟೋಕರೆನ್ಸಿ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ದೇಶದ ಗಡಿ ದಾಟುವ ಕಾರಣ ಒಂದು ದೇಶ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇತರ ದೇಶಗಳೊಂದಿಗೆ ಪಾಲುದಾರಿಕೆ ಅಗತ್ಯವಿದೆ. ಒಗ್ಗಟ್ಟಾಗಿ ಕಾರ್ಯತಂತ್ರಗಳನ್ನು ಮಾಡಬೇಕಿದೆ. ಈ ಮೂಲಕ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಹಾಗೂ ಮುಂಬರವು ಸವಾಲುಗಳನ್ನು ಎದುರಿಸಲು ಸಾಧ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

Bitcoin Scam: ಬಿಟ್ ಕಾಯಿನ್ ಹಗರಣ ಸಿಎಂ ಬಲಿ ಪಡೆಯುತ್ತೆ: ಶಾಸಕ ಸ್ಫೋಟಕ ಹೇಳಿಕೆ

click me!