ಜನವರಿ 22 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 2 ಗಂಟೆಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಹಾಗಾದ್ರೆ ಪಿವಿಆರ್ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ಬೆಲೆ ಎಷ್ಟು.. ಇಲ್ಲಿದೆ ವಿವರ..
ನವದೆಹಲಿ (ಜನವರಿ 20, 2024): ಬರುವ ಸೋಮವಾರ ಅಂದರೆ, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ. ಈ ಭವ್ಯ ರಾಮ ಮಂದಿರದ ಲೋಕಾರ್ಪಣೆಯನ್ನು ನೀವು ಟಿವಿಗಳಲ್ಲಿ ಲೈವ್ ನೋಡೋದು ಮಾತ್ರವಲ್ಲದೆ, ಮಲ್ಟಿಪ್ಲೆಕ್ಸ್ ಅಂದರೆ ಸಿನಿಮಾ ಪರದೆಗಳಲ್ಲೂ ನೋಡಬಹುದಾಗಿದೆ.
ಹೌದು, ಮಲ್ಟಿಪ್ಲೆಕ್ಸ್ ಚೈನ್ PVR INOX Ltd ಜನವರಿ 22, 2024 ರಂದು ತನ್ನ ಸಿನಿಮಾ ಪರದೆಗಳಲ್ಲಿ ರಾಮಮಂದಿರದಲ್ಲಿ ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡಲು ನಿರ್ಧರಿಸಿದೆ. ಪಿವಿಆರ್ ಐನಾಕ್ಸ್ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದು, 70 ಕ್ಕೂ ಹೆಚ್ಚು ಭಾರತದ ನಗರಗಳ 160 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಮಹತ್ವದ ಸಮಾರಂಭವನ್ನು ನೇರ ಪ್ರಸಾರ ಮಾಡಲು ನಿರ್ಧರಿಸಿದೆ.
ಅಯೋಧ್ಯೆಯಲ್ಲಿ ಕನ್ನಡದ ಕಲರವ: ರಾಮನೂರಿನಲ್ಲಿ ಹಲವು ಕನ್ನಡಿಗರ ಸೇವೆ
ಜನವರಿ 22 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 2 ಗಂಟೆಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಇನ್ನು ಮಲ್ಟಿಪ್ಲೆಕ್ಸ್‌ಗೆ ಉಚಿತವಾಗಿ ಹೋಗಿ ಪ್ರಾಣ ಪ್ರತಿಷ್ಠಾಪನೆ ನೋಡ್ಬೋದು ಅಂದ್ಕೊಂಡ್ರಾ? ಇಲ್ಲ, ಟಿಕೆಟ್ ಬೆಲೆ 100 ರೂ. ಎಂದು ನಿಗದಿಪಡಿಸಲಾಗಿದೆ. ಇದರ ಜತೆಗೆ, ಎಲ್ಲಾ ವರ್ಗದ ಸೀಟುಗಳಿಗೆ ಅನ್ವಯವಾಗುವ ತೆರಿಗೆಯನ್ನೂ ನೀಡಬೇಕು.
Join us for a momentous occasion! Watch the live screening of the Ayodhya Ram Mandir Inauguration at PVR and INOX on January 22nd, 2024.
Secure your seat for this monumental event and enjoy a complimentary popcorn combo with every ticket. *T&C applies.
Book now:… pic.twitter.com/UQaWTEeFME
ಇನ್ನು, 100 ರೂ. ಟಿಕೆಟ್‌ನಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಸ್ಕ್ರೀನಿಂಗ್ ಮಾತ್ರವಲ್ಲದೆ, ಪಾಪ್‌ಕಾರ್ನ್ ಮತ್ತು ಪಾನೀಯ ಕಾಂಬೋವನ್ನು ಸಹ ಪಡೆಯಬಹುದು ಎಂದು ತಿಳಿದುಬಂದಿದೆ. ಸ್ಕ್ರೀನಿಂಗ್‌ಗಾಗಿ ಟಿಕೆಟ್‌ಗಳನ್ನು ಪಿವಿಆರ್ ಐನಾಕ್ಸ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಬುಕ್ ಮಾಡಬಹುದು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾನಕ್ಕೂ ಮುನ್ನ ಕಟ್ಟುನಿಟ್ಟಾದ ಆಚರಣೆ; ಹಲವು ದೇಗುಲಗಳಿಗೆ ಭೇಟಿ ನೀಡ್ತಿರೋ ಮೋದಿ..
ಈ ಸಂಬಂಧ ಮಾಹಿತಿ ನೀಡಿದ ಪಿವಿಆರ್ ಐನಾಕ್ಸ್ ಸಹ-ಸಿಇಒ ಗೌತಮ್ ದತ್ತಾ, “ಇಂತಹ ಭವ್ಯವಾದ ಮತ್ತು ಐತಿಹಾಸಿಕ ಸಂದರ್ಭಗಳನ್ನು ಭವ್ಯವಾದ ರೀತಿಯಲ್ಲಿ ಅನುಭವಿಸಬೇಕು. ದೇಶದಾದ್ಯಂತ ಸಾಮೂಹಿಕ ಆಚರಣೆಯ ಭಾವನೆಗಳಿಗೆ ಸಿನಿಮಾ ಸ್ಕ್ರೀನ್‌ಗಳು ಜೀವ ತುಂಬಲಿವೆ. ಈ ಆಚರಣೆಯೊಂದಿಗೆ ಭಕ್ತರನ್ನು ನಿಜವಾದ ಅನನ್ಯ ರೀತಿಯಲ್ಲಿ ಸಂಪರ್ಕಿಸಲು ಸಾಧ್ಯವಾಗುವುದು ನಮಗೆ ಒಂದು ಸೌಭಾಗ್ಯವಾಗಿದೆ ಎಂದಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ದೂರದರ್ಶನದ ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತವೆ. ಇತರ ಸುದ್ದಿ ಚಾನೆಲ್‌ಗಳು ದೂರದರ್ಶನ ಫೀಡ್ ಅನ್ನು ತಮ್ಮ ಚಾನಲ್‌ಗಳು ಮತ್ತು ಯೂಟ್ಯೂಬ್ ಸೇರಿದಂತೆ ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶಿಸುತ್ತವೆ.
ದೂರದರ್ಶನ 4K ತಂತ್ರಜ್ಞಾನದಲ್ಲಿ ನೇರ ಪ್ರಸಾರವನ್ನು ಒದಗಿಸಲು ರಾಮ ಮಂದಿರ ಸಂಕೀರ್ಣ ಸೇರಿದಂತೆ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ 40 ಕ್ಯಾಮೆರಾಗಳನ್ನು ಅಳವಡಿಸಿದೆ. ಸರಯೂ ಘಾಟ್ ಬಳಿಯ ರಾಮ್ ಕಿ ಪೈಡಿ ಮತ್ತು ಕುಬೇರ್ ತಿಲಾದಲ್ಲಿರುವ ಜಟಾಯು ಪ್ರತಿಮೆಯಿಂದ ಲೈವ್ ದೃಶ್ಯಗಳನ್ನು ತೋರಿಸಲಾಗುತ್ತದೆ.
ಟಿವಿ ಚಾನೆಲ್‌ಗಳ ಹೊರತಾಗಿ, ನಗರದಾದ್ಯಂತ ದೊಡ್ಡ ಮತ್ತು ಸಣ್ಣ ಪಟ್ಟಣಗಳಲ್ಲಿ ದೊಡ್ಡ ಪರದೆಯ ಮೇಲೆ ಸಮಾರಂಭವನ್ನು ತೋರಿಸಲಾಗುತ್ತದೆ. ವಿವಿಧ ಸಂಸ್ಥೆಗಳು ಇಂತಹ ಪ್ರದರ್ಶನಗಳನ್ನು ಆಯೋಜಿಸಿವೆ. ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಟಿವಿಗಳಲ್ಲಿ ಈವೆಂಟ್ ಅನ್ನು ರೈಲ್ವೇ ಪ್ರದರ್ಶಿಸುತ್ತದೆ. ಈವೆಂಟ್ ಅನ್ನು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ದೊಡ್ಡ ಜಾಹೀರಾತು ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಭಾರತೀಯ ರಾಯಭಾರಿ ಕಚೇರಿಗಳು ಮತ್ತು ವಿಶ್ವಾದ್ಯಂತ ದೂತಾವಾಸಗಳಲ್ಲಿ ಪ್ರಸಾರವಾಗಲಿದೆ.
ಜನವರಿ 22 ರಂದು ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ರಾಮಮಂದಿರ ಸಂಕೀರ್ಣವು ಜನವರಿ 23 ರಿಂದ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.