ಮೋದಿ ಮನ್ ಕೀ ಬಾತ್ ಐಡಿಯಾ: ಬಾಳೆ ದಿಂಡಿನಿಂದ ರಸವಾಯ್ತು ಬದುಕು!

By Govindaraj S  |  First Published Aug 11, 2023, 6:44 PM IST

ಪ್ರಧಾನಿ ನರೇಂದ್ರ ಮೋದಿ ಅವರ  ಮನ್ ಕಿ ಬಾತ್ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ.  ಮನ್ ಕೀ ಬಾತ್ ನಿಂದಲೇ  ಪ್ರೇರಣೆಗೊಂಡ ಚಾಮರಾಜನಗರದ ಮಹಿಳೆಯೊಬ್ಬರು ಕಸದಿಂದ ರಸ ಮಾಡಿದ್ದಾರೆ. 


ಪುಟ್ಟರಾಜು, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.11): ಪ್ರಧಾನಿ ನರೇಂದ್ರ ಮೋದಿ ಅವರ  ಮನ್ ಕಿ ಬಾತ್ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ.  ಮನ್ ಕೀ ಬಾತ್ ನಿಂದಲೇ  ಪ್ರೇರಣೆಗೊಂಡ ಚಾಮರಾಜನಗರದ ಮಹಿಳೆಯೊಬ್ಬರು ಕಸದಿಂದ ರಸ ಮಾಡಿದ್ದಾರೆ. ಯಶಸ್ವಿ ಉದ್ಯಮಿಯಾಗುವತ್ತಾ ಮುಂದಡಿ ಇಟ್ಟಿದ್ದಾರೆ. ಅಷ್ಟಕ್ಕು ಅವರು ಆರಂಭಿಸಿರುವ ಉದ್ಯಮವಾದರೂ ಯಾವ್ದು? ಇವರ ಯಶಸ್ಸಿನ ಸಿಕ್ರೆಟ್ ಅನ್ನೋದು ಏನು ಅಂತಾ ತಿಳಿದರೆ ನಿಜಕ್ಕು ಅಚ್ಚರಿಯಾಗುತ್ತದೆ.

Tap to resize

Latest Videos

undefined

ಬಾಳೆ ದಿಂಡಿನಿಂದ ರಸವಾಯ್ತು ಬದುಕು: ಹೌದು! ರೈತರು ಬಾಳೆಗೊನೆ ಕೊಯ್ದು ನಂತರ ಬಾಳೆ ದಿಂಡು ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಯೆಸ್ ಇದು ಯುವ ಉದ್ಯಮಿಯೊಬ್ಬರ ಯಶೋ ಗಾಥೆ ಅಂದ್ರೆ ಅತಿಶಯೋಕ್ತಿಯಲ್ಲ. ಚಾಮರಾಜಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿ ಗ್ರಾಮದ ವರ್ಷಾ ಎಂ.ಟೆಕ್ ಪದವೀಧರೆಯಾದರು ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. 

ದಾವಣಗೆರೆಯಲ್ಲಿ ಚುರುಕುಗೊಂಡಿದೆ ಬಿಜೆಪಿ ಭ್ರಷ್ಟಾಚಾರದ ತನಿಖೆ: ದಿನೇಶ್.ಕೆ.ಶೆಟ್ಟಿ

ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಛಲ ಹೊಂದಿದ್ದ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ.ಸ್ವ ಉದ್ಯಮ  ಪ್ರಾರಂಭಿಸಬೇಕು, ತಮ್ಮ ಕೈಲಾದಷ್ಟು ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಕನಸು ಹೊತ್ತಿದ್ದ  ವರ್ಷಾ ಅವರು ಯೂ ಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದ ವಿಚಾರವೊಂದು  ಗಮನ ಸೆಳೆದಿದೆ.  ಅನುಪಯುಕ್ತ ಬಾಳೆ ದಿಂಡಿನಿಂದ ಹಲವು ರೀತಿಯ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು. 

ಉದಾಹರಣೆ ಸಹಿತ ಹೇಳಿದ್ದ  ಮೋದಿ ಅವರ ಮಾತಿನಿಂದ ಪ್ರೇರಣೆಗೊಂಡ ವರ್ಷಾ ತಾವೇಕೆ ಪ್ರಯತ್ನಿಸಿಸಬಾರದು ಎಂದುಕೊಂಡು ಮತ್ತೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದಾಗ  ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿ ನೋಡಿದ್ದಾರೆ. ಬಳಿಕ ಕೊಯಮತ್ತೂರಿನಿಂದ  3 ಲಕ್ಷ ರೂಪಾಯಿಗಳಿಗೆ  ಯಂತ್ರೋಪಕರಣಗಳನ್ನ ಖರೀದಿಸಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ  ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ. 



ಪ್ರಾರಂಭದಲ್ಲಿ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್ಕಾರ್ಟ್, ಅಮೆಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಬಾಳೆ ದಿಂಡಿನಲ್ಲಿರುವ  ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದರಿಂದ ಅದನ್ನು ಬೀಸಾಡದೆ ರಾಸಾಯನಿಕ ಗೊಬ್ಬರದ ಬದಲು  ಬಾಳೆ ದಿಂಡಿನ ರಸ ಹಾಗೂ  ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ವೇಸ್ಟ್ ನಿಂದ   ಸಾವಯವ ಗೊಬ್ಬರ ತಯಾರಿಸಿ ಅದನ್ನೆ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ. 

ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದ್ದು,  ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರ ಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಬಹುದು ಎಂಬ ಆಶಯವನ್ನೂ ಅವರು ಹೊಂದಿದ್ದಾರೆ.ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ  ಪತಿ ಶ್ರೀಕಂಠಸ್ವಾಮಿ  ಅವರು ರಜಾ ದಿನಗಳಲ್ಲಿ  ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿ ತಮ್ಮ ಪತ್ನಿಯ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ. 

ಈ ದಂಪತಿ ಸುತ್ತಮುತ್ತಲಿನ ಜಮೀನಿಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೇ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ 8 ರಿಂದ 10 ರೂಪಾಯಿಗೆ ಖರೀದಿಸಲು ಆಲೋಚಿಸಿದ್ದಾರೆ, ಇದರಿಂದ ಸುತ್ತಮುತ್ತಲಿನ  ರೈತರಿಗು ಲಾಭವಾಗಲಿದೆ ಎಂಬುದು ಅವರ ಆಶಯವಾಗಿದೆ. ಒಟ್ಟಾರೆ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ವಿದ್ಯಾವಂತ ಮಹಿಳೆಯೊಬ್ಬರು ಯಶಸ್ವಿ ಉದ್ಯಮಿಯಾಗಲು ನಿಜಕ್ಕೂ ಪ್ರೇರಣೆ ನೀಡಿದೆ ಎಂದರೆ ತಪ್ಪಾಗಲಾರದು.

ಇನ್ನೂ ಕೋವಿಡ್ ಸಮಯದಲ್ಲಿ ಆರಂಭವಾದ ಈ ಉದ್ಯಮ ಇಂದು ಬೆಳೆದು ನಿಂತಿದೆ.ಆರಂಭದಲ್ಲಿ ಐದು ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದ  ವರ್ಷಾ ಇದೀಗ 15 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ. ಇನ್ನೂ ತಯಾರು ಮಾಡುವ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.ಇದರಿಂದ ಬೇರೆ ಕಡೆಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ಬರ್ತಿದೆ.ಸಣ್ಣದಾಗಿ ಆರಂಭಗೊಂಡ ಉದ್ಯಮ ಬೆಳೆಯುತ್ತಾ ಸಾಗಿದೆ. ಮುಂದೆಯೂ ಕೂಡ ಸುತ್ತಮುತ್ತಲಿನ ಗ್ರಾಮದ ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡಬೇಕೆಂಬುದು ವರ್ಷಾ ಅವರ ಕನಸಾಗಿದೆ.ಇದಕ್ಕೆ ಅವರ ಕುಟುಂಬ ಕೂಡ ಸಾಥ್ ಕೊಡ್ತಿದೆ.

ರೈತ​ರು ಸಾಲಮನ್ನಾ ಮನೋ​ಭಾ​ವನೆ ಬಿಡ​ಬೇಕು: ಶಾಸಕ ಇಕ್ಬಾಲ್‌ ಹುಸೇನ್‌

ಒಟ್ನಲ್ಲಿ ಯೂ ಟ್ಯೂಬ್ ನಲ್ಲಿದ್ದ ಮೋದಿ ಅವರ ಕಾರ್ಯಕ್ರಮದ ಮನ್ ಕಿ ಬಾತ್  ಐಡಿಯಾ ಈ ಮಹಿಳೆಗೆ ಉದ್ಯಮಿಯಾಗಿ ಬೆಳೆಯುವ ಆಸೆ ಚಿಗುರುಡೆಸಿತ್ತು.ಈ ಆಸೆ ಕನಸು ಬೆಳೆದು ಇಂದು ಅನೇಕ ಮಹಿಳೆಯರಿಗೆ ಉದ್ಯೋಗದ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಮಾದರಿ ಈ ವರ್ಷಾ.

click me!