ಝಿರೋದಾದಿಂದಲೇ ಹೀರೋ ಆದ ವ್ಯಾಪಾರಸ್ಥ… ಪಾಕೆಟ್ ಮನಿ ಕಲಿಸಿತು ಲೆಕ್ಕಾಚಾರ!

By Suvarna News  |  First Published Feb 22, 2024, 1:57 PM IST

ಚಿಕ್ಕ ವಯಸ್ಸಿನಲ್ಲಿ ಕಲಿತ ವಿದ್ಯೆ ಹಾಗೂ ಆಸಕ್ತಿ ಮುಂದೆ ಯಶಸ್ಸಿಗೆ ಕಾರಣವಾಗುತ್ತೆ. ವ್ಯಾಪಾರ ಮಾಡಲು ಕೈತುಂಬ ಹಣಬೇಕಾಗಿಲ್ಲ, ಶ್ರಮ, ಜಾಣತನ ಅಗತ್ಯ. ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿ ಬುಡ ಅಲ್ಲಾಡಿಸಿದ ಈ ವ್ಯಕ್ತಿ ಎಲ್ಲರಿಗೂ ಮಾದರಿ. 
 


ಷೇರು ಮಾರುಕಟ್ಟೆ ಒಂದು ದೊಡ್ಡ ಸಮುದ್ರ. ಅದ್ರಲ್ಲಿ ಇಳಿದಾಗ ಮಾತ್ರ ಅದ್ರ ಆಳ ಹಾಗೂ ಅಪಾಯದ ಬಗ್ಗೆ ಅರಿವು ಮೂಡೋದು. ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಜ್ಞಾನ ಒಂದೇ ದಿನಕ್ಕೆ ಬರುವಂತಹದ್ದಲ್ಲ. ಅದ್ರಲ್ಲಿ ವ್ಯಕ್ತಿ ಅನುಭವ ಹೊಂದಿರಬೇಕು, ಪಳಗಿರಬೇಕು. ಇದಕ್ಕೆ ನಿತಿನ್ ಕಾಮತ್ ನನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬಹುದು. ಹದಿನೇಳನೇ ವಯಸ್ಸಿನಲ್ಲಿ ಕೈಗೆ ಹಣ ಬಂದ್ರೆ ಅದನ್ನು ಹೇಗೆ ಖರ್ಚು ಮಾಡೋದು ಅಂತಾ ಆಲೋಚನೆ ಮಾಡುವವರೇ ಹೆಚ್ಚು. ಆದ್ರೆ ನಿತಿನ್ ಕಾಮತ್ ಹದಿಹರೆಯದಲ್ಲೇ ವ್ಯಾಪಾರದಲ್ಲಿ ಆಸಕ್ತಿ ತೋರಿದ್ದರು. ತಮ್ಮ ಹದಿನೇಳನೆ ವಯಸ್ಸಿನಲ್ಲೇ ತಂದೆ ಜೊತೆ ಸೇರಿ ಷೇರು ಖಾತೆ ನಿರ್ವಹಿಸುವುದನ್ನು ಕಲಿತಿದ್ದರು. ಚಿಕ್ಕ ವಯಸ್ಸಿನ ಕಲಿಕೆ ಈಗ ಅವರನ್ನು 30,000 ಕೋಟಿ ಮೌಲ್ಯದ ಕಂಪನಿ ಒಡೆಯನನ್ನಾಗಿ ಮಾಡಿದೆ. ಯಾರ ಬಳಿಯೂ ಹಣಕ್ಕೆ ಕೈ ಚಾಚದೆ ವ್ಯಾಪಾರ ಶುರು ಮಾಡಿದ ನಿತಿನ್ ಕಾಮತ್ ಈಗ ಷೇರು ಮಾರುಕಟ್ಟೆಯಲ್ಲಿ ದಿಗ್ಗಜ ಕಂಪನಿ ಕಟ್ಟಿ ಬೆಳೆಸಿದ್ದಾರೆ. ಕೆಲವೇ ವರ್ಷಗಳಲ್ಲಿ ಕಂಪನಿಯು ಷೇರು ಮಾರುಕಟ್ಟೆಯ ಪ್ರಬಲ ಬ್ರೋಕರೇಜ್ ಸಂಸ್ಥೆಗಳ ಬೇರುಗಳನ್ನು ಅಲ್ಲಾಡಿಸಿದೆ.

ಅಕ್ಟೋಬರ್ 5, 1979 ರಂದು ಜನಿಸಿದ ನಿತಿನ್ ಕಾಮತ್ (Nitin Kamat) ಗೆ 44 ವರ್ಷ. ನಿತಿನ್ ಕಾಮತ್, ಷೇರು (Share) ಬ್ರೋಕೇಜ್ ಝೆರೋಧಾ ಕಂಪನಿ ಮಾಲೀಕ. 2001 ರಲ್ಲಿ ನಿತಿನ್ ಕಾಮತ್  ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಲು  ಶುರು ಮಾಡಿದ್ದರು. ಆಗ ಅವರಿಗೆ  8000 ರೂಪಾಯಿ ಸಂಬಳ ಬರ್ತಿತ್ತು. ಬಂದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡ್ತಿದ್ದ ನಿತಿನ್ ಕಾಮತ್, 2004-05ರಲ್ಲಿ ಕೆಲಸ ಬಿಟ್ಟು ಟ್ರೇಡಿಂಗ್ ಶುರು ಮಾಡಿದ್ದರು. ಅವರ ಟ್ರೇಡಿಂಗ್ ನೋಡಿದ ವ್ಯಕ್ತಿಯೊಬ್ಬರು, ಹಣ ನೀಡಿ, ತನ್ನ ಖಾತೆಯನ್ನೂ ನಿರ್ವಹಿಸುವಂತೆ ನಿತಿನ್ ಕಾಮತ್ ಗೆ ಹೇಳಿದ್ದರು. 

Tap to resize

Latest Videos

undefined

ಏನಿದು ನೀಲಿ ಆಧಾರ್ ಕಾರ್ಡ್? ಇದನ್ನು ಯಾರಿಗಾಗಿ, ಹೇಗೆ ಮಾಡಿಸುವುದು?

2008 ರ ಆರ್ಥಿಕ ಹಿಂಜರಿತ ದೊಡ್ಡ ಹೊಡೆತ ನೀಡಿತ್ತು. ನಿತಿನ್ ಕಾಮತ್ ಗೆ 5 ಲಕ್ಷ ರೂಪಾಯಿ ನಷ್ಟವಾಗಿತ್ತು. ಅವರ ಬಳಿ ಇದ್ದ ಗ್ರಾಹಕರಿಗೂ ನಷ್ಟವಾಗಿತ್ತು. ಈ ಮಧ್ಯೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆರಂಭವಾಗಿದ್ದು, ಕನಸನ್ನು ಮತ್ತೆ ಚಿಗುರಿಸಿತ್ತು. ಆದ್ರೆ ಈ ಸಮಯದಲ್ಲಿ ಬ್ರೋಕರ್ ಗಳ ಹೆಚ್ಚಿನ ಶುಲ್ಕ ಹೂಡಿಕೆದಾರರಿಗೆ ಹೊಣೆಯಾಗಿತ್ತು. ಇದನ್ನು ಗಮನಿಸಿದ ನಿತಿನ್ ಕಾಮತ್, ಡಿಸ್ಕೌಂಟ್ ಬ್ರೋಕಿಂಗ್ ಸಂಸ್ಥೆ  ಸ್ಥಾಪಿಸಲು ನಿರ್ಧರಿಸಿದರು. ಝೆರೋಡಾದಂತಹ ಆಲದ ಮರದ ಬೀಜ ಬಿತ್ತಿತ್ತು ಇದೇ ಸಮಯದಲ್ಲಿ. 

ಸಹೋದರ ಹಾಗೂ ಕೆಲವರ ಜೊತೆ ಸೇರಿ ನಿತಿನ್ ಕಾಮರ್, ಆಗಸ್ಟ್ 15, 2010ರಲ್ಲಿ ಝೆರೋಡಾ (Zerodha) ಶುರು ಮಾಡಿದ್ರು. ಆರಂಭದಲ್ಲಿ ಇವರ ಬಳಿ ಹಣ ಇರಲಿಲ್ಲ. ಹಾಗಾಗಿ ತಾವೇ ಸೇಲ್ಸ್ ಮೆನ್ ರೂಪದಲ್ಲಿ ಫೋನ್ ಕರೆಗಳನ್ನು ಮಾಡ್ತಿದ್ದರು ನಿತಿನ್ ಕಾಮತ್.  

ನಿತಿನ್ ಕಾಮತ್ ಉದ್ದೇಶ ಜನರಿಗೆ ರಿಯಾಯಿತಿ ಬ್ರೋಕೇಜ್ ನೀಡುವುದಾಗಿತ್ತು. ಆರಂಭದಲ್ಲಿ ವ್ಯಾಪಾರಿಗಳ ಸಂಖ್ಯೆ ಕಡಿಮೆ ಇದ್ರೂ ದಿನ ಕಳೆದಂತೆ ಸಂಖ್ಯೆ ಹೆಚ್ಚಾಯ್ತು. ಕಂಪನಿ 2015 ರಲ್ಲಿ ವ್ಯಾಪಾರ ವೇದಿಕೆ ಕೈಟ್ ಅನ್ನು ಪ್ರಾರಂಭಿಸಿತು. ಅದರ ನಂತ್ರ ಬಳಕೆದಾರರು ಅತ್ಯಂತ ವೇಗವಾಗಿ ಸೇರಿಕೊಂಡರು. 2016 ರ ಹೊತ್ತಿಗೆ, ಕಂಪನಿಯು 60,000 ಖಾತೆಗಳನ್ನು ಹೊಂದಿತ್ತು. ಈಗ ಇದು ಕೇವಲ ವ್ಯಾಪಾರ ವೇದಿಕೆಯಾಗಿರದೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಸಾಧನವಾಗಿಯೂ ಮಾರ್ಪಟ್ಟಿದೆ.

ಅಂಬಾನಿ, ಅದಾನಿ, ಟಾಟಾ ಬಿಸಿನೆಸ್‌ಗೆ ತೀವ್ರ ಪೈಪೋಟಿ; ಭಾರತದಲ್ಲಿ ಅತಿ ದೊಡ್ಡ ಬ್ರ್ಯಾಂಡ್‌ನಿಂದ ಡೈಮಂಡ್ ಬಿಸಿನೆಸ್

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ 545 ನೇ ಸ್ಥಾನದಲ್ಲಿದ್ದಾರೆ. ಫೆಬ್ರವರಿ 21, 2024 ರವರೆಗಿನ ಫೋರ್ಬ್ಸ್‌ನ ನೆಟ್ ವರ್ತ್ ರಿಯಲ್ ಟೈಮ್ ಪಟ್ಟಿಯ ಪ್ರಕಾರ, ನಿತಿನ್ ಕಾಮತ್ ಅವರ ನಿವ್ವಳ ಮೌಲ್ಯ 5.4 ಬಿಲಿಯನ್ ಡಾಲರ್ ಆಗಿದೆ. 

click me!