
ದಿನದಲ್ಲಿ ಒಂದೆರಡಾದ್ರೂ ಬ್ಯಾಂಕ್ ಕರೆಗಳನ್ನು ನೀವು ಸ್ವೀಕರಿಸುತ್ತೀರಿ. ಎಷ್ಟೇ ನಂಬರ್ ಬ್ಲಾಕ್ ಮಾಡಿದ್ರೂ ಇನ್ನೊಂದು ನಂಬರ್ ನಿಂದ ಕರೆ ಬಂದಿರುತ್ತದೆ. ನಿಮಗೆ ಕ್ರೆಡಿಟ್ ಕಾರ್ಡ್ ಅಗತ್ಯವಿದ್ಯಾ, ಅದು ಇದು ಆಫರ್ ಇದೆ ಅಂತ ಸಿಬ್ಬಂದಿ ಕರೆ ಮಾಡ್ತಿರುತ್ತಾರೆ. ಇಷ್ಟೊಂದು ಕರೆ ಮಾಡುವ ಇವರಿಗೆ ಲಾಭವಾಗುತ್ತಾ ಎಂಬ ಆಲೋಚನೆ ಸಾಮಾನ್ಯ ಜನರಿಗೆ ಬರೋದಿದೆ. ಭಾರತದಲ್ಲಿ ಡೆಬಿಟ್ ಕಾರ್ಡ್ ಜೊತೆ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಜನರು ಆನ್ಲೈನ್ ನಲ್ಲಿ ವ್ಯವಹಾರ ನಡೆಸುವ ವೇಳೆ ಕ್ರೆಡಿಟ್ ಕಾರ್ಡ್ ಹೆಚ್ಚು ಬಳಕೆ ಮಾಡ್ತಾರೆ. ಈ ವರ್ಷ ಜನವರಿಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದಲ್ಲಿ ಸುಮಾರು 10 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಸಕ್ರಿಯವಾಗಿವೆ. ಒಬ್ಬರ ಬಳಿ ಒಂದೆರಡು ಕ್ರೆಡಿಟ್ ಕಾರ್ಡ್ ಮಾಮೂಲಿ ಎನ್ನುವಂತಾಗಿದೆ. ಕ್ರೆಡಿಟ್ ಕಾರ್ಡ್ ಗಳಲ್ಲಿ ಏನೆಲ್ಲ ಆಫರ್ ಸಿಗ್ತಿದೆ, ಲಿಮಿಟ್ ಎಷ್ಟು ಎಂದು ಜನರು ಚೆಕ್ ಮಾಡ್ತಿರುತ್ತಾರೆ. ಹೊಸ ಆಫರ್ ಅಥವಾ ಲಿಮಿಟ್ ಹೆಚ್ಚಿಸುವ ಆಫರ್ ಇದ್ದಾಗ ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಬದಲಾಗ್ತಾರೆ. ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಹಳೆ ಕಾರ್ಡ್ ರದ್ದುಗೊಳಿಸುವವರ ಸಂಖ್ಯೆ ಕೂಡ ಸಾಕಷ್ಟಿದೆ.
ಆನ್ಲೈನ್ (Online) ವ್ಯವಹಾರ ಹೆಚ್ಚಾದಂತೆ ಆನ್ಲೈನ್ ನಲ್ಲಿ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಬರಿ ಬ್ಯಾಂಕ್ ನಿಂದ ಮಾತ್ರವಲ್ಲ ಹ್ಯಾಕರ್ಸ್ (Hackers) , ಮೋಸಕಾರರಿಂದಲೂ ಕರೆ ಬರ್ತಿರುತ್ತದೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಲು ನಾವು ಸಹಾಯ ಮಾಡ್ತೇವೆ ಎಂದು ಕರೆ ಮಾಡುವ ಜನರು ನಮ್ಮೆಲ್ಲ ಖಾಸಗಿ ಮಾಹಿತಿ ಕದ್ದು, ಖಾತೆ ಖಾಲಿ ಮಾಡ್ತಾರೆ.
ಅಂಬಾನಿ, ಅದಾನಿ, ಟಾಟಾ ಬಿಸಿನೆಸ್‌ಗೆ ತೀವ್ರ ಪೈಪೋಟಿ; ಭಾರತದಲ್ಲಿ ಅತಿ ದೊಡ್ಡ ಬ್ರ್ಯಾಂಡ್‌ನಿಂದ ಡೈಮಂಡ್ ಬಿಸಿನೆಸ್
ಕ್ರೆಡಿಟ್ (Credit) ಕಾರ್ಡ್ ಪಡೆಯುವಾಗ ಮಾತ್ರವಲ್ಲ ಕ್ರೆಡಿಟ್ ಕಾರ್ಡ್ ರದ್ದು ಮಾಡುವಾಗ್ಲೂ ನೀವು ಕೆಲವೊಂದು ಎಚ್ಚರಿಕೆವಹಿಸಬೇಕು. ಕ್ರೆಡಿಟ್ ಕಾರ್ಡ್ ನ ಎಲ್ಲ ಬಿಲ್ ಪಾವತಿ ಮಾಡಿದ ನಂತ್ರವೇ ಕಾರ್ಡ್ ರದ್ದು ಮಾಡಬೇಕು. ಮೂರನೇ ವ್ಯಕ್ತಿ ಸಹಾಯಪಡೆಯುವ ಬದಲು ಕಾರ್ಡ್ ಹಿಂಭಾಗದಲ್ಲಿರುವ ಸಹಾಯವಾಣಿಗೆ ನೀವು ಕರೆ ಮಾಡುವ ಮೂಲಕ ಅವರ ನೆರವು ಪಡೆಯಬೇಕು.
ಕಸ್ಟಮರ್ ಕೇರ್ ಸಿಬ್ಬಂದಿ ನಿಮ್ಮ ವಿನಂತಿಯನ್ನು ಸ್ವೀಕರಿಸಿ, ನಿಮ್ಮ ಮಾಹಿತಿಯನ್ನು ಸಿಸ್ಟಂಗೆ ಫೀಡ್ ಮಾಡ್ತಾರೆ. ಆ ತಕ್ಷಣ ನಿಮಗೆ ಮಾಹಿತಿ ಬರುತ್ತದೆ. ಕೆಲ ಬಾರಿ ಕಸ್ಟಮರ್ ಕೇರ್ ಸಿಬ್ಬಂದಿ ಮೇಲ್ ಮೂಲಕ ಕಾರ್ಡ್ ರದ್ದಿಗೆ ವಿನಂತಿಸುವಂತೆ ಸೂಚನೆ ಮಾಡುತ್ತಾರೆ. ಈ ಸಮಯದಲ್ಲಿ ನೀವು ಕಾರ್ಡ್ ಹಿಂದೆ ಇರುವ ಮೇಲ್ ಐಡಿಗೆ ಮೇಲ್ ಮಾಡಬೇಕಾಗುತ್ತದೆ. ನಿಮ್ಮ ಮೇಲ್ ಸ್ವೀಕರಿಸಿದ ತಕ್ಷಣ ನಿಮಗೆ ಮೇಲ್ ಬರುತ್ತದೆ. ನಿಮ್ಮ ಕಾರ್ಡ್ ರದ್ದತಿ ಪ್ರಕ್ರಿಯೆ ಶುರುವಾಗಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು.
ಬೆಳಗ್ಗೆ ಕೆಲಸ ರಾತ್ರಿ ಅವಲಕ್ಕಿ ವ್ಯಾಪಾರ ಮಾಡ್ತಾ ಸಕ್ಸಸ್ ಆದ ಸ್ನೇಹಿತರು
ಇದನ್ನೂ ನೆನಪಿಡಿ : ನೀವು ಕ್ರೆಡಿಟ್ ಕಾರ್ಡ್ ರದ್ದು ಮಾಡಲು ಕಸ್ಟಮರ್ ಕೇರ್ ಮೊರೆ ಹೋಗಿದ್ದರೆ ಇಲ್ಲವೆ ಮೇಲ್ ಮೂಲಕ ವ್ಯವಹಾರ ನಡೆಸುತ್ತಿದ್ದರೂ ನೀವು ಕೆಲ ವಿಷ್ಯ ಗಮನದಲ್ಲಿ ಇಡಬೇಕು. ಬ್ಯಾಂಕ್ ಸಿಬ್ಬಂದಿಗೆ ಎಲ್ಲ ಮಾಹಿತಿಯನ್ನು ನೀವು ನೀಡಬಾರದು. ನಿಮ್ಮ ಹೆಸರು, ಜನನ ದಿನಾಂಕವಲ್ಲದೆ ಕ್ರೆಡಿಟ್ ಕಾರ್ಡ್ ನ ನಾಲ್ಕು ಕೊನೆಯ ನಂಬರ್ ಗಳನ್ನು ಮಾತ್ರ ನೀವು ಸಿಬ್ಬಂದಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಸಿವಿವಿ ನಂಬರ್ ನೀಡಬೇಡಿ. ಅವರು ಕೇಳಿದ್ರೆ ಅದನ್ನು ನೀಡಲು ನಿರಾಕರಿಸಿ. ಹಾಗೆಯೇ ನಿಮ್ಮ ಫೋನ್ ಗೆ ಬಂದ ಒಟಿಪಿಯನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ಇಲ್ಲವೆಂದ್ರೆ ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.