ಛಲ ಇದ್ದಲ್ಲಿ ಗೆಲುವು. ಇದಕ್ಕೆ ನಮ್ಮಲ್ಲಿ ಅನೇಕರು ಉದಾಹರಣೆಯಾಗಿದ್ದಾರೆ. ಗಂಗಾಬಿಶನ್ ಅಗರ್ವಾಲ್ ಜೀವನ ಅನೇಕರಿಗೆ ಸ್ಪೂರ್ತಿ. ಕಡಿಮೆ ಓದಿದ್ರೂ ಹೋರಾಟ ಬಿಡದ ಗಂಗಾಬಿಶನ್ ಅಗರ್ವಾಲ್ ಸಾಧಿಸಿ ತೋರಿಸಿದ್ದಾರೆ.
ತಿಂಡಿ ವ್ಯವಹಾರ ಅತ್ಯಂತ ಪ್ರಸಿದ್ಧ ಬ್ಯುಸಿನೆಸ್ ನಲ್ಲಿ ಒಂದು. ಭಾರತೀಯರು ವೆರೈಟಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಸಿಹಿ ತಿಂಡಿ ಅಥವಾ ಕುರುಕಲು ತಿಂಡಿ ಎಂದಾಗ ನಮಗೆ ಹಲ್ದಿರಾಮ್ ನೆನಪಾಗುತ್ತದೆ. ಹಲ್ದಿರಾಮ್ ಹೆಸರು ಇಂದು ನಿನ್ನೆಯದಲ್ಲ. ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸವನ್ನು ಇದು ಹೊಂದಿದೆ. ಗಂಗಾಬಿಶನ್ ಅಗರ್ವಾಲ್, ಹಲ್ದಿರಾಮ್ ಸಂಸ್ಥಾಪಕರು. ಸಣ್ಣ ಅಂಗಡಿಯಿಂದ ಅದು ಹಲ್ದಿರಾಮ್ ಆಗಿದ್ದು ಹೇಗೆ ಎಂಬ ಮಾಹಿತಿಯನ್ನು ನಾವಿಂದು ನೀಡ್ತೇವೆ.
ಹಲ್ದಿರಾಮ್ (Haldiram) ಶುರುವಾಗಿದ್ದು 1918 ರಲ್ಲಿ ಸಣ್ಣ ಅಂಗಡಿಯಿಂದ. ಈಗ ಈ ಕಂಪನಿ (Company) ಯ ವಾರ್ಷಿಕ ಆದಾಯ 12000 ಕೋಟಿ ರೂಪಾಯಿ ಮೀರಿದೆ. ಹಲ್ದಿರಾಮ್ ಕಂಪನಿ ಮಾಲೀಕರ ಹೆಸರು ಗಂಗಾಬಿಶನ್ ಅಗರ್ವಾಲ್ (Gangabishan Aggarwal). ಅವರು ಬಿಕಾನೇರ್ ನಲ್ಲಿ ಸಣ್ಣ ಅಂಗಡಿಯನ್ನು ಶುರು ಮಾಡಿದ್ದರು. ಬಿಕಾನೇರ್ ಅಂಗಡಿಯಲ್ಲಿ ಅವರು ಭುಜಿಯಾ ತಯಾರಿಸುತ್ತಿದ್ದರು. ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನು ಅವರು ಮಾರಾಟ ಮಾಡ್ತಿದ್ದರು. ವಾಸ್ತವವಾಗಿ ಗಂಗಾಬಿಶನ್ ಅಗರ್ವಾಲ್ ಅವರಿಗೆ ಅವರ ತಾಯಿ ಹಲ್ದಿರಾಮ್ ಎಂದು ಕರೆಯುತ್ತಿದ್ದರು. ತಾಯಿ ತಮಗೆ ಕರೆಯುತ್ತಿದ್ದ ಹೆಸರನ್ನೇ ಅಂಗಡಿಗೆ ಇಡಲು ಗಂಗಾಬಿಶನ್ ಅಗರ್ವಾಲ್ ಮುಂದಾದ್ರು. ಹಾಗಾಗಿ ಅಂಗಡಿಗೆ ಹಲ್ದಿರಾಮ್ ಎಂದು ಹೆಸರಿಟ್ಟರು.
BUSINESS : ಅತಿ ಬೇಗ ಮಾರಾಟವಾಗುತ್ತೆ ಈ ಉತ್ಪನ್ನ… ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಬ್ಯುಸಿನೆಸ್…
ಬಿಕಾನೇರ್ ನಲ್ಲಿ ಅವರು ಅಂಗಡಿ ಶುರು ಮಾಡಲೂ ಒಂದು ಕಾರಣವಿದೆ. 1918ರಲ್ಲಿ ಹತ್ತು ವರ್ಷದವರಿದ್ದ ಗಂಗಾಬಿಶನ್ ಅಪ್ಪನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗಂಗಾಬಿಶನ್ ಕಲಿತಿದ್ದು ಎಂಟನೇ ತರಗತಿಯವರೆಗೆ ಮಾತ್ರ. ಈ ವೇಳೆ ಚಿಕ್ಕಮ್ಮನಿಂದ ಭುಜಿಯಾ ತಯಾರಿಸುವುದನ್ನು ಗಂಗಾಬಿಶನ್ ಅಗರ್ವಾಲ್ ಕಲಿತಿದ್ದರು. ಆದ್ರೆ ಕುಟುಂಬದ ಮಧ್ಯೆ ಗಲಾಟೆ ನಡೆದಿತ್ತು. ಹಾಗಾಗಿ ಗಂಗಾಬಿಶನ್ ಅಗರ್ವಾಲ್ ಮನೆ ಬಿಟ್ಟರು. ಬಿಕಾನೇರ್ ಗೆ ಬಂದ ಅವರು ಅಲ್ಲಿ ಅಂಗಡಿ ಶುರು ಮಾಡಿದ್ರು. 1937ರಲ್ಲಿ ಅವರ ಸ್ವಂತ ಅಂಗಡಿ ಶುರುವಾಯ್ತು.
ಈ ಅಂಗಡಿಯಲ್ಲಿ ಭುಜಿಯಾ ಮಾರಾಟ ಮಾಡುತ್ತಿದ್ದ ಗಂಗಾಬಿಶನ್ ಅಗರ್ವಾಲ್, ತಮ್ಮ ಪಾಕ ವಿಧಾನದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ್ರು. ಹಾಗಾಗಿ ಗ್ರಾಹಕರಿಗೆ ಅವರ ಭುಜಿಯಾ ಇಷ್ಟವಾಯ್ತು. ದಿನ ದಿನಕ್ಕೂ ಭುಜಿಯಾಗೆ ಬೇಡಿಕೆ ಹೆಚ್ಚಾಯ್ತು.
ಕೊಲ್ಕತ್ತಾಗೆ ಮದುವೆ ಸಮಾರಂಭಕ್ಕೆ ಬಂದ ಗಂಗಾಬಿಶನ್ ಅಗರ್ವಾಲ್ ಅಲ್ಲಿಯೂ ಭುಜಿಯಾ ಬೇಡಿಕೆ ಇರುವುದನ್ನು ಗಮನಿಸಿದ್ರು. ಅಲ್ಲಿಯೂ ಅವರು ಅಂಗಡಿ ಶುರು ಮಾಡಿದ್ರು. ಅಷ್ಟಕ್ಕೆ ಗಂಗಾಬಿಶನ್ ಅಗರ್ವಾಲ್ ನಿಲ್ಲಲ್ಲಿಲ್ಲ. ದೆಹಲಿಗೆ ಮತ್ತು ಮಹಾರಾಷ್ಟ್ರದ ನಾಗ್ಪುರಕ್ಕೆ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ರು. ಇಂದು ಭಾರತದ ಪ್ರಮುಖ ನಗರಗಳಲ್ಲಿ ಹಲ್ದಿರಾಮ್ ಮಳಿಗೆ ಇದೆ. ಬರೀ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಹಲ್ದಿರಾಮ್ ಹೆಸರು ಮಾಡಿದೆ. 50 ದೇಶಗಳಲಿ ಹಲ್ದಿರಾಮ್ ಉತ್ಪನ್ನಗಳು ಗ್ರಾಹಕರಿಗೆ ಸಿಗುತ್ತವೆ.
2023ರಲ್ಲಿ ಹಲ್ದಿರಾಮ್ ಆದಾಯ 1.5 ಬಿಲಿಯನ್ ಡಾಲರ್ ತಲುಪಿತ್ತು. ಹಲ್ದಿರಾಮ್ ಕೆಲವೇ ವರ್ಷಗಳಲ್ಲಿ ತನ್ನ IPO ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಹಲ್ದಿರಾಮ್ ಶುರುವಾಗಿ ಎಷ್ಟೇ ವರ್ಷವಾದ್ರೂ ಅದ್ರ ಉತ್ಪನ್ನದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ. ಗುಣಮಟ್ಟ ಮತ್ತು ರುಚಿಗೆ ಹೆಚ್ಚು ಆದ್ಯತೆ ನೀಡ್ತಿರುವ ಕಾರಣ ಹಲ್ದಿರಾಮ್ ಈಗ್ಲೂ ಟಾಪ್ ಕಂಪನಿಗಳ ಪಟ್ಟಿಯಲ್ಲಿದೆ. ಹಲ್ದಿರಾಮ್ ಕಂಪನಿ ರಸಗುಲ್ಲಾ, ಗುಲಾಬ್ ಜಾಮೂನ್ ಮತ್ತು ಸೋನ್ ಪಾಪ್ಡಿಯಂತಹ ಸಿಹಿತಿಂಡಿಗಳು, ನಮ್‌ಕೀನ್ ಮತ್ತು ಭುಜಿಯಂತಹ ಖಾರದ ತಿಂಡಿಗಳು ಮತ್ತು ಸಮೋಸಾ, ಕಚೋರಿಯಂತಹ ಸಿದ್ಧ ಆಹಾರಗಳು ಸೇರಿದಂತೆ ಚೋಲೆ ಭಾತುರೆ ತಯಾರಿಸುವಲ್ಲಿ ಪ್ರಸಿದ್ಧಿಪಡೆದಿದೆ. ಹಲ್ದಿರಾಮ್‌ನ ಬಹುತೇಕ ಎಲ್ಲಾ ನಮ್ಕೀನ್‌ಗಳು ಉತ್ತಮವಾಗಿವೆ. ನಿಂಬು ಮಸಾಲಾ, ಭೇಲ್ ಪುರಿ ಮಿಕ್ಸ್, ಡ್ರೈ ಫ್ರೂಟ್ ಮಿಕ್ಸ್, ಖಟ್ಟಾ ಮೀಠಾ ಮಿಕ್ಸ್ ಇತ್ಯಾದಿಗಳು ಹಲ್ದಿರಾಮ್ ನ ಪ್ರಸಿದ್ಧ ಆಹಾರಗಳಲ್ಲಿ ಒಂದು.