Business : ಅತಿ ಬೇಗ ಮಾರಾಟವಾಗುತ್ತೆ ಈ ಉತ್ಪನ್ನ… ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಬ್ಯುಸಿನೆಸ್…

By Suvarna News  |  First Published Apr 11, 2024, 1:00 PM IST

ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ಸಿಗುವ, ಹೆಚ್ಚು ಬೇಡಿಕೆ ಇರುವ  ವ್ಯಾಪಾರ ಯಾವುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ವ್ಯಾಪಾರದಲ್ಲಿ ಇಡೀ ದಿನ ನೀವು ಕೆಲಸ ಮಾಡ್ಬೇಕಾಗಿಲ್ಲ. ಮಾರಾಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡ್ರೆ ಸಾಕು. 
 


ಜನರು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಇದರಿಂದಾಗಿ ಸಾವಯವ ಕೃಷಿಗೆ ಹೆಚ್ಚು ಬೇಡಿಕೆ ಬಂದಿದೆ. ರಾಸಾಯನಿಕ ಬೆರೆಸಿ ಬೆಳೆದ ತರಕಾರಿ - ಹಣ್ಣಿಗಿಂತ ಸಾವಯವ ಗೊಬ್ಬರ ಬಳಸಿ ತಯಾರಿಸಿದ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಅನೇಕರು ಮನೆಯಲ್ಲಿ ತರಕಾರಿ ಬೆಳೆದುಕೊಳ್ತಾರೆ. ಅವರು ಸಾವಯವ ಗೊಬ್ಬರವನ್ನು ಬಳಕೆ ಮಾಡ್ತಾರೆ. ಕೃಷಿಕರು ಕೂಡ ತಮ್ಮ ಬೆಳೆಗೆ ಸಾವಯವ ಗೊಬ್ಬರ ಹಾಕಲು ಬಯಸುತ್ತಿದ್ದಾರೆ. ವ್ಯವಹಾರ ಶುರು ಮಾಡುವ ಆಲೋಚನೆಯಲ್ಲಿ ನೀವಿದ್ದರೆ ಸಾವಯವ ಗೊಬ್ಬರ ವರ್ಮಿ ಕಾಂಪೋಸ್ಟ್ ಅಂದರೆ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಬಹುದು. ಎರೆಹುಳು ಗೊಬ್ಬರವನ್ನು ನೀವು ಸುಲಭವಾಗಿ ತಯಾರಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯವಿಲ್ಲ. ನೀವು ಅದ್ರ ಮಾರಾಟವನ್ನೂ ಸುಲಭವಾಗಿ ಮಾಡಬಹುದು. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಮಾರಾಟ ಮಾಡಬಹುದು. ವರ್ಮಿ ಕಾಂಪೋಸ್ಟ್ ತಯಾರಿಸೋದು ಹೇಗೆ, ಮಾರಾಟ ಹಾಗೂ ಅದ್ರಿಂದಾಗುವ ಲಾಭಗಳ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ವರ್ಮಿ ಕಾಂಪೋಸ್ಟ್ ತಯಾರಿಸಲು ನೀವು ಪ್ರತಿ ದಿನ ಕೆಲಸ ಮಾಡಬೇಕಾಗಿಲ್ಲ. ವರ್ಮಿ ಕಾಂಪೋಸ್ಟ್ ತಯಾರಿಸಲು ಯಂತ್ರಗಳ ಅಗತ್ಯವಿಲ್ಲ. ಹೆಚ್ಚು ಬಂಡವಾಳ ಹಾಕಿ ಈ ವರ್ಮಿ ಕಾಂಪೋಸ್ಟ್ ತಯಾರಿಸಬೇಕಾಗಿಲ್ಲ. 

Tap to resize

Latest Videos

ವರ್ಮಿ ಕಾಂಪೋಸ್ಟ್ (Vermi Compost) ತಯಾರಿಸಲು ಅಗತ್ಯವಿರುವ ವಸ್ತುಗಳು : 

ದುಬೈನಲ್ಲಿ ಅತ್ಯಾಕರ್ಷಕ ಐಷಾರಾಮಿ ಬಂಗಲೆ ಹೊಂದಿರುವ ಭಾರತದ ತಾರೆಯರು!

ವರ್ಮಿ ಕಾಂಪೋಸ್ಟ್ ತಯಾರಿಸಲು ಜಾಗದ ಅಗತ್ಯವಿರುತ್ತದೆ. ಜಾಗವನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಅಲ್ಲಿ ಮಳೆ ನೀರು ನಿಲ್ಲಬಾರದು. ತೇವಾಂಶವಿರದ ಜಾಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಮೊದಲೇ ಹೇಳಿದಂತೆ ನೀವು ವರ್ಮಿ ಕಾಂಪೋಸ್ಟ್ ತಯಾರಿಸಲು ಯಂತ್ರವನ್ನು ಬಳಸಬೇಕಾಗಿಲ್ಲ. ಸಗಣಿ (Dung), ಎರೆಹುಳು, ಪಾಲಿಥೀನ್ ಶೀಟ್ (Polythene Sheet) ಹಾಗೂ ಹುಲ್ಲಿನ ಅಗತ್ಯವಿರುತ್ತದೆ. 

ವರ್ಮಿ ಕಾಂಪೋಸ್ಟ್ ವ್ಯವಹಾರಕ್ಕೆ ಎಷ್ಟು ವೆಚ್ಚವಾಗುತ್ತದೆ? : ವರ್ಮಿ ಕಾಂಪೋಸ್ಟ್ ತಯಾರಿಸಲು ನಿಮಗೆ 50 ಸಾವಿರ ರೂಪಾಯಿ ಆರಂಭಿಕ ಖರ್ಚು ಬರುತ್ತದೆ. ಎರೆಹುಳುವಿಗೆ ನೀವು ಹೆಚ್ಚು ಖರ್ಚು ಮಾಡ್ಬೇಕು. ಕೆ.ಜಿ ಎರೆಹುಳು ನಿಮಗೆ 1000 ರೂಪಾಯಿಗೆ ಲಭ್ಯವಿದೆ. ಆದ್ರೆ ನೀವು ಇದನ್ನು ಒಮ್ಮೆ ಖರೀದಿ ಮಾಡಿದ್ರೆ ಸಾಕು. ಈ ಎರೆಹುಳುಗಳ ಸಂಖ್ಯೆ ವೇಗವಾಗಿ ಬೆಳೆಯುತ್ತದೆ. ಹಾಗಾಗಿ ನೀವು ಎರೆಹುಳುವನ್ನು ಮತ್ತೆ ಖರೀದಿ ಮಾಡುವ ಅಗತ್ಯವಿಲ್ಲ. ಸಗಣಿ, ಪ್ಲಾಸ್ಟಿಕ್ ಶೀಟ್, ಹುಲ್ಲಿನ ಅಗತ್ಯವಿರುತ್ತದೆ. ಅದ್ರ ಬೆಲೆ ಕಡಿಮೆ ಇರುವ ಕಾರಣ ಹೆಚ್ಚು ಖರ್ಚು ಬರೋದಿಲ್ಲ. ಕೆಲ ಗೋಶಾಲೆ ಅಥವಾ ಸ್ಥಳೀಯರಿಂದ ನೀವು ಉಚಿತವಾಗಿ ಇಲ್ಲವೆ ಅತೀ ಕಡಿಮೆ ಬೆಲೆಗೆ ಸಗಣಿ, ಭತ್ತದ ಹುಲ್ಲು ಖರೀದಿ ಮಾಡಬಹುದು. 

ಯುಟ್ಯೂಬ್ ಪ್ರೇರಣೆ, ಫ್ಯಾಕ್ಟರಿಯನ್ನೇ ಓಪನ್ ಮಾಡಿ ಯಶಸ್ವಿಯಾದ್ರೂ ಇವರು! ಮಾಡಿದ್ದೇನಿರಬಹುದು?

ಎರೆಹುಳು ಗೊಬ್ಬರ ತಯಾರಿಸೋದು ಹೇಗೆ? : ಮೊದಲು ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಮಾರುಕಟ್ಟೆಯಿಂದ ಪ್ಲಾಸ್ಟಿಕ್ ಶೀಟ್ ಖರೀದಿ ಮಾಡಿ 2 ಮೀಟರ್ ಅಗಲ ಮತ್ತು ಉದ್ದಕ್ಕೆ ಕತ್ತರಿಸಿ ಅದನ್ನು ನೆಲದ ಮೇಲೆ ಹಾಕಿ. ನಂತ್ರ ಅದ್ರ ಮೇಲೆ ಸಗಣಿ ಹಾಕಿ. ಅದರ ಮೇಲೆ ಎರೆಹುಳು ಹಾಕಿ. ಮತ್ತೆ ಸಗಣಿ ಹಾಕಿ. ಮತ್ತೆ ಎರೆಹುಳು ಹಾಕಿ. ಸಗಣಿ ಎತ್ತರ 1.5 ಅಡಿಗಿಂತ ಕಡಿಮೆ ಇರಬೇಕು. ಆ ನಂತ್ರ ನೀವು ಭತ್ತದ ಹುಲ್ಲನ್ನು ಮುಚ್ಚಬೇಕು. ಯಾವುದೇ ಪ್ರಾಣಿ, ಹಾವು, ಇಲಿ ಇಲ್ಲಿಗೆ ಬರದಂತೆ ನೋಡಿಕೊಳ್ಳಿ. ಯಾವುದೇ ಪ್ರಾಣಿ ಮಲ – ಮೂತ್ರ ಮಾಡದಂತೆ ನೋಡಿಕೊಳ್ಳಿ. ಎರಡು ತಿಂಗಳು ನೀವು ಅದ್ರ ಸುದ್ದಿಗೆ ಹೋಗ್ಬಾರದು. ಎರೆಹುಳು, ಸಗಣಿಯನ್ನು ಎರಡು ತಿಂಗಳಲ್ಲಿ ವರ್ಮಿ ಕಾಂಪೋಸ್ಟ್ ಆಗಿ ಪರಿವರ್ತಿಸುತ್ತದೆ. ಅದನ್ನು ಫಿಲ್ಟರ್ ಮಾಡಿ ನೀವು ಮಾರಾಟ ಮಾಡಬಹುದು. ಸುಮಾರು 20 ಶೀಟ್ ನಲ್ಲಿ ನೀವು ಗೊಬ್ಬರ ತಯಾರಿಸಿದ್ರೆ 2 ವರ್ಷದಲ್ಲಿ 8 ಲಕ್ಷದಿಂದ 10 ಲಕ್ಷದವರೆಗೆ ವಹಿವಾಟು ನಡೆಸಬಹುದು. 
 

click me!