Success Story: ವಿದೇಶ ತೊರೆದು ನಮ್ಮ ನೆಲದಲ್ಲಿ ಉದ್ಯೋಗ ಶುರುಮಾಡಿದ ಈ ದಂಪತಿ ಯಶಸ್ವಿ

By Suvarna News  |  First Published Mar 16, 2024, 12:52 PM IST

ವಿದೇಶದಲ್ಲಿ ಕೆಲಸ ಸಿಕ್ಕಿದ್ರೆ ಸಾಕು ಅಂತ ದೇವರ ಮೊರೆ ಹೋಗುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕೆಲವರು ವಿದೇಶದಲ್ಲಿ ಸಿಕ್ಕ ಕೆಲಸ ಬಿಟ್ಟು ಸ್ವದೇಶಕ್ಕೆ ಬಂದು ಯಶಸ್ವಿಯಾಗಿದ್ದಾರೆ. ಅದ್ರಲ್ಲಿ ಈ ಜೋಡಿ ಕೂಡ ಸೇರಿದ್ದಾರೆ.
 


ವಿದೇಶದಲ್ಲಿ ಮಾತ್ರವಲ್ಲ ನಮ್ಮ ದೇಶದಲ್ಲೂ ನಾವು ಉದ್ಯಮ ಶುರು ಮಾಡಿ ಯಶಸ್ವಿಯಾಗಬಹುದು. ಇದಕ್ಕೆ ಅನೇಕ ಗಣ್ಯರು ಉದಾಹರಣೆಯಾಗಿ ಸಿಗ್ತಾರೆ. ಭಾರತದಲ್ಲಿ ಉದ್ಯಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿದೇಶದಲ್ಲಿಒ ಅಭ್ಯಾಸ ಮಾಡಿ ಭಾರತಕ್ಕೆ ವಾಪಸ್ ಆಗಿ ನಮ್ಮ ನೆಲದಲ್ಲಿ ನೆಲೆನಿಂತು ವ್ಯಾಪಾರ ಶುರು ಮಾಡಿ ಯಶಸ್ವಿಯಾದ ಅನೇಕರಿದ್ದಾರೆ. ಅವರಲ್ಲಿ ಸ್ವಾತಿ ಭಾರ್ಗವ ಮತ್ತು ರೋಹನ್ ಭಾರ್ಗವ ದಂಪತಿ ಉತ್ತಮ ನಿದರ್ಶನ. ಪ್ರೀತಿಸಿ ಮದುವೆಯಾದ ಜೋಡಿ, ಭಾರತದಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾಗಿದ್ದಾರೆ.

ಲಂಡನ್ (London) ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಸ್ವಾತಿ ಭಾರ್ಗವ್ ಹಾಗೂ ರೋಹನ್ ಭಾರ್ಗವ್, ವಿದೇಶದಲ್ಲಿದ್ದ ಕೆಲಸ ಬಿಟ್ಟು ತಮ್ಮ ನಾಡಿಗೆ ವಾಪಸ್ ಆಗಿದ್ದಲ್ಲದೆ ಈಗ ಎಲ್ಲರು ಮೆಚ್ಚುವ ಕೆಲಸ ಮಾಡಿದ್ದಾರೆ. ರತನ್ ಟಾಟಾರಂತಹ ಉದ್ಯಮಿ (Businessman) ಯನ್ನು ತಮ್ಮ ಕೆಲಸದ ಮೂಲಕ ಸೆಳೆದಿದ್ದಲ್ಲದೆ, ಅವರ ಹೂಡಿಕೆ ಲಾಭ ಪಡೆದಿದ್ದಾರೆ.

Tap to resize

Latest Videos

ಭಾರತದಲ್ಲಿ ಕಾರು ಖರೀದಿಸಿದ ಮೊದಲಿಗ ಜಮ್‌ಶೆಡ್ ಜಿ ಟಾಟಾ, ಇದರ ಹಿಂದಿದೆ ರೋಚಕ ಕತೆ!

ಸ್ವಾತಿ ಭಾರ್ಗವ್ ಹಾಗೂ ರೋಹನ್ ಭಾರ್ಗವ್ ಕ್ಯಾಶ್ಕರೋ ಹೆಸರಿನ ಕಂಪನಿ (Company ) ಮಾಲೀಕರು. ಸ್ವಾತಿ ಹಾಗೂ ರೋಹನ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದರು. ಈ ವೇಳೆ ಸ್ವಾತಿ ಸ್ನೇಹಿತರು ಅವರಿಗೆ ಒಂದು ವಿಷ್ಯ ತಿಳಿಸಿದ್ದರು. ಭಾರತೀಯನೊಬ್ಬ ಇಲ್ಲಿ ಅಡುಗೆ ತಯಾರಿಸಿ, ಭಾರತೀಯರಿಗೆ ಉಣಬಡಿಸುತ್ತಿದ್ದಾನೆ ಎಂಬುದು ಗೊತ್ತಾಯ್ತು. ಅವರ ಊಟ ಮಾಡಲು ಸ್ವಾತಿ ನಿರ್ಧರಿಸಿದ್ದಲ್ಲದೆ ಅಲ್ಲಿಗೆ ಹೋಗಿದ್ದರು. ಆಗ ಅದು ರೋಹನ್ ಎಂಬುದು ಗೊತ್ತಾಯ್ತು. ಅಲ್ಲಿಂದ ಇವರಿಬ್ಬರು ಸ್ನೇಹಿತರಾದರು. ಕೆಲವೇ ದಿನಗಳಲ್ಲಿ ಪ್ರೀತಿ ಚಿಗುರಿತ್ತು. ಇಬ್ಬರೂ ಒಂದೇ ಫ್ಲಾಟ್ ನಲ್ಲಿ ವಾಸ ಶುರುಮಾಡಿದ್ದರು. ಇದೆಲ್ಲ 2008ರ ಕಥೆಯಾದ್ರೆ 2009ರಲ್ಲಿ ಇಬ್ಬರೂ ವಿವಾಹವಾಗಿ, ಭಾರತಕ್ಕೆ ವಾಪಸ್ ಆಗಿದ್ದರು. 

2013 ರಲ್ಲಿ ಕ್ಯಾಶ್‌ಕರೋ ಎಂಬ ಹೆಸರಿನಲ್ಲಿ ಇವರ ವ್ಯವಹಾರ ಶುರುವಾಗಿತ್ತು. ಸ್ನೇಹಿತರು, ಸಂಬಂಧಿಕರಿಂದ ಲಕ್ಷಾಂತರ ರೂಪಾಯಿ ಸಾಲಪಡೆದ ಇವರು ಕ್ಯಾಶ್ ಕರೋ ಶುರು ಮಾಡಿ ಈಗ ಲಾಭ ಗಳಿಸುತ್ತಿದ್ದಾರೆ.

ಕ್ಯಾಶ್ ಕರೋ ಕಂಪನಿ ಕೆಲಸ ಏನು? : ಕ್ಯಾಶ್ ಕರೋ ಮೂಲಕ ನೀವು ಇ ಕಾಮರ್ಸ್ (e-Commerce) ಕಂಪನಿಗಳಿಂದ ಶಾಪಿಂಗ್ (Shopping) ಮಾಡಬಹುದು. ನೀವು ಅಮೆಜಾನ್ (Amazon), ಫ್ಲಿಪ್ಕಾರ್ಟ್ (Flipcart), ಪೇಟಿಎಂ (Paytm) ಸೇರಿದಂತೆ ಇ ಕಾಮರ್ಸ್ ವೆಬ್ಸೈಟ್ (e-Commerce Website) ನ ವಸ್ತುಗಳನ್ನು ಕ್ಯಾಶ್ ಕರೋ ಮೂಲಕ ಖರೀದಿಸಬಹುದು. ಇದ್ರಿಂದ ನಿಮಗೆ ಎರಡು ಲಾಭವಿದೆ. ಕ್ಯಾಶ್ ಕರೋ ನಿಮಗೆ ಕ್ಯಾಶ್ ಬ್ಯಾಕ್ (Cash Back) ನೀಡುತ್ತದೆ. ಜೊತೆಗೆ ವಸ್ತುಗಳ ಮೇಲೆ ರಿಯಾಯಿತಿ ನೀಡುತ್ತದೆ. 

ಕ್ಯಾಶ್ ಕರೋಗೆ ಕೂಡ ಇದ್ರಿಂದ ಲಾಭವಿದೆ. ಗ್ರಾಹಕರು ಕ್ಯಾಶ್ ಕರೋ ಮೂಲಕ ಇ ಕಾಮರ್ಸ್ ವೆಬ್ಸೈಟ್ ನಿಂದ ವಸ್ತು ಖರೀದಿಸಿದಾಗ ಇ ಕಾಮರ್ಸ್ ಕಂಪನಿಗಳು ಕ್ಯಾಶ್ ಕರೋಗೆ ಕಮಿಷನ್ ನೀಡುತ್ತವೆ. ಈ ಕಮಿಷನ್ ನಲ್ಲಿ ಸಿಕ್ಕ ಹಣವನ್ನೇ ಕ್ಯಾಶ್ ಕರೋ ತನ್ನ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ರೂಪದಲ್ಲಿ ನೀಡುತ್ತದೆ. 

ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಅತೀ ದುಬಾರಿ ವಾಚ್ ಧರಿಸಿದ್ದು ಯಾರು?

ಕ್ಯಾಶ್ ಕರೋ ಸ್ವಲ್ಪ ಭಿನ್ನ. ಇದಕ್ಕೆ ರೋಹನ್ ನಾಮಕರಣ ಮಾಡಿದ್ದಾರೆ. ಹೆಸರಿಗೆ ಭಾರತೀಯ ಸ್ಪರ್ಶ ನೀಡಲಾಗಿದೆ. ಇಂಗ್ಲೀಷ್, ಹಿಂದಿ ಪದಗಳ ಮಿಶ್ರಣ ಇದಾಗಿದೆ. ಗ್ರಾಮೀಣ ಪ್ರದೇಶಗಳನ್ನು ತಲುಪುವ ಗುರಿಯನ್ನು ಕಂಪನಿ ಹೊಂದಿದೆ.

ಕ್ಯಾಶ್ ಕರೋ ಕಂಪನಿಗೆ ಉದ್ಯಮಿ ರತನ್ ಟಾಟಾ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ ವ್ಯವಹಾರವು FY23 ರಲ್ಲಿ 250 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಿದೆ. ಇನ್ನೊಂದು ಮೂರ್ನಾಲ್ಕು ವರ್ಷದಲ್ಲಿ ಕಂಪನಿ ಐಪಿಒ ತಲುಪುವ ನಿರೀಕ್ಷೆ ಇದೆ.  
 

click me!