ಸರ್ಕಾರಿ ಶಾಲೆಯಲ್ಲಿ ಓದಿ ಮೂರೇ ವರ್ಷದಲ್ಲಿ 300 ಕೋಟಿ ವ್ಯವಹಾರ ನಡೆಸ್ತಿರುವ ಯುವಕ

By Suvarna News  |  First Published Mar 25, 2024, 2:25 PM IST

ಬ್ಯುಸಿನೆಸ್ ಒಂದು ಕಲೆ. ಅದ್ರಲ್ಲಿ ಆಸಕ್ತಿ ಇದ್ರೆ ಯಶಸ್ಸು ಗಳಿಸೋದು ಕಷ್ಟವಲ್ಲ. ನಿರಂತರ ಕೆಲಸ ಹಾಗೂ ಬುದ್ಧಿವಂತಿಕೆ ಬಳಸಿ ವ್ಯವಹಾರ ಮಾಡಿದ್ರೆ ಲಾಭಗಳಿಸೋದು ಕಷ್ಟವಲ್ಲ. ಖಾಸಗಿ ಶಾಲೆಯಲ್ಲಿ ಕಲಿತವರು ಮಾತ್ರವಲ್ಲ ಸರ್ಕಾರಿ ಶಾಲೆ ಮಕ್ಕಳು ಕೂಡ ಬುದ್ಧಿವಂತರಾಗಿರ್ತಾರೆ ಎನ್ನುವುದಕ್ಕೆ ಇವರು ಉತ್ತಮ ನಿದರ್ಶನ. 
 


ವ್ಯಾಪಾರ ಕೌಶಲ್ಯ ಹೊಂದಿರುವವರು, ಬೋಳು ತಲೆ ಹೊಂದಿರುವವರಿಗೂ ಬಾಚಣಿಕೆ ಮಾರಾಟ ಮಾಡಬಲ್ಲರು ಎನ್ನುವ ಮಾತಿದೆ. ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ರೆ, ವ್ಯಾಪಾರ ಮಾಡುವ ಮನಸ್ಸಿದ್ರೆ ಜನರು ಏನು ಬೇಕಾದ್ರೂ ಮಾರಾಟ ಮಾಡುತ್ತಾರೆ. ಸಣ್ಣದಾಗಿ ಶುರು ಮಾಡಿದ ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಜೊತೆಗೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಾರೆ. ಯಾವ ವ್ಯಾಪಾರ ಶುರು ಮಾಡಿದ್ರೆ ಹೇಗೆ ಲಾಭಗಳಿಸಬಹುದು ಎಂಬುದು ವ್ಯಾಪಾರಸ್ಥರಿಗೆ ತಿಳಿದಿರಬೇಕು.

ಉತ್ತಮ ಶಾಲೆ (School) ಯಲ್ಲಿ ಕಲಿತ ಮಕ್ಕಳು ಹೆಚ್ಚು ಚುರುಕಾಗಿರ್ತಾರೆ ಎನ್ನುವ ಕಲ್ಪನೆ ಈಗಿನ ಜನರಿಗಿದೆ. ಆದ್ರೆ ಶಾಲೆ ಯಾವುದೇ ಆಗಿರಲಿ, ಓದು ಕೇವಲ ಜ್ಞಾನ ವೃದ್ಧಿಗೆ. ವ್ಯಾಪಾರ, ಕೆಲಸ, ಉತ್ತಮ ಆದಾಯ (Income) ಸಿಗಲು ಶ್ರಮ ಹಾಗೂ ಪರಿಶ್ರಮದಿಂದ ಮಾತ್ರ ಸಾಧ್ಯ ಎನ್ನುವುದಕ್ಕೆ ರಾಹುಲ್ ಸಿಂಗ್ (Rahul Singh) ಉತ್ತಮ ನಿದರ್ಶನ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಉತ್ತಮ ಕೆಲಸ ಸಿಕ್ಕಿದ್ರೂ ಅದನ್ನು ತೊರೆದು ವ್ಯಾಪಾರ ಶುರು ಮಾಡಿದ ರಾಹುಲ್ ಸಿಂಗ್ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ವ್ಯಾಪಾರ ವಿಸ್ತರಿಸಿದ್ದಾರೆ. ಅನೇಕ ಯುವಕರಿಗೆ ಅವರು ಮಾದರಿಯಾಗಿದ್ದು, ಪರಿಸರ ರಕ್ಷಣೆ ಕೆಲಸವನ್ನು ಕೂಡ ಮಾಡ್ತಿದ್ದಾರೆ.

Tap to resize

Latest Videos

ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆ; ಇಲ್ಲಿದ್ದಾರೆ ಬರೋಬ್ಬರಿ 568 ಮಿಲಿಯನ್ ಗೇಮರ್ಸ್

ಛತ್ತೀಸ್‌ಗಢದ ಕೆಳ ಮಧ್ಯಮ ವರ್ಗದಲ್ಲಿ ಜನಿಸಿದವರು ರಾಹುಲ್ ಸಿಂಗ್. ಸರ್ಕಾರಿ ಕಾರ್ಪೋರೇಷನ್ (Government Corporation School) ಶಾಲೆಯಲ್ಲಿ ಅವರು ಆರಂಭಿಕ ಶಿಕ್ಷಣ ಮುಗಿಸಿದ್ರು. 2005 ರಲ್ಲಿ ಸೂರತ್‌ನಿಂದ ಬಿ.ಟೆಕ್ ಓದಿದ ರಾಹುಲ್,  2008 ರಲ್ಲಿ ಜೆಮ್‌ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ ನಲ್ಲಿ ಎಂಬಿಎ ಮುಗಿಸಿದರು. ರಾಹುಲ್ ಅಲ್ಲಿಯೇ ಕೆಲಸ ಕೂಡ ಮಾಡಿದ್ದಾರೆ. 2008 ರಿಂದ 2019 ರವರೆಗೆ ರಾಹುಲ್ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದ್ರೆ ಕೆಲಸದ ಮೇಲೆ ರಾಹುಲ್ ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಸ್ವಂತ ವ್ಯಾಪಾರ ಶುರು ಮಾಡುವ ಆಸೆ ಹೊಂದಿದ್ದರು. ತಮ್ಮ ಕನಸನ್ನು ನನಸಾಗಿಸಲು ರಾಹುಲ್ ದೃಢ ನಿರ್ಧಾರ ಮಾಡಿದ್ರು. 2020 ರಲ್ಲಿ ತಮ್ಮ ಸ್ನೇಹಿತ ಅರವಿಂದ್ ಗಣೇಶನ್ ಜೊತೆ ಸೇರಿ ಕಂಪನಿ ಶುರು ಮಾಡಿದ್ರು.

ರಾಹುಲ್ ಸಿಂಗ್, ಇಕೋಸೋಲ್ ಹೋಮ್ ಹೆಸರಿನ ಕಂಪನಿ ನಡೆಸುತ್ತಿದ್ದಾರೆ. ಸ್ಕ್ರ್ಯಾಪ್ ವಸ್ತುಗಳಿಂದ ಉತ್ಪನ್ನಗಳನ್ನು ತಯಾರಿಸುವುದು ಅವರ ಕಂಪನಿ ಕೆಲಸ. ಮರದ ಎಲೆ, ಬಿದಿರು ಮತ್ತು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಇವರ ಕಂಪನಿ ವಸ್ತುಗಳನ್ನು ತಯಾರಿಸುತ್ತದೆ. ಆರಂಭದಲ್ಲಿ ಕಂಪನಿ ಕಟ್ಟೋದು ರಾಹುಲ್ ಸಿಂಗ್ ಅವರಿಗೆ ಸುಲಭವಾಗಿರಲಿಲ್ಲ. ಬಂಡವಾಳಕ್ಕಾಗಿ ಅನೇಕ ಕಡೆ ಪ್ರಯತ್ನ ನಡೆಸಿದ್ದ ರಾಹುಲ್, ನಂತ್ರ ಮನೆ ಮಾರಾಟ ಮಾಡಿ ಹೂಡಿಕೆ ಮಾಡಿದ್ದರು. ರಾಹುಲ್ ಯುಎಸ್ಎಯ ವಾಷಿಂಗ್ಟನ್‌ನಲ್ಲಿ ಇಕೋಸೋಲ್ ಹೋಮ್ ವ್ಯವಹಾರವನ್ನು ಪ್ರಾರಂಭಿಸಿದರು.

ವ್ಯಾಪಾರ ವಿಸ್ತರಿಸುವ ಉದ್ದೇಶದಿಂದ ಭಾರತಕ್ಕೆ ವಾಪಸ್ ಆದ ರಾಹುಲ್ ಈಗ ಅನೇಕ ದೇಶಗಳ ಜೊತೆ ವ್ಯಾಪಾರ ನಡೆಸುತ್ತಿದ್ದಾರೆ. 2022ರಲ್ಲಿ ಭಾರತಕ್ಕೆ ಬಂದ ಅವರು, ವ್ಯಾಪಾರವನ್ನು ವಿಸ್ತರಿಸಿದ್ರು. ಅಮೇರಿಕಾ, ಜರ್ಮನಿ, ಕೆನಡಾ, ಯುಕೆ ದೇಶಗಳಲ್ಲಿ  ಈಗ ವ್ಯಾಪಾರ ನಡೆಸುತ್ತಿದ್ದಾರೆ.     

ಐಪಿಎಲ್ ಧಮಾಕಾ, ಗ್ರಾಹಕರಿಗೆ ಹೆಚ್ಚುವರಿ ಡೇಟಾ ಸೇರಿ ಹಲವು ಆಫರ್ ಘೋಷಿಸಿದ ವಿ!

ತ್ಯಾಜ್ಯದಿಂದ ಪರಿಸರವನ್ನು ಉಳಿಸಿ ಅದನ್ನೇ ಸಂಪತ್ತನ್ನಾಗಿ ಪರಿವರ್ತಿಸುವುದು ರಾಹುಲ್ ಉದ್ದೇಶವಾಗಿದೆ. ರಾಹುಲ್ ಸಿಂಗ್ ಅವರ ಇಕೋಸೋಲ್ ಹೋಮ್ ಸಂಸ್ಥೆ 300 ಕೋಟಿ ರೂಪಾಯಿಗಿಂತ ಹೆಚ್ಚು ವ್ಯವಹಾರ ನಡೆಸುತ್ತಿದೆ. ಕೊನೆಗೂ ರಾಹುಲ್ ಕಲ್ಪನೆ ಯಶಸ್ವಿಯಾಗಿದೆ. ರಾಹುಲ್ ಕಂಪನಿ 1.3 ಮಿಲಿಯನ್ ಟನ್ ಅಂದರೆ 13 ಲಕ್ಷ ಪ್ಲಾಸ್ಟಿಕ್‌ಗಳನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ರಾಹುಲ್ ಕಂಪನಿ ಬರೀ ಲಾಭಮಾಡ್ತಿಲ್ಲ, ಪರಿಸರ ರಕ್ಷಣೆ ಹೊಣೆಯನ್ನೂ ಹೊತ್ತಿದೆ.

click me!