ಕೈಮಗ್ಗದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾದ ರಮಣಿ!

By Santosh NaikFirst Published Aug 9, 2023, 5:05 PM IST
Highlights

ಕೇವಲ 2 ಲಕ್ಷದ ಬಂಡವಾಳ 4 ಯಂತ್ರದೊಂದಿಗೆ ಆರಂಭವಾದ ಸಣ್ಣ ಕೈಮಗ್ಗದ ಉದ್ಯಮ ಇಂದು 20 ಯಂತ್ರಗಳ ಉದ್ಯಮವಾಗಿ ಬೆಳೆದು ನಿಂತಿದೆ. ಈ ಸಾಹಸ ಮಾಡಿದ ರಮಣಿ ಎಂದು ಹಲವು ಮಹಿಳೆಯರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು (ಆ.9): ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿದೆ. ಬದಲಾದ ಇಂದಿನ ಸನ್ನಿವೇಶದಲ್ಲಿ ಮಹಿಳೆಯೊಬ್ಬರು ಸ್ವಾವಲಂಬಿ ಬದುಕು ನಡೆಸಿದರೆ ಅವಳೊಂದಿಗೆ ಹತ್ತಾರು ಜನ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬಹುದು ಎನ್ನುವುದಕ್ಕೆ ಈ ಮಹಿಳೆ ಮಾದರಿಯಾಗಿದ್ದಾರೆ. ನಾಲ್ಕು ಯಂತ್ರಗಳೊಂದಿಗೆ ಆರಂಭವಾದ ಸಣ್ಣ ಉದ್ಯಮ ಇಂದು ಇಪ್ಪತ್ತು ಯಂತ್ರಗಳವರೆಗೂ ಬಂದು ನಿಂತು ಆ ಮೂಲಕ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಾಂಪ್ರದಾಯಿಕ ಕೈಮಗ್ಗದಲ್ಲಿ ಉತ್ವನ್ನಗಳನ್ನು ತಯಾರು ಮಾಡುವ ಮೂಲಕ ಕಾಫಿನಾಡಿನ ಕೀರ್ತಿ ಪತಾಕೆಯನ್ನು ಈ ಮಹಿಳೆ ಹಾರಿಸಿದ್ದಾರೆ.

ಕೈಮಗ್ಗದಲ್ಲಿ ರಮಣಿ ಯಶಸ್ಸು:  ಆತ್ಯಾಧುನಿಕ ಯಂತ್ರಗಳ ಭರಾಟೆಯಲ್ಲಿ ಸಾಂಪ್ರದಾಯಿಕವಾದ ಕೈಮಗ್ಗಗಳು ಬಹುತೇಕ ಮರೆಯಾಗಿವೆ. ಹೀಗಿರುವಾಗ ಕೈಮಗ್ಗದ ಮೂಲಕವೇ ಬದುಕು ಕಟ್ಟಿಕೊಂಡು ಇತರೆಗೂ ಜೀವನಕ್ಕೂ ದಾರಿಯಾಗಿದ್ದಾರೆ ಚಿಕ್ಕಮಗಳೂರು  ಕಡೂರಿನ ಆರ್.ರಮಣಿ . ಮೂಲತಃ ಕಡೂರು ಪಟ್ಟಣದ ನಿವಾಸಿ ಆಗಿರುವ ರಮಣಿ ಅವರು ಹಲವರಿಗೆ ಉದ್ಯೋಗ ನೀಡಿ ಸೈ ಎನಿಸಿಕೊಂಡಿದ್ದಾರೆ. 

ಮಹಿಳೆಯಾಗಿ ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ಕಳೆಯುವುದಕ್ಕಿಂತ ಜನಕ್ಕೆ ಉಪಯೋಗವಾಗುವಂಥ ರಚನಾತ್ಮಕವಾಗಿ ಯೋಚಿಸಿದ್ದರ ಫಲವೇ ನೇಕಾರಿಕೆ. ಅದರಲ್ಲೂ ಸಾಂಪ್ರದಾಯಿಕವಾಗಿಯೇ ಮಾಡಬೇಕೆಂಬ ಗುರಿಯೊಂದಿಗೆ ಕೈಮಗ್ಗ ಸ್ಥಾಪನೆ ಮುಂದಾದರು. 2016ರಲ್ಲಿ 2 ಲಕ್ಷ ಬಂಡಾವಳದಲ್ಲಿ 4 ಯಂತ್ರಗಳೋಂದಿಗೆ  ಕಡೂರ್ ಹಂಡಲೂಮ್ಸ್ ಅಂಡ್ ಅಂರ್ಗಾನಿಕ್ ಸ್ಟೋರ್ ಎನ್ನುವ ಹೆಸರಿನಲ್ಲಿ ಸಂಸ್ಥೆಯನ್ನು 12 ಜನ ಮಹಿಳಾ ಕಾರ್ಮಿಕರೊಂದಿಗೆ  ಆರಂಭಿಸಿದರು. 

ಕಡೂರಿನ  ಪಟ್ಟಣಗೆರೆ ರಸ್ತೆಯಲ್ಲಿ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ವಿಸ್ತಾರವಾದ ಶೆಡ್‌ ನಲ್ಲಿ ಕೈಮಗ್ಗ ಸ್ಥಾಪನೆ ಮಾಡಿದರು. ಹಲವರು ಇವರ ಈ ಕಾರ್ಯಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೂ ಅಂಜದೆ ದೃಢಮನಸ್ಸಿನಿಂದ ಕಾರ್ಯ ಮುಂದುವರಿಸಿದರು. ಇದೀಗ ಬಾಡಿಗೆಯಲ್ಲಿದ್ದ ಜಾಗವನ್ನು ಖರೀದಿಸಿ, 20 ಮಂದಿ ಮಹಿಳಾ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಅಲ್ಲದೆ 4 ಕೈಮಗ್ಗಗಳಿಂದ 20ರ ವರೆಗೆ ತನ ಬಂದು ನಿಂತಿದೆ. 

ಟವಲ್, ಬೆಡ್ ಶೀಟ್ ಗಳಿಗೆ ಬೇಡಿಕೆ: ಕೈ ಮಗ್ಗದಲ್ಲಿ ದಾರ ಸುತ್ತುವುದರಿಂದ ಹಿಡಿದು ಎಲ್ಲವನ್ನೂ ಮಾನವ ಶಕ್ತಿಯಿಂದಲೇ ಮಾಡುವುದು ವಿಶೇಷವಾಗಿದೆ. ಉತ್ವನ್ನಗಳ ವಿನ್ಯಾಸವನ್ನು ರಮಣಿ ಅವರೇ ರಚಿಸುತ್ತಾರೆ. ಕಂಪ್ಯೂಟರ್ ಸಹಾಯವಿಲ್ಲದೆ ತಾವೇ ತಮ್ಮ ಕಲ್ಪನೆಯನ್ನು ಬೆರೆಸಿ ವಿನ್ಯಾಸ ಮಾಡುವುದು ಮತ್ತೊಂದು ವಿಶೇವಾಗಿದೆ. ಶುದ್ದ ಹತ್ತಿಯ ಉತ್ವನ್ನಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಇಲ್ಲಿ ತಯಾರಾದ ಉತ್ಪನ್ನಗಳನ್ನು ರಾಜ್ಯದ ವಿವಿಧದಡೆಲ್ಲಿರುವ  ಬಟ್ಟೆ ಅಂಗಡಿಗಳಿಗೆ ಪೂರೈಸುವ ಮೂಲಕ ಮಾರುಕಟ್ಟೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. 31*60,  34*66 ಅಳತೆಯ ಟವಲ್ ಮತ್ತು 45*90 ಆಳತೆಯ ಬೆಡ್‌ ಶೀಟ್‌ಗಳು ತಯಾರಾಗುತ್ತವೆ. ಒಂದು ತಿಂಗಳಿಗೆ 1000ಕ್ಕೂ ಹೆಚ್ಚು ಟವೆಲ್‌ಗಳು ಮತ್ತು 220ಕ್ಕೂ ಹೆಚ್ಚು ಬೆಡ್ ಶೀಟ್ ಗಳು ತಯಾರಾಗುತ್ತವೆ. ಟವೆಲ್‌ಗಳು 120 ರಿಂದ 150 ಮತ್ತು ಬೆಡ್ ಶೀಟ್‌ಗಳು 200 ರಿಂದ 220 ರ ದರದಲ್ಲಿ ಮಾರಾಟವಾಗುತ್ತಿದೆ. ಇದು ಹೆಚ್ಚೇನು ಲಾಭದಾಯಕವಲ್ಲದಿದ್ದರೂ ಮನಸಿಗೆ ಸಮಾಧಾನ ತರುತ್ತದೆ ಎನ್ನುತ್ತಾರೆ ರಮಣಿ.

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾಗೆ ಭಾರತೀಯ ಮೂಲದ ನೂತನ ಸಿಎಫ್ಒ; ಯಾರು ಈ ವೈಭವ್ ತನೇಜಾ?

ಗೃಹ ಕೈಗಾರಿಕೆಗೂ ಪ್ರೋತ್ಸಾಹ :  
ಇದಲ್ಲದೆ ಗ್ರಾಮೀಣ ಮಹಿಳೆಯರಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಗೃಹ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಅವರಿಗೆ ಸಹಾಯ ಮಾಡಿ ಅವರನ್ನು ಅರ್ಥಿಕವಾಗಿ ಮುಂದೆ ಬರುವಂತೆ ಮಾಡುವ ಆಶಯ ಇವರ ಬಳಿ ಇದೆ. ಯಾರಾದರೂ ಮಹಿಳೆಯರು ಆಸಕ್ತಿ ಇದ್ದರೆ ಅವರು  ಮನೆಯಿಂದಲೇ ಗೃಹಕೈಗಾರಿಕೆಗೆ ಮುಂದಾಗಲು ಬಯಸಿದರೆ ಅವರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.

Latest Videos

ಫ್ರೀಡಂ ಪಾರ್ಕ್‌ನಲ್ಲಿಯೂ ಉದ್ಯಮ ಸೃಷ್ಟಿ ಮಾಡಿದ ಜೋಷಿ, 25ಕ್ಕೂ ಹೆಚ್ಚು ಜನರಿಗೆ ಉದ್ಯೋಗ

click me!