ಅಮೆರಿಕಾದಲ್ಲಿದ್ದ ಐಷಾರಾಮಿ ಮನೆ ಮಾರಿದ ಮುಖೇಶ್ ಅಂಬಾನಿ... ಎಷ್ಟು ಕೋಟಿಯ ಮನೆ ಇದು

Published : Aug 09, 2023, 04:15 PM IST
ಅಮೆರಿಕಾದಲ್ಲಿದ್ದ ಐಷಾರಾಮಿ ಮನೆ ಮಾರಿದ ಮುಖೇಶ್ ಅಂಬಾನಿ... ಎಷ್ಟು ಕೋಟಿಯ ಮನೆ ಇದು

ಸಾರಾಂಶ

ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ಅವರು ಅಮೆರಿಕಾದಲ್ಲಿ ತಾವು ಖರೀದಿಸಿದಂತಹ ಬೃಹತ್ ಬಂಗಲೆಯೊಂದನ್ನು ಮಾರಾಟ ಮಾಡಿದ್ದಾರೆ. 

ನ್ಯೂಯಾರ್ಕ್‌: ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ಅವರು ಅಮೆರಿಕಾದಲ್ಲಿ ತಾವು ಖರೀದಿಸಿದಂತಹ ಬೃಹತ್ ಬಂಗಲೆಯೊಂದನ್ನು ಮಾರಾಟ ಮಾಡಿದ್ದಾರೆ.  ಅಮೆರಿಕಾದ ಮ್ಯಾನ್‌ಹಟ್ಟನ್‌ನ ವೆಸ್ಟ್ ವಿಲೇಜ್‌ನಲ್ಲಿರುವ ನಾಲ್ಕನೇ ಮಹಡಿಯಲ್ಲಿದ್ದ ಮನೆಯನ್ನು 9 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.  ಈ ಬೃಹತ್ ಬಂಗಲೆ ನಾಲ್ಕನೇ ಮಹಡಿಯಲ್ಲಿದ್ದು, ಸುಮಾರು 2,406 ಚದರ ಅಡಿ ವಿಸ್ತಾರವನ್ನು ಹೊಂದಿದೆ. ಇದನ್ನು ಐಷಾರಾಮಿಯಾಗಿ ವಾಸಕ್ಕೆ ಯೋಗ್ಯವಾಗುವಂತೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿರುವ ಎರಡು ಬೆಡ್‌ರೂಮ್‌ನ್ನು ಮೂರು ಬೆಡ್‌ರೂಮ್‌ಗಳಾಗಿ ಕಲಾತ್ಮಕವಾಗಿ ವಿಭಾಗಿಸಲು ಸಾಧ್ಯವಾಗುತ್ತದೆ. 

ಈ ಬಂಗ್ಲೆಯ ಮತ್ತೊಂದು ವೈಶಿಷ್ಟ್ಯವೆಂದರೆ  ಈ ಬಂಗಲೆಯಿಂದ ನಿಂತು ನೋಡಿದರೆ ಹಡ್ಸನ್ ನದಿಯ ಮನಮೋಹಕ ನೋಟ ಇಲ್ಲಿ ಕಾಣಿಸುತ್ತದೆ. ಅಲ್ಲದೇ ಈ ಮನೆಯ ಇಂಟಿರಿಯರ್ ಡಿಸೈನ್ ಕೂಡ ತುಂಬಾ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ 10 ಅಡಿ ಎತ್ತರದಲ್ಲಿರುವ ಸೀಲಿಂಗ್ ಫ್ಯಾನ್ ಮನೆಯೊಳಗೆ ಸುಂದರವಾಗಿ ಗಾಳಿ ಬರುವಂತೆ ಮಾಡುತ್ತದೆ.  ಇದರ ಜೊತೆಗೆ ಹೆರಿಂಗ್‌ಬೋನ್ ಮಾದರಿಯ ಗಟ್ಟಿಮರದ ಮಹಡಿಗಳು ಅತ್ಯಾಧುನಿಕತೆಯ ಜೊತೆ ಮನೆಗೆ ಪಾರಂಪರಿಕ ಟಚ್ ನೀಡುತ್ತಿವೆ. ಇಷ್ಟೇ ಅಲ್ಲದೇ ಶಬ್ಧ ನಿರೋಧಕವಾದ ಕಿಟಕಿಗಳಿವೆ. ಇಂತಹ ವೈಭೋಗವನ್ನು ಹೊಂದಿದ್ದ ಮನೆಯನ್ನು ಮುಖೇಶ್‌ ಅಂಬಾನಿ ಮಾರಾಟ ಮಾಡಿದ್ದಾರೆ.  ಆದರೆ ಯಾರು ಇದನ್ನು ಖರೀದಿಸಿದ್ದಾರೆ ಎಂಬ ವಿವರವಿಲ್ಲ, 

ಅಬ್ಬಬ್ಬಾ..165 ಕೋಟಿಯ ರಾಣಿಹಾರದ ಒಡತಿ ಇಶಾ ಅಂಬಾನಿ, ಬೆರಗುಗೊಳಿಸುತ್ತೆ ಜ್ಯುವೆಲ್ಲರಿ ಕಲೆಕ್ಷನ್

ಇನ್ನು ಸುಪೀರಿಯರ್ ಇಂಕ್ ( Superior Ink building) ಎಂದು ಕರೆಯಲ್ಪಡುವ ಈ ಬೃಹತ್ ಕಟ್ಟಡ 17 ಅಂತಸ್ತನ್ನು ಹೊಂದಿದ್ದು,  ಇದು ಮೂಲತ ಸುಪೀರಿಯರ್ ಇಂಕ್ ಸರಣಿಯ ಕಟ್ಟಡಗಳ ಫ್ಯಾಕ್ಟರಿಯಾಗಿ ಸೇವೆ ಸಲ್ಲಿಸಿತ್ತು. ಇದರ ಮೂಲವು 1919 ರಷ್ಟು ಹಳೆಯದಾಗಿದ್ದು, ಕಾಲಾತೀತವಾದ ವಾಸ್ತುಶಿಲ್ಪದ ವಿನ್ಯಾಸಕ್ಕೆ ಸಾಕ್ಷಿಯಾಗಿದೆ. ಕಟ್ಟಡವನ್ನು 2009 ರಲ್ಲಿ ಮರು ವಿನ್ಯಾಸಗೊಳಿಸಲಾಗಿದ್ದು,  ಇದನ್ನು  ವಾಸ್ತುಶಿಲ್ಪಿಗಳಾದ ರಾಬರ್ಟ್ ಎ.ಎಮ್. ಸ್ಟರ್ನ್ (obert A.M. Stern) ಇಂಟಿರಿಯರ್ ಡಿಸೈನರ್‌ ಆದ ಯಾಬು  ಪುಶೆಲ್‌ಬರ್ಗ್‌ (Yabu Pushelberg) ಅವರಿಂದ  ವಿನ್ಯಾಸಗೊಳಿಸಲ್ಪಟ್ಟಿದೆ.  ಇದು  ಸುಸ್ಥಿರ ಜೀವನಕ್ಕೆ ಬೇಕಾದ ಸೌಲಭ್ಯವನ್ನು ಸಾಬೀತುಪಡಿಸುವ ಜೊತೆಗೆ ಇದರ ಸುಂದರ ರಚನೆಯು ಅಲ್ಲಿನ ಗಣ್ಯ ನಿವಾಸಿಗಳಿಗೆ ಆಧುನಿಕ ಸೌಕರ್ಯಗಳ ಉನ್ನತ ಮಟ್ಟವನ್ನೇ ನೀಡುತ್ತಿದೆ. ವಿಶ್ರಾಂತಿ ಕೋಣೆಯಿಂದ ಹಿಡಿದು ಯೋಗ ಸ್ಥಳ, ಸ್ಟುಡಿಯೋ ಹಾಗೂ ಸುಸ್ಸಜ್ಜಿತವಾದ ಜಿಮ್‌ನ್ನೂ ಕೂಡ ಹೊಂದಿದೆ. 

ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟೋದು ಈ ವ್ಯಕ್ತಿ, ಅಂಬಾನಿ-ಅದಾನಿ, ಟಾಟಾ ಯಾವುದೇ ಉದ್ಯಮಿ ಅಲ್ಲ!

ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿರುವ ಅಂಬಾನಿ, ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಗುಜರಾತ್‌ನ ಜಾಮ್‌ನಗರದಲ್ಲಿರುವ ಸಂಸ್ಕರಣಾಗಾರದ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಹೆಸರುವಾಸಿಯಾಗಿದ್ದಾರೆ. ಈ ಮಧ್ಯೆ ರಿಲಯನ್ಸ್ ಪೆಟ್ರೋಲಿಯಂ ಸಂಸ್ಥೆ  ಉಕ್ರೇನ್‌ನೊಂದಿಗಿನ ರಷ್ಯಾದ ಸಂಘರ್ಷದ (Russia's conflict with Ukraine) ನಂತರ ಗಮನಾರ್ಹವಾಗಿ ಬೆಳೆಯುತ್ತಿದೆ. ಭಾರತ ಸರ್ಕಾರದ ನಿಷ್ಪಕ್ಷಪಾತ ನಿಲುವನ್ನು ಬಳಸಿಕೊಂಡು ರಿಲಯನ್ಸ್ ಅಭಿವೃದ್ಧಿ ಹೊಂದುತ್ತಿದೆ. ಈ ಅವಧಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಪೆಟ್ರೋಲಿಯಂಗೆ ನಿರ್ಬಂಧ ಹೇರಿದ್ದರೆ ಭಾರತ ತನ್ನ ವಿದೇಶಾಂಗ ನೀತಿಯಿಂದಾಗಿ ರಷ್ಯಾದಿಂದ  ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಖರೀದಿಸುತ್ತಿದೆ. ಇದರ ಭಾಗವಾಗಿ ಮುಖೇಶ್‌ ಅಂಬಾನಿ ಅವರ ರಿಲಯನ್ಸ್ ಕಡಿಮೆ ಬೆಲೆಯ ಕಚ್ಚಾ ತೈಲವನ್ನು ರಷ್ಯಾದಿಂದ ಲಾಭದಾಯಕವಾಗಿ ಸಂಗ್ರಹಿಸಿದೆ, ನಂತರ ಅದನ್ನು ಸಂಸ್ಕರಿಸಿ ಆಗ್ನೇಯ ಏಷ್ಯಾ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿವಿಧ ಜಾಗತಿಕ ತಾಣಗಳಿಗೆ ವಿತರಣೆ ಮಾಡುತ್ತಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ