ಉದ್ಯೋಗ ಸಿಕ್ಕಿಲ್ಲ ಎನ್ನುವ ಚಿಂತೆ ಬಿಡಿ, ಟೀ ಮಾರಿ ಕನಿಷ್ಠ ಐದು ಲಕ್ಷ ಗಳಿಸಿ- ಇಲ್ಲಿದೆ ವೈರಲ್​ ಟಿಪ್ಸ್​

Published : Sep 01, 2026, 06:09 PM IST
Tea Shop

ಸಾರಾಂಶ

ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುತ್ತಿಲ್ಲವೆಂದು ಕೊರಗುವ ಬದಲು, ಸಣ್ಣ ವ್ಯಾಪಾರದಿಂದಲೂ ಉತ್ತಮ ಆದಾಯ ಗಳಿಸಬಹುದು. ದಿನಕ್ಕೆ 200 ಕಪ್ ಟೀ ಮಾರಾಟ ಮಾಡಿ, ವಾರ್ಷಿಕವಾಗಿ ಸುಮಾರು 5 ಲಕ್ಷ ರೂಪಾಯಿ ಗಳಿಸಬಹುದಾದ ಸರಳ ಲೆಕ್ಕಾಚಾರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನಿರುದ್ಯೋಗ ಸಮಸ್ಯೆ ಎನ್ನುವುದು ತಾಂಡವವಾಡುತ್ತಿದೆ ಎಂದು ಹಲವು ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ. ಇದಕ್ಕೆ ಬಹುಮುಖ್ಯವಾಗಿರುವ ಕಾರಣ ಎಂದರೆ, ತಮ್ಮ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಉದ್ಯೋಗ ಸಿಕ್ಕರೂ ಕಡಿಮೆ ಸಂಬಳ, ಸಂಸಾರ ನಿಭಾಯಿಸಲು ಆಗುವುದಿಲ್ಲ, ಈ ಉದ್ಯೋಗಕ್ಕೆ ಡಿಗ್ನಿಟಿ ಇಲ್ಲ, ನನ್ನ ಅರ್ಹತೆಗೆ ಈ ಉದ್ಯೋಗ ಆಗಿ ಬರುವುದೇ ಇಲ್ಲ... ಹೀಗೆ ಇಲ್ಲ ಇಲ್ಲಗಳ ನಡುವೆ ಯುವಕ, ಯುವತಿಯರು ವಯಸ್ಸನ್ನು ಕಳೆದುಕೊಳ್ಳುತ್ತಾ ಸಾಗುತ್ತಾರೆಯೇ ವಿನಾ, ಸಿಕ್ಕ ಉದ್ಯೋಗ ಮಾಡಲು ಹೋಗುವುದೇ ಇಲ್ಲ. ಕೆಲವರಿಗೆ ಸರ್ಕಾರಿ ಉದ್ಯೋಗದ ಮೇಲೆ ಪ್ರೀತಿ, ಇನ್ನು ಕೆಲವರಿಗೆ ಎಸಿ ರೂಮ್​ನಲ್ಲಿ ಕುಳಿತು ಕೆಲಸ ಮಾಡುವ ಆಸೆ. ಇದೇ ಕಾರಣಕ್ಕೆ, ಉದ್ಯೋಗವೂ ಸಿಗಲ್ಲ, ಸಂಬಳವೂ ಇಲ್ಲದೇ ಕೊನೆಗೆ ಸರ್ಕಾರವನ್ನೋ, ಜನ ಪ್ರತಿನಿಧಿಗಳನ್ನೋ ಶಪಿಸುತ್ತಾ ಸೋಷಿಯಲ್​ ಮೀಡಿಯಾದಲ್ಲಿ ಮನಸ್ಸಿನಲ್ಲಿದ್ದ ವಿಷಗಳನ್ನು ಕಾರುತ್ತಾ ಕುಳಿತುಕೊಳ್ಳುವುದರಲ್ಲಿಯೇ ಜೀವನ ಕಳೆದು ಬಿಡುತ್ತಾರೆ!

ಅದೆಷ್ಟೋ ಮಂದಿ ಬೀದಿಬದಿಗಳಲ್ಲಿ ವ್ಯಾಪಾರ ಮಾಡುತ್ತಾ, ಸಾಫ್ಟ್​ವೇರ್​ ಎಂಜಿನಿರ್ಸ್​ಗಿಂತಲೂ ಹೆಚ್ಚು ಗಳಿಸುತ್ತಿರುವ ಸುದ್ದಿಗಳು ಬರುತ್ತಲೇ ಇರುತ್ತವೆ. ಬೋಂಡಾ ಮಾರಿ, ಟೀ ಮಾರಿ, ಅದರಲ್ಲಿಯೂ ಹೆಚ್ಚಿನ ಆದಾಯ ಇರುವುದು ಚಾಟ್ಸ್​ ಮಾರುವವರದ್ದು. ಆದರೆ ಇವೆಲ್ಲವೂ ತಮ್ಮ ಅರ್ಹತೆಗೆ ತಕ್ಕದ್ದಲ್ಲ ಎಂದೋ, ನೋಡಿದವರು ಏನಂದಾರೋ ಎಂದೋ, ಇಂದಿನ ಹೆಣ್ಣುಮಕ್ಕಳ ಅತ್ಯಾಸೆಗಳನ್ನು ಪೂರೈಸುವಂಥ ಉದ್ಯೋಗ ಇದಲ್ಲ ಎಂದೋ, ಹೆಣ್ಣು ಕೇಳುವುದು ಹೇಗೆ ಎಂದೋ ಬಿಟ್ಟುಬಿಡುತ್ತಾರೆ.

ಹಲವಾರು ಸಕ್ಸಸ್​ ಸ್ಟೋರಿಗಳು

ಆದರೆ, ಇಂಥವುಳಿಂದಲೇ ಸಾಕಷ್ಟು ಗಳಿಕೆ ಮಾಡಬಹುದು ಎನ್ನುವುದನ್ನು ಇದಾಗಲೇ ಹಲವಾರು ಸಕ್ಸಸ್​ ಸ್ಟೋರಿಗಳು ತೋರಿಸಿಕೊಟ್ಟಿವೆ. ಬಿಜಿನೆಸ್​ ಎಂದ ಮಾತ್ರಕ್ಕೆ ಒಂದೇ ಕ್ಷಣಕ್ಕೆ ಜನರು ಬಂದುಬಿಡಬೇಕು ಎನ್ನೋದನ್ನು ಬಿಟ್ಟು, ಗ್ರಾಹಕರನ್ನು ಸೆಳೆಯುವ ತಂತ್ರ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿಭಿನ್ನವಾಗಿ ಟೇಸ್ಟಿ ಟೇಸ್ಟಿ ಫುಡ್​ ಮಾಡುವ ತಂತ್ರಗಳೂ ಗೊತ್ತಿರಬೇಕು. ಅಂಥದ್ದೇ ಒಂದು ಪೋಸ್ಟ್​ ಈಗ ವೈರಲ್​ ಆಗುತ್ತಿದೆ. ಅದರಲ್ಲಿ ಕೇವಲ ಟೀ ಮಾರಿ, ಎಲ್ಲಾ ಖರ್ಚು ತೆಗೆದು ಹೇಗೆ ವಾರ್ಷಿಕವಾಗಿ ಕನಿಷ್ಠ ಐದು ಲಕ್ಷ ರೂಪಾಯಿಗಳ ಆದಾಯ ಗಳಿಸಬಹುದು ಎನ್ನುವುದನ್ನು ತಿಳಿಸಲಾಗಿದೆ. ಕೇವಲ ಟೀ-ಕಾಫಿ ಮಾರಿ ಜೀವನ ಸಾಗಿಸುತ್ತಿರುವವರ ಬಳಿ ಹೋಗಿ ಮಾತನಾಡಿಸಿದರೂ ಈ ಸತ್ಯ ತಿಳಿಯುತ್ತದೆ.

kannadaudyamee ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಜನ ಸಂದಣಿ ಇರುವ ಜಾಗದಲ್ಲಿ ಅಥವಾ ಪಾರ್ಕ್​ ಇತ್ಯಾದಿ ಕಡೆಗಳಲ್ಲಿ, ಜನರನ್ನು ಹೆಚ್ಚು ಆಕರ್ಷಣೆ ಮಾಡುವ ಜಾಗದಲ್ಲಿ ಟೀ ಷಾಪ್​ ಇಟ್ಟರೆ ಖಂಡಿತ ಇದು ವರ್ಕ್​ಔಟ್​ ಆಗುತ್ತದೆ ಎನ್ನುವುದು ಹಲವರ ಅಭಿಮತ. ಇಲ್ಲಿ ಚಹಾ ಬೆಲೆ 10 ರೂಪಾಯಿ ಎಂದು ಬರೆದಿದ್ದರೂ, ಬೆಂಗಳೂರಿನಂಥ ಮಹಾನಗರಗಳಲ್ಲಿ ಇದಾಗಲೇ ಇದರ ದರ ಬೀದಿಬದಿಗಳಲ್ಲಿಯೂ 15-20 ರೂ.ಗೆ ಹೋಗಿದೆ. ಹಾಗೆ ನೋಡಿದ್ರೆ ಲಾಭ ಡಬಲ್​ ಆಗ್ಬೋದು. ಇದರಲ್ಲಿ ಅಂಗಡಿ ಬಾಡಿಗೆಯೂ ಇದ್ದು, ಬೀದಿ ಬದಿಯಲ್ಲಿ ಚಿಕ್ಕ ಟೆಂಟ್​ ಹಾಕಿಕೊಂಡರೆ ಅದರ ಖರ್ಚು ಕೂಡ ಇರುವುದಿಲ್ಲ (ಕೆಲವು ಕಡೆಗಳಲ್ಲಿ ಪೊಲೀಸರಿಗೆ ಮಾಮೂಲಿ ಕೊಡಬೇಕಿರುವುದು ಇರತ್ತೆ ಬಿಡಿ!) ಹಾಗಿದ್ದರೆ ಅವರು ಕೊಟ್ಟಿರುವ ಲೆಕ್ಕಾಚಾರ ಇಲ್ಲಿದೆ ನೋಡಿ:

ಲೆಕ್ಕಾಚಾರ ಹೀಗಿದೆ

ಒಂದು ಕಪ್​ ಚಹಾ ಬೆಲೆ- 10

ದಿನಕ್ಕೆ 200 ಕಪ್​- 2 ಸಾವಿರ ರೂ

30 ದಿನ ಮಾರಾಟ- 60 ಸಾವಿರ ರೂ

ಚಹಾ ತಯಾರಿಸುವ ಖರ್ಚು- 15,000 ರೂ.

ಅಂಗಡಿ ಬಾಡಿಗೆ- 5,000 ರೂ

ಕೊನೆಗೆ ಉಳಿಯುವ ಕಮಾಯಿ- 40 ಸಾವಿರ ರೂ.

ವರ್ಷಕ್ಕೆ- 4.80 ಲಕ್ಷ ರೂ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ನಿಮ್ಮ ಎಲ್ಲಾ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇಡಬೇಡಿ, 30ಕ್ಕೂ ಮುನ್ನ ಹಣ ಉಳಿಸಿ, ಬೆಂಗಳೂರು ಸಿಎ ಕೊಟ್ಟ ಸಲಹೆ
ನಟನೆಯ ಜೊತೆ ಹೊಸ ಬಿಸ್ನೆಸ್! ನಟ ವಿಜಯ್ ದೇವರಕೊಂಡ ಶುರು ಮಾಡಿರೋ ಹೊಸ ಉದ್ಯಮ ಯಾವುದು?