
ನವದೆಹಲಿ: ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಭಾರೀ ಗೋಲ್‌ಮಾಲ್ ನಡೆಸಿದೆ ಎಂದು ಆರೋಪ ಮಾಡಿದ್ದ ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಸ್ಥೆ ವಿರುದ್ಧ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ 'ಸೆಬಿ' ನೋಟಿಸ್ ಜಾರಿ ಮಾಡಿದೆ. ಅದಾನಿ ವಿರುದ್ಧ ಆರೋಪ ಮಾಡಿದ ವೇಳೆ ಶಾರ್ಟ್ ಸೆಲ್ಲಿಂಗ್ ನಡೆಸುವ ಮೂಲಕ ಷೇರುಬೆಲೆ ತಿರುಚಿದ ಆರೋಪದ ಕಾರಣಕ್ಕಾಗಿ ಸೆಬಿ ಈ ನೋಟಿಸ್ ಜಾರಿ ಮಾಡಿದೆ.
ಆದರೆ, 'ಸೆಬಿ ನೋಟಿಸ್ ಅಸಂಬದ್ಧ' ಎಂದು ಕಿಡಿಕಾರಿರುವ ಹಿಂಡನ್‌ಬರ್ಗ್ ಸಂಸ್ಥೆ, ಭಾರತದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಅಕ್ರಮ ಬಯಲಿಗೆಳೆದಿದ್ದಕ್ಕೆ ನೋಟಿಸ್ ನೀಡಿ ನಮ್ಮನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ.
ಅದಾನಿ ಕೇಸ್ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್
ಇದೇ ವೇಳೆ, ಭಾರತದ ಕೋಟಕ್ ಬ್ಯಾಂಕ್, ಇಂಥ ಹೂಡಿಕೆ ಮಾಡಲೆಂದೇ ವಿದೇಶದಲ್ಲಿ ಹೂಡಿಕೆ ವಿಭಾಗವೊಂದನ್ನು ತೆರೆದಿದೆ. ಅದರ ಮೂಲಕವೇ ನಾವು ಅದಾನಿ ಕಂಪನಿಯ ಷೇರುಗಳನ್ನು ಶಾರ್ಟ್ ಮಾಡಿದ್ದು ಎಂದು ಹಿಂಡನ್‌ಬರ್ಗ್ ಹೇಳಿದೆ. ಆದರೆ ಈ ಆರೋಪವನ್ನು ಕೋಟಕ್ ಸ್ಪಷ್ಟವಾಗಿ ತಳ್ಳಿಹಾಕಿದೆ ಹಾಗೂ ಹಿಂಡನ್‌ಬರ್ಗ್ ಜತೆ ನಾವು ಯಾವುದೇ ನಂಟು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್: ಹಿಂಡನ್‌ಬರ್ಗ್ ಹೇಳಿದಂತೆ ಅದಾನಿ ಅಕ್ರಮ ಎಸಗಿಲ್ಲ: ಸುಪ್ರೀಂ ಕೋರ್ಟ್
ಅಬಕಾರಿ ಹಗರಣ: ಕೇಜ್ರಿ ಅರ್ಜಿಗೆ ಉತ್ತರಿಸಲು ಸಿಬಿಐಗೆ ನೋಟಿಸ್
ನವದೆಹಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮನ್ನು ಸಿಬಿಐ ಬಂಧಿಸಿದ್ದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ದಿಲ್ಲಿ ಹೈಕೋರ್ಟ್, ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಕೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾ। ನೀನಾ ಬನ್ಸಲ್ ಕೃಷ್ಣ ಅವರು ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜು.17 ಮುಂದೂಡಿದ್ದಾರೆ. ಜೂ.26 ಮತ್ತು 29 ರಂದು ವಿಚಾರಣಾ ನ್ಯಾಯಾಲಯವು ತಮ್ಮನ್ನು ಕ್ರಮೇಣವಾಗಿ 3 ಮತ್ತು 14 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದ್ದ ಆದೇಶವನ್ನೂ ಕೇಜ್ರಿವಾಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸಿಬಿಐಗೂ ಮುನ್ನ ಕೇಜ್ರಿವಾಲ್‌ರನ್ನು ಇ.ಡಿ. ಬಂಧಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.