ವಾರದಲ್ಲಿ 70 ಗಂಟೆ ಕೆಲಸ ಮಾಡ್ಬೇಕಾ, ಬೇಡ್ವಾ ಎಂಬ ವಿಷ್ಯ ಸದ್ಯ ಚರ್ಚೆಯಲ್ಲಿದೆ. ಆದ್ರೆ ಇವರೆಲ್ಲರ ಮಧ್ಯೆ ಸ್ಟೀವನ್ ಭಿನ್ನವಾಗಿ ನಿಲ್ತಾನೆ. ಈತ ಮಾಡೋ ಕೆಲಸದ ಸಮಯ ಅತೀ ಕಡಿಮೆಯಾದ್ರೂ ಗಳಿಕೆ ಭರ್ಜರಿಯಾಗಿದೆ.
ವಾರದಲ್ಲಿ ಎಷ್ಟು ಗಂಟೆ ಕೆಲಸ (Work) ಮಾಡ್ಬೇಕು ಎನ್ನುವ ಬಗ್ಗೆ ಕೆಲ ದಿನಗಳಿಂದ ಚರ್ಚೆಯಾಗ್ತಿದೆ. ಕೆಲಸ ಹಾಗೂ ಜೀವನ ಸಮತೋಲನ (life balance) ದ ಬಗ್ಗೆಯೂ ಜನರು ಮಾತನಾಡ್ತಿದ್ದಾರೆ. ಇಡೀ ದಿನ ಕೆಲಸ ಮಾಡಿದ್ರೂ ಸಂಪಾದನೆ ಕಡಿಮೆ ಎನ್ನುವವರು ಕೆಲವೊಂದಿಷ್ಟು ಮಂದಿಯಾದ್ರೆ, ಕೆಲಸ ಎಷ್ಟು ಮಾಡ್ತೇವೆ ಎಂಬುದು ಮುಖ್ಯವಲ್ಲ, ಕೆಲಸ ಹೇಗೆ ಮಾಡ್ತೇವೆ ಎಂಬುದು ಮುಖ್ಯ. ನಿಮ್ಮ ಬುದ್ಧಿವಂತಿಕೆ ಕೆಲಸದಿಂದ ಹಣ ಸಂಪಾದನೆ ಸಾಧ್ಯ ಎಂದು ವಾದ ಮಾಡುವವರಿದ್ದಾರೆ. ಇದಕ್ಕೆ ಸ್ಟೀವನ್ ಗುವೊ (Steven Guo) ಉತ್ತಮ ನಿದರ್ಶನ. ವಾರದಲ್ಲಿ ಕೇವಲ 30 ಗಂಟೆ ಕೆಲಸ ಮಾಡುವ ಸ್ಟೀವನ್ ಗುವೊ ಸಂಪಾದನೆ ವಾರ್ಷಿಕವಾಗಿ 2.15 ಕೋಟಿ.
ಸ್ಟೀವನ್ ಗುವೊ 24 ವರ್ಷದ ಯುವಕ. ಜೀವನವನ್ನು ಹೇಗೆ ಸಮತೋಲನ ಮಾಡ್ಬೇಕು ಎಂಬುದನ್ನು ಅವರು ಕಲಿತಿದ್ದಾರೆ. ವಾರಕ್ಕೆ 30 ಗಂಟೆ ಕೆಲಸ ಮಾಡುವ ಈ ಉದ್ಯಮಿ (entrepreneur) ವಾರ್ಷಿಕವಾಗಿ 2.15 ಕೋಟಿ ಅಂದರೆ 254,000 ಡಾಲರ್ ಗಳಿಸುತ್ತಾರೆ.
ಸ್ವೀವನ್ ಗುವೊ ಯುನೈಟೆಡ್ ಸ್ಟೇಟ್ ನವರು. ಬಾಲಿಯಲ್ಲಿ ವಾಸವಾಗಿದ್ದಾರೆ. ಜೀವನದಲ್ಲಿ ಸಮತೋಲನ ಬಯಸಿದ್ದ ಸ್ಟೀವನ್ ಗುವೊ, ಅಮೆರಿಕಾದಿಂದ ದೂರ ಬಂದಿರುವುದಾಗಿ ಹೇಳಿದ್ದಾರೆ. ಬಾಲಿಯಲ್ಲಿ ಜೀವನ ಎಂಜಾಯ್ ಮಾಡ್ತಿರುವ ಸ್ಟೀವನ್ ಗುವೊ: ಬಾಲಿ ನಿಜವಾಗಿಯೂ ಕೆಲಸ ಮತ್ತು ವೈಯಕ್ತಿಕ ಜೀವನ ಸಮತೋಲನಗೊಳಿಸುವ ಸ್ಥಳ ಎಂದು ಗುವೋ ಹೇಳಿದ್ದಾರೆ. ಬೆಳಿಗ್ಗೆ ಗುವೋ ತಮ್ಮ ಬ್ಯುಸಿನೆಸ್ ಗೆ ಸಂಬಂಧಿಸಿದ ಕೆಲಸಗಳನ್ನು ಮಾಡ್ತಾರೆ. ಮಧ್ಯಾಹ್ನದ ಮೇಲೆ ಸರ್ಫಿಂಗ್ ಮಾಡುವುದು ಮತ್ತು ಬಾಲಿ ಸಂಸ್ಕೃತಿಯನ್ನು ಆನಂದಿಸುವುದರಲ್ಲಿ ಸಮಯ ಕಳೆಯುತ್ತಾರೆ.
undefined
ಅತಿ ಹೆಚ್ಚು ಬೇಡಿಕೆ ಇರೋ ಈ ಬ್ಯುಸಿನೆಸ್ ಶುರು ಮಾಡಿ ಸಂಪಾದನೆ ಆರಂಭಿಸಿ
ಸ್ಟೀವನ್ ಗುವೊ ಯಾರು? : ಜೀವನವನ್ನು ಇಷ್ಟೆಲ್ಲ ಎಂಜಾಯ್ ಮಾಡುವ ಸ್ವೀವನ್ ಗುವೊ ಯಾರು ಎನ್ನುವ ಪ್ರಶ್ನೆ ನಿಮ್ಮೆಲ್ಲರನ್ನು ಕಾಡ್ತಿರಬಹುದು. ಸ್ವೀವನ್ ಗುವೊ ಒಬ್ಬ ಬ್ಯುಸಿನೆಸ್ ಮೆನ್. ತಮ್ಮ 12ನೇ ವಯಸ್ಸಿನಲ್ಲಿಯೇ ದುಡಿಮೆ ಶುರು ಮಾಡಿದ ಯುವಕ. ಆಟವಾಡಲು ಸ್ವೀವನ್, Minecraft ಸರ್ವರ್‌ಗಳನ್ನು ಹೋಸ್ಟ್ ಮಾಡಿದ್ದರು. ಕೆಲ ದಿನಗಳಲ್ಲೇ ಜನರು ಇದರ ಮೂಲಕ ಆಟವಾಡಲು ಬಯಸ್ತಿದ್ದಾರೆ ಎಂಬುದು ಗುವೊಗೆ ತಿಳಿಯಿತು. ಹಾಗಾಗಿ ಆನ್ಲೈನ್ ಗೆ ಬರುವ ನಿರ್ಧಾರ ತೆಗೆದುಕೊಂಡರು. ಮೊದಲ ಬಾರಿಗೆ ಅವರಿಗೆ 50 ಡಾಲರ್ ಸಿಕ್ಕಿತ್ತು. ಕೆಲವೇ ತಿಂಗಳುಗಳಲ್ಲಿ ಇದರಿಂದ 10,000 ಡಾಲರ್ ಗಳಿಸಿದ್ದರು.
ಕೈ ಸುಟ್ಟುಕೊಂಡ ಮೇಲೆ ಬುದ್ಧಿ ಬಂತು : ಇಂಟರ್ ನೆಟ್ ನಲ್ಲಿ ಇಷ್ಟೊಂದು ಹಣವಿದೆ ಎಂಬುದು ಮೊದಲು ಸ್ವೀವನ್ ಗೆ ತಿಳಿದಿರಲಿಲ್ಲ. ಗಳಿಕೆ ಶುರುವಾಗ್ತಿದ್ದಂತೆ ಗೇಮ್ ಡೆವಲಪ್‌ಮೆಂಟ್ ಕಂಪನಿಯನ್ನು ಸ್ವೀವನ್ ಗುವೊ ಪ್ರಾರಂಭಿಸಿದ್ರು. ಆದ್ರೆ ಇದು ಕೈ ಹಿಡಿಯಲಿಲ್ಲ. ಗುವೊ ತಮ್ಮ ಕೆಲಸದಲ್ಲಿ ವಿಫಲವಾದ್ರು. ಬಾರೀ ನಷ್ಟ ಅನುಭವಿಸಿದ್ರು. ಗಳಿಸಿದ ಹಣವನ್ನು ಕಳೆದುಕೊಂಡ ಗುವೋ ತಪ್ಪೆಲ್ಲಾಗಿದೆ ಎಂಬುದನ್ನು ಕಂಡುಕೊಂಡರು.
ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣ : ಗೇಮ್ ಡೆವಲಪ್ ಮೆಂಟ್ ಕಂಪನಿ ಶುರು ಮಾಡಿದ್ದ ಗುವೊಗೆ, ವ್ಯವಹಾರಕ್ಕೆ ಮಾರ್ಕೆಟಿಂಗ್ ಬಹಳ ಮುಖ್ಯ ಎಂಬುದು ಅರಿಯಾಯ್ತು. ಅದನ್ನು ಕಲಿಯಲು ನಿರ್ಧರಿಸಿದ್ರು. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಎಕಾನೊಮಿ ಅಧ್ಯಯನ ಮಾಡಿದರು.
ಹೈಸ್ಕೂಲ್ ಡ್ರಾಪೌಟ್ ಅದಾನಿಗೆ ಡಾ.ಪ್ರೀತಿ ಅದಾನಿ ಜೊತೆ ಲವ್ ಶುರುವಾಗಿದ್ದು ಹೇಗೆ?
ಕೆಲಸದ ಬದಲು ವ್ಯಾಪಾರ : ಗುವೊ ಮಾರ್ಕ್ಸ್ ಉತ್ತಮವಾಗಿರಲಿಲ್ಲ. ಆಸಕ್ತಿ ಕೆಲಸಕ್ಕಿಂತ ವ್ಯಾಪಾರದ ಮೇಲೆ ಹೆಚ್ಚಿತ್ತು. ಹಾಗಾಗಿ ಗುವೊ ಬ್ಯುಸಿನೆಸ್ ಆಯ್ಕೆ ಮಾಡ್ಕೊಂಡರು. ಸದ್ಯ ಯುಎಸ್, ಫಿಲಿಪೈನ್ಸ್, ಯುಕೆ ಮತ್ತು ಭಾರತದಲ್ಲಿ 19 ಉದ್ಯೋಗಿಗಳೊಂದಿಗೆ ಗುವೊ ತಮ್ಮ ಕಂಪನಿಯನ್ನು ನಡೆಸುತ್ತಿದ್ದಾರೆ. ಗುವೊ ಬ್ಯುಸಿನೆಸ್ ನಲ್ಲಿ ಕರ್ಜೂರ ಮಾರಾಟ ಮಾಡುವ ಆನ್‌ಲೈನ್ ಚಿಲ್ಲರೆ ವ್ಯಾಪಾರಿ, ಕೆ-ಪಾಪ್-ಪ್ರೇರಿತ ಸರಕುಗಳ ಅಂಗಡಿ ಮತ್ತು ಐಷಾರಾಮಿ ಕಾರುಗಳಿಗಾಗಿ ಪ್ರೀಮಿಯಂ ಕಾರ್ ಕವರ್‌ಗಳನ್ನು ಮಾರಾಟ ಮಾಡುವ ಕಂಪನಿ ಸೇರಿವೆ. ಪ್ರವಾಸದ ಮೇಲೆ ಆಸಕ್ತಿ ಹೊಂದಿರುವ ಗೆವೋ ಈವರೆಗೆ 15 ದೇಶಗಳಿಗೆ ಭೇಟಿ ನೀಡಿದ್ದಾರೆ.