BUSINESS
ಪರಸ್ಪರ ತಿಳುವಳಿಕೆ ಮತ್ತು ಬೆಂಬಲ ಇದ್ದಾಗ ಶೈಕ್ಷಣಿಕ ವ್ಯತ್ಯಾಸಗಳು ಮುಖ್ಯವಲ್ಲ. ಗೌತಮ್ ಮತ್ತು ಪ್ರೀತಿ ಅದಾನಿ ಅವರ ಬದುಕು ಇದಕ್ಕೆ ಉದಾಹರಣೆ
ಗೌತಮ್ ಅದಾನಿ ಹೈಸ್ಕೂಲ್ ವರಗೆ ಓದಿ, ಕಾಲೇಜು ಸೇರಿ ಬಿಟ್ಟಿದ್ದಾರೆ. ಆದರೆ ವ್ಯಾಪಾರ ವಹಿವಾಟಿನಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ.
ಪ್ರೀತಿ ಅದಾನಿ ಅಹಮದಾಬಾದ್‌ನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಿಂದ ಬಿಡಿಎಸ್ ಪದವಿ ಪಡೆದಿದ್ದಾರೆ.
ವೈದ್ಯೆಯಾಗಿದ್ದ ಪ್ರೀತಿ ಗೌತಮ್ ಅದಾನಿ ಮದುವೆಯಾದರು. ಭಿನ್ನ ಶೈಕ್ಷಣಿಕ ಹಿನ್ನಲೆ ಇದ್ದರೂ ಪ್ರೀತಿಯಿಂದಲೇ ಜೀವನ ಸಾಗಿಸಿದ್ದಾರೆ.
ಪ್ರೀತಿ ತಂದೆ ಸೆವಂತಿಲಾಲ್, ಗೌತಮ್ ಅದಾನಿ ಸಾಮರ್ಥ್ಯವನ್ನು ಗುರುತಿಸಿದರು.ಇದು ಮದುವೆ ಪ್ರಸ್ತಾಪಕ್ಕೆ ನಾಂದಿ ಹಾಡತು.
ಗೌತಮ್ ಭೇಟಿಯಾದಾಗ ಪ್ರೀತಿಗೆ ಪ್ರೀತಿ ಹುಟ್ಟಿರಲಿಲ್ಲ. ಅವರ ದೂರದೃಷ್ಟಿ , ಚಿಂತನೆ, ಉದ್ಯಮ ಕ್ಷೇತ್ರದ ಜ್ಞಾನ, ಮಾತುಕತೆ ಮೂಲಕ ಪ್ರೀತಿ ಶುರುವಾಗಿತ್ತು.
ಗೌತಮ್ ಅದಾನಿ-ಪ್ರೀತಿ ಅದಾನಿ ವಿವಾಹ 1986 ರಲ್ಲಿ ನಡೆಯಿತು.
ಮದುವೆ ಬಳಿಕ ದಂತ ವೈದ್ಯ ವೃತ್ತಿ ತೊರೆದ ಪ್ರೀತಿ ಗೃಹಣಿಯಾಗಿ ಅದಾನಿ ಬೆಂಬಲಕ್ಕೆ ನಿಂತರು.
ಗೌತಮ್ ಅದಾನಿ ಯಶಸ್ಸಿನಲ್ಲಿ ಪತ್ನಿ ಪ್ರೀತಿ ಪಾತ್ರ ಪ್ರಮುಖ. ಜೀವನ ಶ್ರೀಮಂತಗೊಳಿಸಿದ್ದಲ್ಲದೆ ಕನಸುಗಳು ಬಿತ್ತಿ ನನಸು ಮಾಡಲು ನೆರವು ನೀಡಿದರು.
ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ ಸುಮಾರು 11.6 ಲಕ್ಷ ಕೋಟಿ ರೂ. ಪ್ರೀತಿ ಅದಾನಿ ಅವರ ನಿವ್ವಳ ಮೌಲ್ಯ ಸುಮಾರು ₹8,327 ಕೋಟಿ