1 ಸಾವಿರ ಉದ್ಯೋಗಿಗಳಿಗೆ ವಿದೇಶ ಪ್ರವಾಸ ಭಾಗ್ಯ ಕಲ್ಪಿಸಿ, ಹೃದಯದ ಮಾತು ಬಿಚ್ಚಿಟ್ಟ ಕಂಪನಿ

By Mahmad Rafik  |  First Published Nov 21, 2024, 10:13 AM IST

ಚೆನ್ನೈ ಮೂಲದ Casagrand ಕಂಪನಿ ತನ್ನ 1,000 ಉದ್ಯೋಗಿಗಳಿಗೆ 'ಪ್ರಾಫಿಟ್-ಷೇರ್ ಬೋನಸ್' ಅಡಿಯಲ್ಲಿ ಒಂದು ವಾರದ ಸ್ಪೇನ್ ಪ್ರವಾಸವನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಯಶಸ್ಸಿಗೆ ಕಾರಣವಾದ ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಶ್ರದ್ಧೆಗೆ ಪ್ರತಿಫಲವಾಗಿ ಈ ಪ್ರವಾಸವನ್ನು ಆಯೋಜಿಸಲಾಗಿದೆ.


ಚೆನ್ನೈ: ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್ ಮತ್ತು ಗಿಫ್ಟ್ ಕೊಡುತ್ತಿರುತ್ತವೆ. ಈ ಗಿಫ್ಟ್ ಮತ್ತು  ಬೋನಸ್ ಉದ್ಯೋಗಿಗಳಲ್ಲಿ ಕೆಲಸದ ಉತ್ಸಾಹವನ್ನು ಹೆಚ್ಚಳ ಮಾಡುತ್ತದೆ. ಚೆನ್ನೈ ಮೂಲದ ರಿಯುಲ್ ಎಸ್ಟೇಟ್ Casagrand ಕಂಪನಿ ತನ್ನ 1,000 ಉದ್ಯೋಗಿಗಳಿಗೆ ದೊಡ್ಡ ಗಿಫ್ಟ್ ನೀಡಿದೆ. 1,000 ಉದ್ಯೋಗಿಗಳನ್ನು ಒಂದು ವಾರದ ಅವಧಿಗೆ ವಿದೇಶ ಪ್ರವಾಸಕ್ಕೆ ಕಳುಹಿಸಿದೆ. ಉದ್ಯೋಗಿಗಳ ಎಲ್ಲಾ ವೆಚ್ಚಗಳನ್ನು ಕಂಪನಿಯೇ ನೋಡಿಕೊಂಡಿರೋದು ಗಮನಾರ್ಹ. 

ಈ ವಿದೇಶ ಪ್ರವಾಸವನ್ನು 'ಪ್ರಾಫಿಟ್-ಷೇರ್ ಬೋನಸ್' ಅಡಿಯಲ್ಲಿ ನೀಡಲಾಗಿದೆ. ಇದಕ್ಕೂ ಮೊದಲು ಅಂದ್ರೆ ಹಿಂದಿನ ವರ್ಷ ಇದೇ ಕಂಪನಿ ತನ್ನ ಉದ್ಯೋಗಿಗಳಿಗೆ ಆಸ್ಟ್ರೇಲಿಯಾ ಪ್ರವಾಸದ ಭಾಗ್ಯವನ್ನು ಕಲ್ಪಿಸಿತ್ತು. ಕಂಪನಿಯ ಯಶಸ್ಸಿಗೆ ಕಾರಣವಾದ ಉದ್ಯೋಗಿಗಳನ್ನು ಗುರುತಿಸಿ ಬಹುಮಾನದ ರೂಪದಲ್ಲಿ ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತದೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಪ್ರತಿಫಲವಾಗಿ ಉದ್ಯೋಗಿಗಳು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಕಂಪನಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.  

Tap to resize

Latest Videos

undefined

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯ ಮಾರಾಟದ ಟಾರ್ಗೆಟ್ ತಲುಪವಲ್ಲಿ ಉದ್ಯೋಗಿಗಳ ಪಾತ್ರ ಪ್ರಮುಖವಾಗಿದೆ. ಉದ್ಯೋಗಿಗಳ ಸಮರ್ಪಣೆ, ಬದ್ಧತೆ ಮತ್ತು ಸಹಕಾರಕ್ಕೆ ಪ್ರತಿಯಾಗಿ ಪ್ರವಾಸ ಅಯೋಜನೆ ನೀಡಲಾಗಿದೆ. ಇಂತಹ ಪ್ರಶಂಸೆ ಉದ್ಯೋಗಿಗಳಿಗೆ ತಮ್ಮ ಕೆಲಸದ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಇದರೊಂದಿಗೆ ಕಂಪನಿ ಮೇಲಿನ ನಂಬಿಕೆ ಹೆಚ್ಚಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. 

ಇದನ್ನೂ ಓದಿ:ದೈತ್ಯ ಕಂಪನಿಗಳಿಗೆ ಮಹಾ ಟಕ್ಕರ್; ಅಮೆಜಾನ್‌, ಫ್ಲಿಪ್‌ಕಾರ್ಟ್‌ ಬಿಗ್ ಶಾಕ್!

ಪ್ರವಾಸಕ್ಕೆ ಎಲ್ಲಾ ವಿಭಾಗದಿಂದ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯನಿರ್ವಾಹಕರಿಂದ ಸೀನಿಯರ್ ಅಧಿಕಾರಿಗಳಿಗೂ ಒಂದೇ ಮಾದರಿಯ ಪ್ರವಾಸದ ಆಫರ್ ನೀಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಗುರಿ ತಲುಪಲು ಕಾರಣರಾದ ಉದ್ಯೋಗಿಗಳ  ಕಠಿಣ ಪರಿಶ್ರಮ, ಸಮರ್ಪಣೆಯನ್ನು ಗುರುತಿಸುವ ಕೆಲಸ ಇದಾಗಿದೆ. ಹಾಗಾಗಿ ಅತ್ಯಂತ ಮತ್ತು ಪ್ರೀತಿಯಿಂದ ಪ್ರವಾಸಕ್ಕೆ ಕಳುಹಿಸಲಾಗಿದೆ ಎಂದು ಕಂಪನಿ ಹೇಳಿದೆ. 

ವರದಿಯ ಪ್ರಕಾರ, ಉದ್ಯೋಗಿಗಳಿಗೆ ಸ್ಪೇನ್ ಸುತ್ತುವ ಅವಕಾಶ ಸಿಗಲಿದೆ. ಈ ಪ್ರವಾಸದಲ್ಲಿ ಸಗ್ರಾಡಾ ಫ್ಯಾಮಿಲಿಯಾ, ಪಾರ್ಕ್ ಗುಯೆಲ್, ಮಾಂಟ್ಜುಕ್ ಕ್ಯಾಸಲ್‌, ಸುಂದರ ಬೀಚ್‌ಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ಮೂಲಕ ಭಾರತ ಮತ್ತು ದುಬೈನಲ್ಲಿರುವ ಉದ್ಯೋಗಿಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಕಂಪನಿ ಮಾಡುತ್ತಿದೆ. 

ಇದನ್ನೂ ಓದಿ: 1 ಷೇರು, 4 ವರ್ಷ; 5 ಲಕ್ಷಕ್ಕೆ ಸಿಕ್ಕಿದ್ದು 5 ಕೋಟಿ ರೂಪಾಯಿ, ಐಸ್‌ಕ್ರೀಂ ಮಾರಾಟಗಾರ ಇಂದು ಕೋಟ್ಯಧಿಪತಿ

click me!