ಕೆಲವೊಂದು ವ್ಯವಹಾರ ಶುರು ಮಾಡಲು ನೀವು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡ್ಬೇಕು. ಆದ್ರೆ ಇಂದು ನಾವು ಹೇಳ್ತಿರುವ ವ್ಯವಹಾರಕ್ಕೆ 50 ಸಾವಿರ ರೂಪಾಯಿ ಬಂಡವಾಳ ಹಾಕಿದ್ರೆ ಸಾಕು. ಅತಿ ಹೆಚ್ಚು ಬೇಡಿಕೆಯಿರುವ ಈ ವ್ಯಾಪಾರ ಸದಾ ನಿಮ್ಮ ಕೈ ಹಿಡಿಯೋದ್ರಲ್ಲಿ ಎರಡು ಮಾತಿಲ್ಲ.
ಮಕ್ಕಳನ್ನು ಶಾಲೆಗೆ ಕಳುಹಿಸಿದ್ರೆ ಆಗ್ಲಿಲ್ಲ. ಅವರಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ನೀಡ್ಬೇಕಾಗುತ್ತದೆ. ಅಷ್ಟೇ ಅಲ್ಲ, ಪೆನ್ಸಿಲ್, ಪೆನ್ ಇವೆಲ್ಲ ಒಮ್ಮೆ ತಂದುಕೊಟ್ರೆ ಮುಗಿಲಿಲ್ಲ. ತಿಂಗಳಿಗೊಂದಿಷ್ಟು ಪೆನ್ಸಿಲ್, ಪೆನ್ ಅವಶ್ಯಕತೆ ಮಕ್ಕಳಿಗಿರುತ್ತದೆ. ಇದಲ್ಲದೆ ಮಕ್ಕಳ ಆರ್ಟ್ ಕ್ಲಾಸ್ (Art Class),ಪ್ರಾಜೆಕ್ಟ್ ಗೆ ಅನೇಕ ವಸ್ತುಗಳ ಅಗತ್ಯವಿರುತ್ತದೆ. ಪೇಪರ್‌ನಿಂದಹಿಡಿದು ಬಣ್ಣ ಬಣ್ಣದ ಡೆಕೋರೇಷನ್ ಐಟಂ ಗಳನ್ನು ಪಾಲಕರು ಮಕ್ಕಳಿಗೆ ನೀಡ್ಬೇಕು. ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತಿ ವಹಿಸುವ ಪಾಲಕರು ಎಷ್ಟು ಕಷ್ಟವಾದ್ರೂ ಇವುಗಳನ್ನು ಮಕ್ಕಳಿಗೆ ನೀಡ್ತಾರೆ. ಮಕ್ಕಳಿಗೆ ಇದೆಲ್ಲ ಅಗತ್ಯವಿದೆ ಅಂದ್ಮೇಲೆ ಇದಕ್ಕೆ ಉತ್ತಮ ಬೇಡಿಕೆ ಇದೆ ಎಂದೇ ಅರ್ಥ. ಹಾಗಿದ್ರೆ ಏನ್ ತಡ. ಬ್ಯುಸಿನೆಸ್ ಶುರು ಮಾಡ್ಬೇಕು, ಏನ್ ಮಾಡ್ಬೇಕು ಅಂತಾ ಗೊತ್ತಾಗ್ತಿಲ್ಲ ಅಂತಾ ನೀವು ಈಗ್ಲೂ ಚಿಂತೆ ಮಾಡ್ತಿದ್ದರೆ ಸ್ಟೇಷನರಿ ವ್ಯಾಪಾರಕ್ಕೆ ಕೈ ಹಾಕಿ.
ಮೊದಲೇ ಹೇಳಿದಂತೆ ಪೆನ್, ಪೆನ್ಸಿಲ್, A4 ಗಾತ್ರದ ಕಾಗದ, ನೋಟ್‌ಪ್ಯಾಡ್, ಗ್ರೀಟಿಂಗ್ ಕಾರ್ಡ್‌ಗಳು, ಎಕ್ಸಾಂ ಪ್ಯಾಡ್, ಪೌಚ್, ಜಾಮೆಟ್ರಿ ಬಾಕ್ಸ್, ಬಣ್ಣ, ಬ್ರೆಷ್ ,ಮದುವೆ ಕಾರ್ಡ್‌ಗಳು, ಉಡುಗೊರೆ ಕಾರ್ಡ್‌ಗಳು ಸೇರಿದಂತೆ ಸಾಕಷ್ಟು ಐಟಂಗಳು ಇದರ ಅಡಿಯಲ್ಲಿ ಬರುತ್ತವೆ. ನೀವು ನಿಮಗೆ ಸಾಧ್ಯವಿದ್ದಷ್ಟು ಅಥವಾ ನಿಮ್ಮ ಪ್ರದೇಶದಲ್ಲಿ ಮಕ್ಕಳಿಗೆ ಅಗತ್ಯವಿದ್ದಷ್ಟು ವಸ್ತುಗಳನ್ನು ಮಾತ್ರ ಇಡಬಹುದು.
ಸ್ಟೇಷನರಿ ಅಂಗಡಿ ತೆಗೆಯುವುದು ಹೇಗೆ? : ಸ್ಟೇಷನರಿ ಅಂಗಡಿಯನ್ನು ತೆರೆಯಲು ನಿಮಗೆ ಸುಮಾರು 400 ಚದರ ಮೀಟರ್ ಜಾಗ ಬೇಕಾಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ನಿಮ್ಮ ಅಂಗಡಿಯನ್ನು `ಶಾಪ್ ಆಂಡ್ ಎಸ್ಟಾಬ್ಲಿಷ್ಮೆಂಟ್’ ಕಾಯಿದೆ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ವ್ಯವಹಾರವನ್ನು ಅತ್ಯಂತ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದು. ಯೋಗ್ಯವಾದ ಸ್ಟೇಷನರಿ ಅಂಗಡಿಯನ್ನು ತೆರೆಯಲು ನಿಮಗೆ ಸುಮಾರು 50 ಸಾವಿರ ರೂಪಾಯಿಗಳು ಬೇಕಾಗುತ್ತವೆ. ನಿಮ್ಮ ಬಜೆಟ್ ಪ್ರಕಾರ, ನೀವು ವ್ಯವಹಾರದಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು. ಶಾಲೆಯ ಅಕ್ಕಪಕ್ಕ ಅಥವಾ ಜನನಿಬಿಡ ಪ್ರದೇಶದಲ್ಲಿಯೇ ಮನೆಯಿದೆ ಎಂದಾದ್ರೆ ನೀವು ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಇದನ್ನು ಶುರು ಮಾಡಬಹುದು.
ಸ್ಟೇಷನರಿ ವ್ಯಾಪಾರದ ಪ್ರಚಾರ ಹೇಗೆ? : ಸ್ಟೇಷನರಿ ಅಂಗಡಿಗೆ ಸಾಮಾನ್ಯವಾಗಿ ಪ್ರಚಾರದ ಅಗತ್ಯವಿರುವುದಿಲ್ಲ. ಯಾಕೆಂದ್ರೆ ಮಕ್ಕಳಿಗೆ ಇದ್ರ ಅಗತ್ಯತೆ ಹೆಚ್ಚಿರುವ ಕಾರಣ ಪಾಲಕರು ಸ್ಟೇಷನರಿ ಅಂಗಡಿ ಹುಡುಕಿಕೊಂಡು ಬರ್ತಾರೆ. ಆದ್ರೆ ಇಷ್ಟು ಸಾಲದು ಎನ್ನುವವರು ಕರಪತ್ರ ಮಾಡಿ ಹಂಚಬಹುದು. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಕರಪತ್ರ ನೀಡಬಹುದು. ಸಾಮಾಜಿಕ ಜಾಲತಾಣದ ಮೂಲಕವೂ ನೀವು ಮಾರ್ಕೆಟಿಂಗ್ ಮಾಡಬಹುದು.
Business Idea : ಕಣ್ಣೀರು ತರಿಸೋ ಈರುಳ್ಳಿ ಈ ವ್ಯವಹಾರ ಶುರು ಮಾಡಿ ಹಣಗಳಿಸಿ
ವ್ಯಾಪಾರದ ವೃದ್ಧಿ ಹೇಗೆ ? : ಅಂಗಡಿಗೆ ಬರುವ ಗ್ರಾಹಕರಿಗೆ ಮಾತ್ರವಲ್ಲದೆ ನೀವು ಹೋಮ್ ಡೆಲಿವರಿ ಮಾಡುವ ಮೂಲಕವೂ ನಿಮ್ಮ ವ್ಯಾಪಾರವನ್ನು ವೃದ್ಧಿಸಬಹುದು. ಹಾಗೆ ಸಾಮಾಜಿಕ ಜಾಲತಾಣಗಳ ಮೂಲಕ ಆರ್ಡರ್ ಪಡೆದು ನೀವು ಅವರಿಗೆ ಕೊರಿಯರ್, ಪೋಸ್ಟ್ ಮೂಲಕ ತಲುಪಿಸಬಹುದು.
Business Ideas: ಮನೆಯಲ್ಲೇ ಕುಳಿತು ಹಣ ಗಳಿಸಲು ಇಲ್ಲಿದೆ ಉಪಾಯ
ಸ್ಟೇಷನರಿ ವ್ಯಾಪಾರದಿಂದ ಲಾಭ : ಸ್ಟೇಷನರಿ ಅಂಗಡಿ ಮೂಲಕ ನೀವು ಹೆಚ್ಚು ಲಾಭಗಳಿಸಬಹುದು. ಬ್ರಾಂಡೆಡ್ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ ನೀವು 30 ರಿಂದ 40 ಪ್ರತಿಶತದವರೆಗೆ ಹಣ ಗಳಿಸಬಹುದು. ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ 2 ರಿಂದ 4 ಪಟ್ಟು ಲಾಭವನ್ನು ಗಳಿಸಬಹುದು. 50 ಸಾವಿರ ರೂಪಾಯಿ ವೆಚ್ಚದಲ್ಲಿ ಅಂಗಡಿ ತೆರೆದಿದ್ದರೆ, ತಿಂಗಳಿಗೆ 20 ಸಾವಿರ ರೂಪಾಯಿಗಳವರೆಗೆ ಲಾಭ ಮಾಡಬಹುದು. ನಿಮ್ಮ ಅಂಗಡಿ ಯಾವ ಪ್ರದೇಶದಲ್ಲಿದೆ ಹಾಗೂ ನೀವು ಯಾವೆಲ್ಲ ವಸ್ತುಗಳನ್ನು ಮಾರಾಟ ಮಾಡ್ತಿದ್ದೀರಿ ಎಂಬುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ.