
ನವದೆಹಲಿ: ಇಂದು ಬ್ಯಾಂಕ್‌ಗಳು ಕೇವಲ ಹಣ ತೆಗೆದುಕೊಳ್ಳುವ ಮತ್ತು ನೀಡುವ ಕೆಲಸವನ್ನು ಮಾಡುವುದಿಲ್ಲ. ಹಣಕಾಸಿನೇತರ ವ್ಯವಹಾರಗಳನ್ನು ಬ್ಯಾಂಕ್‌ಗಳು ನಿರ್ವಹಿಸುತ್ತವೆ. ಬ್ಯಾಂಕ್‌ಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನಾನಾ ಆಫರ್‌ಗಳನ್ನು ನೀಡುತ್ತಿವೆ. ಖಾಸಗಿ ಬ್ಯಾಂಕ್‌ಗಳು ತಮ್ಮಲ್ಲಿ ಸ್ಯಾಲರಿ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲದೇ ಕ್ರೆಡಿಟ್ ಕಾರ್ಡ್ ವಿತರಿಸುವ ಸೇರಿದಂತೆ ಹಲವು ಆಫರ್ ನೀಡುತ್ತಿರುತ್ತವೆ. ನಿಮ್ಮದು ಸಹ ಸ್ಯಾಲರಿ ಅಕೌಂಟ್ ಇದೆಯಾ? ಆ ಆ ಖಾತೆಯಿಂದ ನಿಮಗೆ ಹೆಚ್ಚುವರಿಯಾಗಿ ಏನೆಲ್ಲಾ ಲಾಭ ಸಿಗುತ್ತಿದೆಯಾ ಎಂದು ಗೊತ್ತಿದೆಯಾ? ಇಂದು ನಾವು ನಿಮಗೆ ದೇಶದ ಅತಿದೊಡ್ಡ ಬ್ಯಾಂಕ್ ತನ್ನ ಸ್ಯಾಲರಿ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಯಾವೆಲ್ಲಾ ಲಾಭಗಳನ್ನು ನೀಡುತ್ತಿದೆ ಎಂಬುದನ್ನು ಹೇಳುತ್ತಿದ್ದೇವೆ.
ಸ್ಟೇರ್ ಬ್ಯಾಂಕ್ ಆಫ್ ಇಂಡಿಯಾದ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಎಸ್‌ಬಿಐ ಹಣಕಾಸಿನ ವ್ಯವಹಾರದ ಜೊತೆ ಹೆಚ್ಚುವರಿಯಾಗಿ ಅನೇಕ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ನೀವು ಸಂಬಳದ ಉದ್ಯೋಗಿಯಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಯಾಲರಿ ಅಕೌಂಟ್ ಹೊಂದಿದ್ದರೆ ಯಾವೆಲ್ಲಾ ಲಾಭಗಳು ನಿಮಗೆ ಸಿಗಲಿವೆ ಎಂಬುದರ ಮಾಹಿತಿ ಇಲ್ಲಿದೆ.
ಎಸ್‌ಬಿಐ ಸ್ಯಾಲರಿ ಅಕೌಂಟ್ ಲಾಭಗಳು
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಯಾಲರಿ ಅಕೌಂಡ್ ಝೀರೋ ಬ್ಯಾಲೆನ್ಸ್‌ನಲ್ಲಿಯೇ ಆರಂಭಿಸಲಾಗುತ್ತದೆ.
*ಸಂಬಳ ಖಾತೆದಾರರಿಗೆ . 40 ಲಕ್ಷದವರೆಗಿನ ಉಚಿತ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ.
*1 ಕೋಟಿ ರೂಪಾಯಿಗಳ ಉಚಿತ ವಿಮಾನ ಅಪಘಾತ ವಿಮೆಯನ್ನು ಎಸ್‌ಬಿಐ ತನ್ನ ಗ್ರಾಹಕರಿಗೆ ನೀಡುತ್ತದೆ.
*ಸ್ಯಾಲರಿ ಅಕೌಂಟ್ ಹೊಂದಿರುವ ಗ್ರಾಹಕ ವಿಮಾನ ಅಪಘಾತದಲ್ಲಿ ಮೃತರಾದ್ರೆ, ಆತನ ವಾರಸುದಾರರಿಗೆ/ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರದ ಮೊತ್ತ ಸಿಗುತ್ತದೆ.
* ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂನಿಂದ ಉಚಿತ ಹಣವನ್ನು ಪಡೆಯಬಹುದು.
* ಗ್ರಾಹಕರು ವಾಹನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲದ ಮೇಲೆ ಹೆಚ್ಚುವರಿ ಲಾಭಗಳನ್ನು ಪಡೆಯುತ್ತಾರೆ.
* ಎಸ್‌ಬಿಐ ಸಂಬಳದ ಖಾತೆದಾರರು ಪ್ರತಿ ವರ್ಷ ಲಾಕರ್ ಬಾಡಿಗೆಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ.
* ನೀವು ಯೋನೋ ಆಪ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಆಫರ್‌ಗಳ ಲಾಭವನ್ನು ಸಹ ಪಡೆಯಬಹುದು.
* ಖಾತೆದಾರರು ಡಿಮ್ಯಾಟ್ ಮತ್ತು ಆನ್‌ಲೈನ್ ವಹಿವಾಟಿನ ಲಾಭವನ್ನೂ ಪಡೆಯುತ್ತಾರೆ.
* ಮಲ್ಟಿ-ಸಿಟಿ ಚೆಕ್, ಡ್ರಾಫ್ಟ್, ಎಸ್‌ಎಂಎಸ್ ಎಚ್ಚರಿಕೆಗಳು ಇತ್ಯಾದಿಗಳಂತಹ ಅಗತ್ಯ ಉಚಿತ ಸೇವೆಗಳನ್ನು ಸಹ ಗ್ರಾಹಕರಿಗೆ ಒದಗಿಸಲಾಗುತ್ತದೆ.
ಇದನ್ನೂ ಓದಿ: ಜೀರೋ ಬ್ಯಾಲೆನ್ಸ್ ಅಕೌಂಟ್‌ನಿಂದ 5 ವರ್ಷದಲ್ಲಿ 300 ಕೋಟಿ ಗಳಿಸಿದ SBI!
ಸ್ಯಾಲರಿ ಖಾತೆ ಹೊಂದಿರುವ ಗ್ರಾಹಕರ ಖಾತೆಗೆ ಸತತ ಮೂರು ತಿಂಗಳು ಸಂಬಳದ ಹಣ/ಮೊತ್ತ ಜಮೆ ಆಗದಿದ್ದಾಗ, ಅದನ್ನು ಸೇವಿಂಗ್ ಅಕೌಂಟ್ ( ಉಳಿತಾಯದ ಖಾತೆ) ಎಂದು ಪರಿಗಣಿಸಲಾಗುತ್ತದೆ. ಉಳಿತಾಯ ಖಾತೆಯಾಗಿ ಬದಲಾಗುತ್ತಿದ್ದಂತೆ ಎಲ್ಲಾ ಸ್ಯಾಲರಿ ಅಕೌಂಟ್ ಲಾಭಗಳು ರದ್ದಾಗುತ್ತವೆ. ಉಳಿತಾಯ ಖಾತೆದಾರರು ಕನಿಷ್ಠ ಮೊತ್ತ ನಿರ್ವಹಣೆ ಸೇರಿದಂತೆ ಬ್ಯಾಂಕಿನ ಎಲ್ಲಾ ನಿಮಯಗಳನ್ನು ಅನುಸರಿಸಬೇಕಾಗುತ್ತದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ, 1 ಲಕ್ಷ ರೂ.ಗಿಂತ ಹೆಚ್ಚಿನ ಮಾಸಿಕ ವೇತನ ಹೊಂದಿರುವ ಜನರು ಬ್ಯಾಂಕ್‌ನಲ್ಲಿ ಪ್ಲಾಟಿನಂ ಸಂಬಳ ಖಾತೆಯನ್ನು ತೆರೆಯಬಹುದು. ಅದೇ ರೀತಿ ಮಾಸಿಕ 50 ಸಾವಿರದಿಂದ 1 ಲಕ್ಷದವರೆಗೆ ಡೈಮೆಂಟ್ ಖಾತೆ, 25 ಸಾವಿರದಿಂದ 50 ಸಾವಿರದವರೆಗೆ ಗೋಲ್ಡನ್ ಖಾತೆ, 10ರಿಂದ 25 ಸಾವಿರ ಸಂಬಳದ ಸಿಲ್ವರ್ ಖಾತೆ ತೆರೆಯಬಹುದು.
ಇದನ್ನೂ ಓದಿ: 3 ಶತಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾದ ಎಸ್‌ಬಿಐ; ಹಣ ಕ್ರೋಢೀಕರಣ ಹಿಂದಿನ ರಹಸ್ಯ ಏನು?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.