ಗ್ರಾಹಕರಿಗೆ ಗುಡ್‌ ನ್ಯೂಸ್ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಇಂದಿನಿಂದಲೇ ಹೊಸ ನಿಯಮ!

Published : Jun 15, 2025, 07:48 AM IST
SBI ATM Rules

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿತಗೊಳಿಸಿದ ನಂತರ, ಎಸ್‌ಬಿಐ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್ ನಿಡಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ರೆಪೊ ದರ ಕಡಿತದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಗಳ ಬಡ್ಡಿದರವನ್ನು ಶೇಕಡಾ 0.50 ರಷ್ಟು ಕಡಿಮೆ ಮಾಡಿದೆ. ಈ ಮೂಲಕ ಗೃಹಸಾಲ ಪಡೆದುಕೊಂಡವರಿಗೆ ಗುಡ್ ನ್ಯೂಸ್ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬದಲಾವಣೆಯಾದ ಸಾಲ ದರಗಳು ಇಂದಿನಿಂದಲೇ ಅಂದ್ರೆ 15ನೇ ಜೂನ್ 2025ರಿಂದಲೇ ಜಾರಿಗೆ ಬರಲಿವೆ ಎಂದು ಎಸ್‌ಬಿಐ ಹೇಳಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಗೃಹ ಸಾಲಗಳ ಮೇಲಿನ ಬಡ್ಡಿದರವು ಈಗ 7.5-8.45 ಪ್ರತಿಶತದ ನಡುವೆ ಇರುತ್ತದೆ

ಗೃಹಸಾಲದ ಜೊತೆಯಲ್ಲಿಯೇ ಬ್ಯಾಂಕ್ ವಿಶೇಷ ಠೇವಣಿ ಯೋಜನೆಯ (444 ದಿನಗಳು) ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆಯಾಗೋದರಿಂದ ಗ್ರಾಹಕರು ಪಾವತಿಸುವ ಮಾಸಿಕ ಕಂತಿನ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಗ್ರಾಹಕರ ಹಣ ಉಳಿತಾಯವಾಗಲಿದೆ.

ಎಕ್ಸಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಗೃಹಸಾಲ ಎಕ್ಸಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (EBLR) ಸಂಬಂಧಿಸಿವೆ. EBLR ರೆಪೋ ರೇಟ್‌ಗೆ ಸಂಬಂಧಿಸಿರುತ್ತವೆ. ರೆಪೋ ದರದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ EBLR ಮೇಲೆ ನೇರ ಪರಿಣಾಮ ಬೀರುತ್ತಿರುತ್ತದೆ. ಇದರಿಂದ ರೆಪೋ ದರದ ಜೊತೆಯಲ್ಲಿ ಎಸ್‌ಬಿಐ ಹೋಮ್ ಲೋನ್ ಬಡ್ಡಿದರ ಬದಲಾವಣೆ ಆಗುತ್ತಿರುತ್ತವೆ. ರೆಪೋ ರೇಟ್ ಹೆಚ್ಚಾದ್ರೆ EBLR ದರವೂ ಏರಿಕೆಯಾಗುತ್ತದೆ. ಇಳಿಕೆಯಾದ್ರೆ EBLR ಸಹ ಕಡಿಮೆಯಾಗುತ್ತದೆ. ಈ ಎಲ್ಲಾ ಬದಲಾವಣೆಯ ಬೆಳವಣಿಗೆ ಗ್ರಾಹಕರು ಪಡೆದುಕೊಂಡಿರುವ ಗೃಹ ಸಾಲದ ಮೇಲಿನ ಬಡ್ಡಿ ಮೇಲೆ ಪರಿಣಾಮ ಬೀರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತುತ EBLR ಶೇಕಡಾ 8.15 ರಷ್ಟಿದೆ. ಈ ಸಂದರ್ಭದಲ್ಲಿ ಬಡ್ಡಿದರ ಗ್ರಾಹಕರ CIBIL ಸ್ಕೋರ್, ಸಾಲದ ಅವಧಿ, ಬಡ್ಡಿದರದ ಆಯ್ಕೆ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

50 ಬೇಸಿಸ್ ಪಾಯಿಂಟ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 6ನೇ ಜೂನ್ 2025 ರಂದು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತು, 50 ಬೇಸಿಸ್ ಪಾಯಿಂಟ್ ಕಡಿತವಾಗಿರೋದರಿಂದ ರೆಪೋ ದರ ಶೇಕಡಾ 6.00 ರಿಂದ ಶೇಕಡಾ 5.50 ಕ್ಕೆ ಇಳಿದಿದೆ. CIBIL ಸ್ಕೋರ್ 300-900 ರ ನಡುವೆ ಇರುತ್ತದೆ. ನಿಮ್ಮ CIBIL ಸ್ಕೋರ್ ಹೆಚ್ಚಾದಷ್ಟೂ ಕಡಿಮೆ ದರದಲ್ಲಿ ಸಾಲ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ಬಡ್ಡಿದರದ ಆಯ್ಕೆ

ಎಸ್‌ಬಿಐ ಗೃಹ ಸಾಲ ಪಡೆಯುವವರಿಗೆ ಪ್ರಯೋಜನವನ್ನು ನೀಡುತ್ತದೆ. ಸಾಲದ ಮೇಲಿನ ಬಡ್ಡಿ ಕಡಿಮೆಯಾದ್ರೆ, ಮಾಸಿಕವಾಗಿ ಪಾವತಿಸುವ ಇಎಂಐ ಕೂಡ ಕಡಿಮೆ ಇರುತ್ತದೆ. ಇಎಂಐ ಕಡಿಮೆಯಾದಂತೆ ಗ್ರಾಹಕರ ಉಳಿತಾಯವನ್ನು ಹೆಚ್ಚಿಸುತ್ತದೆ. ರೆಪೊ ದರ ಲಿಂಕ್ಡ್ ದರ (ಆರ್‌ಎಲ್‌ಎಲ್‌ಆರ್) ಗೆ ಲಿಂಕ್ ಮಾಡಲಾದ ಫ್ಲೋಟಿಂಗ್ ದರದಲ್ಲಿ ಸಾಲ ಪಡೆದ ಗ್ರಾಹಕರಿಗೆ ಈಗ ಅವರ ಇಎಂಐ ಕೂಡ ಕಡಿಮೆಯಾಗುತ್ತದೆ. ಒಂದು ವೇಳೆ ಗ್ರಾಹಕರು ಗೃಹಸಾಲವನ್ನು ಸ್ಥಿರ ಬಡ್ಡಿ ದರದಲ್ಲಿ ಪಡೆದಿದ್ದರೆ, ಕಡಿಮೆ ಬಡ್ಡಿದರದ ಲಾಭ ನಿಮಗೆ ಅನ್ವಯಿಸಲ್ಲ. ಸಾಲ ಪಡೆದುಕೊಳ್ಳುವಾಗಲೇ ಬ್ಯಾಂಕ್‌ಗಳು ಗ್ರಾಹಕರಿಗೆ ಬಡ್ಡಿದರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿರುತ್ತದೆ.

MCLR ನಲ್ಲಿ ಯಾವುದೇ ಬದಲಾವಣೆ ಇಲ್ಲ

ನಿಧಿ ಆಧಾರಿತ ಸಾಲ ದರದ ಮಾರ್ಜಿನಲ್ ವೆಚ್ಚ (MCLR) ದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು SBI ಹೇಳಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಲು ಸಾಧ್ಯವಾಗದ ಕನಿಷ್ಠ ಬಡ್ಡಿದರ ಇದು, ಆದ್ದರಿಂದ ನಿಮ್ಮ ಸಾಲವನ್ನು MCLR ಗೆ ಲಿಂಕ್ ಮಾಡಿದ್ದರೆ, ದರಗಳು ಒಂದೇ ಆಗಿರುತ್ತವೆ. ಒಂದು ವರ್ಷದ MCLR ಶೇಕಡಾ 9.00, ಆರು ತಿಂಗಳಿಗೆ ಶೇಕಡಾ 8.90, ಮೂರು ತಿಂಗಳಿಗೆ ಶೇಕಡಾ 8.55 ಮತ್ತು ಒಂದು ತಿಂಗಳಿಗೆ ಶೇಕಡಾ 8.20 ಆಗಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!