Special Senior Citizen FD: ಹಿರಿಯ ನಾಗರಿಕರ ಎಫ್ ಡಿಗೆ ಯಾವ ಬ್ಯಾಂಕ್ ಬೆಸ್ಟ್? ಎಲ್ಲಿ ಸಿಗುತ್ತೆ ಹೆಚ್ಚಿನ ಬಡ್ಡಿ ?

Published : May 27, 2022, 04:00 PM IST
Special Senior Citizen FD: ಹಿರಿಯ ನಾಗರಿಕರ ಎಫ್ ಡಿಗೆ ಯಾವ ಬ್ಯಾಂಕ್ ಬೆಸ್ಟ್? ಎಲ್ಲಿ ಸಿಗುತ್ತೆ ಹೆಚ್ಚಿನ ಬಡ್ಡಿ ?

ಸಾರಾಂಶ

*ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ ಯೋಜನೆ ಸೀಮಿತ ಅವಧಿಗೆ ಮಾತ್ರ ಲಭ್ಯ *ಕೆಲವೇ ತಿಂಗಳಲ್ಲಿ ಕೊನೆಗೊಳ್ಳಲಿದೆ ಎಸ್ ಬಿಐ, ಎಚ್ ಡಿಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕಿನ ಈ ವಿಶೇಷ ಯೋಜನೆ *FD ಅವಧಿ  5ರಿಂದ 10 ವರ್ಷಗಳ ನಡುವೆ ಇರಬೇಕು.  

Business Desk:ಕೋವಿಡ್ -19 (COVID-19) ಹಾಗೂ ಆರ್ಥಿಕತೆಯ ನಿಧಾನಗತಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಠೇವಣಿಗಳ (Deposits) ಮೇಲಿನ ಬಡ್ಡಿದರ (Interest rate) ಇಳಿಕೆ ಹಾದಿ ಹಿಡಿದಿತ್ತು. ಇಂಥ ಸಮಯದಲ್ಲಿ ಸ್ಥಿರ ಠೇವಣಿಯ (Fixed Deposit) ಮೇಲೆ ಹಿರಿಯ ನಾಗರಿಕರು (Senior Citizen) ಇಟ್ಟಿರುವ ನಂಬಿಕೆಯನ್ನು ಉಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI),ಎಚ್ ಡಿಎಫ್ ಸಿ ಬ್ಯಾಂಕ್ ( HDFC Bank), ಐಸಿಐಸಿಐ ಬ್ಯಾಂಕ್ (ICICI Bank) ಹಾಗೂ ಬ್ಯಾಂಕ್ ಆಫ್ ಬರೋಡ (Bank of Baroda) ಸೇರಿದಂತೆ  ಅನೇಕ ಬ್ಯಾಂಕುಗಳು (Banks) ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು 2020ರಲ್ಲಿ ಪರಿಚಯಿಸಿವೆ.

ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗಾಗಿಯೇ (Senior Citizens) ರೂಪಿಸಲಾಗಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಅವರು ಹೆಚ್ಚಿನ ಬಡ್ಡಿ (Interest) ಪಡೆಯುತ್ತಾರೆ. ಆದರೆ, ಈ ಹೆಚ್ಚಿನ ಬಡ್ಡಿ ಪಡೆಯಲು ಈ ಎಫ್ ಡಿಗಳ (FDs) ಅವಧಿ 5ರಿಂದ 10 ವರ್ಷಗಳ ನಡುವೆ ಇರಬೇಕು.

ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರೋದು ಖಂಡಿತ, ಜೂನ್ 1 ರಿಂದ ಬದಲಾಗಲಿದೆ ಈ 5 ನಿಯಮ!

ಸೀಮಿತ ಅವಧಿಗೆ ಮಾತ್ರ
ಈ ಹೆಚ್ಚಿನ ಬಡ್ಡಿಯ  ಸ್ಥಿರ ಠೇವಣಿ (Fixed Deposit) ಸೌಲಭ್ಯ ಸೀಮಿತ ಅವಧಿಗೆ (Peroid) ಮಾತ್ರ ಲಭ್ಯವಾಗಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಈ ವಿಶೇಷ ಸ್ಥಿರ ಠೇವಣಿಯ ಮುಕ್ತಾಯದ ದಿನಾಂಕ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಆಸಕ್ತ ಹಿರಿಯ ನಾಗರಿಕರು ಈ ಯೋಜನೆ ಕೊನೆಯಾಗುವುದರೊಳಗೆ ಅದರ ಪ್ರಯೋಜನ ಪಡೆಯಬಹುದು. ಜೊತೆಗೆ ಅಧಿಕ ಬಡ್ಡಿದರವನ್ನು ಕೂಡ ಪಡೆಯಬಹುದು.

ಎಚ್ ಡಿಎಫ್ ಸಿ ಹಿರಿಯ ನಾಗರಿಕರ ಕಾಳಜಿ ಎಫ್ ಡಿ
5 ವರ್ಷ ಒಂದು ದಿನದಿಂದ 10 ವರ್ಷಗಳ ಅವಧಿಯ 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಇಡುವ ಹಿರಿಯ ನಾಗರಿಕರು ಎಚ್ ಡಿಎಫ್ ಸಿ   (HDFC) ಹಿರಿಯ ನಾಗರಿಕರ ಕಾಳಜಿ ಎಫ್ ಡಿ ಪ್ರಯೋಜನ ಪಡೆಯಬಹುದು. ಈ ವಿಶೇಷ ಯೋಜನೆ ಅವಧಿ 2020ರ ಮೇ 20ರಿಂದ 2022ರ ಸೆಪ್ಟೆಂಬರ್ 30ರ ತನಕ ಇದೆ. ಈ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಈಗಾಗಲೇ ಇರುವುದಕ್ಕಿಂತ ಶೇ.0.25 ಹೆಚ್ಚು ಬಡ್ಡಿ ಸಿಗಲಿದೆ. ಈ ವಿಶೇಷ ಯೋಜನೆ ಹಿರಿಯ ನಾಗರಿಕರ ಹೊಸ ಎಫ್ ಡಿಗಳು ಹಾಗೂ ನಿರ್ದಿಷ್ಟ ಸಮಯಾವಧಿಯಲ್ಲಿ ನವೀಕರಿಸಲ್ಪಡುವ ಎಫ್ ಡಿಗಳಿಗೆ ಕೂಡ ಅನ್ವಯಿಸಲಿದೆ. ಈ ವಿಶೇಷ ಆಫರ್ ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ. ಒಂದು ವೇಳೆ ಈ ವಿಶೇಷ ಯೋಜನೆಯಡಿಯಲ್ಲಿ ಎಫ್ ಡಿ ತೆರೆದು 5 ವರ್ಷ ಅಥವಾ ಅದಕ್ಕಿಂತ ಮುನ್ನ ಕ್ಲೋಸ್ ಮಾಡಿದರೆ, ಆಗ ಬಡ್ಡಿದರ ಆ ಸಮಯಕ್ಕೆ ಬ್ಯಾಂಕಿನ ಬಡ್ಡಿದರ ಅಥವಾ ಒಪ್ಪಂದದಲ್ಲಿರುವ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆಯಾಗಲಿದೆ.

ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ ಡಿ ದರಗಳು
ಹಿರಿಯ ನಾಗರಿಕರು ಐಸಿಐಸಿಐ (ICICI) ಬ್ಯಾಂಕಿನ (Bank) ಈ ವಿಶೇಷ ಸ್ಥಿರ ಠೇವಣಿ (FD) ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರು (Senior Citizen) ವಾರ್ಷಿಕ ಶೇ.0.50 ಹೆಚ್ಚುವರಿ ಬಡ್ಡಿ ಪಡೆಯಬಹುದು. ಈ ವಿಶೇಷ ಎಫ್ ಡಿಯ (FD) ಅವಧಿ 5 ವರ್ಷ 1 ದಿನದಿಂದ 10 ವರ್ಷಗಳು. ಈ ಯೋಜನೆ 2022ರ ಅಕ್ಟೋಬರ್ 7ಕ್ಕೆ ಕೊನೆಗೊಳ್ಳಲಿದೆ. ಒಂದು ವೇಳೆ ಈ ವಿಶೇಷ ಯೋಜನೆಯಡಿಯಲ್ಲಿ ಎಫ್ ಡಿ ಖಾತೆ (FD account) ತೆರೆದು ಅವಧಿಗೂ ಮುನ್ನ ಕ್ಲೋಸ್ ಮಾಡಿದರೆ ಶೇ.1.25ರಷ್ಟು ದಂಡ ವಿಧಿಸಲಾಗುವುದು. 

ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು

ಹಿರಿಯ ನಾಗರಿಕರಿಗೆ ಎಸ್ ಬಿಐ ವಿ ಕೇರ್ 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಹಿರಿಯ ನಾಗರಿಕರಿಗೆ 'ಎಸ್ ಬಿಐ ವಿ ಕೇರ್' (SBI Wecare) ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಈ ವರ್ಷದ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಈ ಯೋಜನೆಯಡಿಯಲ್ಲಿ ಹೆಚ್ಚುವರಿ 30 ಬೇಸಿಸ್ ಪಾಯಿಂಟ್ ಗಳನ್ನು ಹಿರಿಯ ನಾಗರಿಕರಿಗೆ ಪಾವತಿಸಲಾಗುತ್ತದೆ. ಆದರೆ, ಎಫ್ ಡಿ ಅವಧಿ 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿರಬೇಕು. ಈ ಯೋಜನೆ ಹೊಸ ಎಫ್ ಡಿ ಖಾತೆ ತೆರೆಯಲು ಹಾಗೂ ಮೆಚ್ಯುರಿಟಿಯಾದ ಠೇವಣಿಗಳ ನವೀಕರಣಕ್ಕೂ ಅನ್ವಯಿಸುತ್ತದೆ. ಎಲ್ಲ ಹಿರಿಯ ನಾಗರಿಕರು ಹಾಗೂ 60 ವರ್ಷ ಮೇಲ್ಪಟ್ಟ ಎಸ್ ಬಿಐ ಪಿಂಚಣಿದಾರರು ಈ ಹೆಚ್ಚುವರಿ ಬಡ್ಡಿದರದ ಪ್ರಯೋಜನ ಪಡೆಯಬಹುದು. ಭಾರತದಲ್ಲಿ ನೆಲೆಸಿರುವ ಎಸ್ ಬಿಐ ಹಿರಿಯ ನಾಗರಿಕ ಪಿಂಚಣಿದಾರರು ಸಿಬ್ಬಂದಿ (ಶೇ.1) ಹಾಗೂ ಭಾರತದ ನಿವಾಸಿಯಾದ ಹಿರಿಯ ನಾಗರಿಕರ ಪ್ರಯೋಜನಗಳನ್ನು (ಶೇ.0.50) ಪಡೆಯಲು ಅರ್ಹರಾಗಿದ್ದಾರೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ