*ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಕೇಂದ್ರ ಸರ್ಕಾರದ ಪರವಾಗಿ ವಿತರಿಸೋ RBI
* ಈ ಬಾರಿ ಬಾಂಡ್ ಬೆಲೆ ಕಳೆದ ಸರಣಿಗಿಂತ 5ರೂ. ಕಡಿಮೆ
*ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್
Business Desk: ಕೇಂದ್ರ ಸರ್ಕಾರದ (Central Government) ಸಾವರಿನ್ ಗೋಲ್ಡ್ ಬಾಂಡ್ ಯೋಜನೆ 2021-22ರ (Sovereign Gold Bond Scheme 2021-22) ಒಂಭತ್ತನೇ ಸರಣಿಯ (Series)ಚಂದಾದಾರಿಕೆ (subscription) ಇಂದಿನಿಂದ (ಜ.10) ಪ್ರಾರಂಭವಾಗಿದೆ. ಇದು ಐದು ದಿನಗಳ ಕಾಲ ತೆರೆದಿದ್ದು, ಶುಕ್ರವಾರ (ಜ.14) ಕೊನೆಗೊಳ್ಳಲಿದೆ.
ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI)ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ವಿತರಿಸುತ್ತದೆ. ಈ ಸರಣಿಯಲ್ಲಿ ಬಾಂಡ್ ವಿತರಣೆಗೆ ಪ್ರತಿ ಗ್ರಾಂ ಚಿನ್ನಕ್ಕೆ 4,786ರೂ. ಬೆಲೆ ನಿಗದಿಪಡಿಸಲಾಗಿದೆ ಎಂಬ ಮಾಹಿತಿಯನ್ನು ಆರ್ ಬಿಐ (RBI) ನೀಡಿದೆ. ಈ ಯೋಜನೆಯ ವಿತರಣೆ ಬೆಲೆ ಕಳೆದ ಸರಣಿಗಿಂತ 5ರೂ. ಕಡಿಮೆಯಿದೆ. ಕಳೆದ ಬಾರಿ 4,791ರೂ. ಇತ್ತು.
undefined
ಆನ್ ಲೈನ್ ಹೂಡಿಕೆದಾರರಿಗೆ ಡಿಸ್ಕೌಂಟ್
ಆನ್ ಲೈನ್ ನಲ್ಲಿ(Online) ಅರ್ಜಿ ಸಲ್ಲಿಸುವ ಹಾಗೂ ಆನ ಲೈನ್ ಪಾವತಿ (Payment) ಮಾಡೋ ಹೂಡಿಕೆದಾರರಿಗೆ (Investors) ಪ್ರತಿ ಗ್ರಾಂ ಚಿನ್ನದ (Gold) ಮೇಲೆ 50ರೂ. ಡಿಸ್ಕೌಂಟ್ (Discount) ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಆನ್ ಲೈನ್ ಹೂಡಿಕೆದಾರರಿಗೆ (Investors) ಗೋಲ್ಡ್ ಬಾಂಡ್ ಅನ್ನು 4,736 ರೂ.ಗೆ ವಿತರಿಸಲಾಗುತ್ತದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂದ್ರೇನು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest)ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಲ್ಲಿ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains) ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.
ಹೂಡಿಕೆ ಮಿತಿ
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಒಂಭತ್ತನೇ ಸರಣಿಯಲ್ಲಿ ಹೂಡಿಕೆಯ ಕನಿಷ್ಠ(Minimum) ಮಿತಿ (Limit) ಒಂದು ಗ್ರಾಂ ಚಿನ್ನ ಆಗಿದೆ. ಇನ್ನು ಒಬ್ಬ ವ್ಯಕ್ತಿ ಗರಿಷ್ಠ 4ಕೆ.ಜಿ. ಚಿನ್ನದ ಮೇಲೆ ಹೂಡಿಕೆ ಮಾಡಬಹುದಾಗಿದೆ. ಟ್ರಸ್ಟ್ (Trust) ಹಾಗೂ ಅದೇರೀತಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
Mukesh Ambani: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!
ಎಲ್ಲಿ ಸಿಗುತ್ತೆ?
ಹೂಡಿಕೆದಾರರು (Investors) ಬ್ಯಾಂಕುಗಳು (Banks), ನಿಗದಿತ ಅಂಚೆ ಕಚೇರಿಗಳು (Post offices), ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) ಹಾಗೂ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ (BSE)ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು (Purchase).
ಅವಧಿ
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಒಂಭತ್ತನೇ ಸರಣಿ (Series) 8 ವರ್ಷಗಳ ಅವಧಿಯದ್ದಾಗಿದೆ. 5, 6, ಹಾಗೂ 7ನೇ ವರ್ಷಗಳಲ್ಲಿ ಬಡ್ಡಿಪಾವತಿ ದಿನಾಂಕಗಳಂದು ನಿರ್ಗಮನ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆದಾರರು ಈ ಚಿನ್ನದ ಬಾಂಡ್ ಮೇಲೆ ಸಾಲ (Loan) ಪಡೆಯಲು ಕೂಡ ಅವಕಾಶವಿದೆ.