#Fact Check ನಷ್ಟದಲ್ಲಿದೆಯಾ LIC?: ವೈರಲ್‌ ಪೋಸ್ಟ್‌ಗೆ ಸ್ಪಷ್ಟನೆ ಕೊಟ್ಟ ವಿಮಾ ಕಂಪನಿ

By Web Desk  |  First Published Oct 10, 2019, 11:35 AM IST

ನಷ್ಟದಲ್ಲಿದೆಯಾ ಎಲ್‌ಐಸಿ? ಗ್ರಾಹಕರ ಹಣ ಸೇಫಾಗಿದೆಯಾ? ವೈರಲ್‌ ಪೋಸ್ಟ್‌ಗೆ ಸ್ಪಷ್ಟನೆ ಕೊಟ್ಟ ವಿಮಾ ಕಂಪನಿ


ಮುಂಬೈ[ಅ.10]: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈ ಮೂಲಕ ಗ್ರಾಹಕರ ಭಯವನ್ನು ಹೋಗಲಾಡಿಸಿ ನಿರಾಳವಾಗಿಸಿದೆ.

ಹೌದು ಬುಧವಾರ ಬುಧವಾರ ವೈರಲ್ ಪೋಸ್ಟ್‌ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎಲ್‌ಐಸಿ, ಸಂಸ್ಥೆ ಭಾರಿ ನಷ್ಟದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳು. ಈ ಬಗ್ಗೆ ಪಾಲಿಸದಾರರು ಯಾವುದೇ ಭಯ ಪಡಬೇಕಾದ ಅಗತ್ಯ ಇಲ್ಲ. ಸಂಸ್ಥೆಯ ಆರ್ಥಿಕ ಶಕ್ತಿ ಉತ್ತಮವಾಗಿದ್ದು, ಈ ಬಗೆಗಿನ ಸುಳ್ಳು ಸುದ್ದಿಯನ್ನು ನಂಬಬಾರದು. ಇಂಥ ಸುದ್ದಿಗಳು ಹೂಡಿಕೆದಾರರ ನಂಬಿಕೆಯನ್ನು ಕಸಿದುಕೊಳ್ಳುತ್ತಿದೆ ಎಂದು ಎಲ್‌ಐಸಿ ಹೇಳಿದೆ.

Latest Videos

undefined

ದುಬಾರಿ ದಂಡ ಎಫೆಕ್ಟ್: ಆಗಸ್ಟಲ್ಲಿ ಎಲ್‌ಎಲ್‌ಆರ್‌ ಪಡೆದವರು 34000 ಕ್ಕೂ ಹೆಚ್ಚು!

ದೇಶದ ಅತೀ ದೊಡ್ಡ ಜೀವ ವಿಮಾ ಸಂಸ್ಥೆಯಾಗಿರುವ ಸರ್ಕಾರಿ ಸ್ವಾಮ್ಯದ ಎಲ್‌ಐಸಿ 2018-19ನೇ ಸಾಲಿನಲ್ಲಿ 50 ಸಾವಿರ ಕೋಟಿ ಬೋನಸ್‌ ನೀಡಿ ದಾಖಲೆ ಉಂಟು ಮಾಡಿತ್ತು.

click me!