
ಬೆಂಗಳೂರು: ಸಂಸ್ಥೆಯ ಉದ್ಯೋಗಿಯೇ ಬೆಂಗಳೂರಿನ ಪ್ರತಿಷ್ಠಿತ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನ ಮಹಿಳೆಯರ ಶೌಚಾಲಯದಲ್ಲಿ ಕಳ್ಳ ಕ್ಯಾಮರಾ ಇರಿಸಿದ್ದು, ಆತನನ್ನು ಬಂಧಿಸಲಾಗಿದೆ. ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಶೌಚಾಲಯದಲ್ಲಿರುವ ಕಸದ ಬುಟ್ಟಿಯಲ್ಲಿ ವೀಡಿಯೋ ರೆಕಾರ್ಡ್ ಆನ್ ಆಗಿರುವ ಸ್ಥಿತಿಯಲ್ಲಿ ಫೋನ್ ಪತ್ತೆಯಾಗಿದೆ. ಶೌಚಾಲಯಕ್ಕೆ ಹೋಗಿದ್ದ ಮಹಿಳೆಯೊಬ್ಬರ ಕಣ್ಣಿಗೆ ಈ ಫೋನ್ ಬಿದ್ದಿದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ನಿನ್ನೆ ಈ ಘಟನೆ ನಡೆದಿದ್ದು, ಥರ್ಡ್ ವೇವ್ ಕಾಫಿ ಶಾಪ್ ಸಿಬ್ಬಂದಿಯ ಫೋನೇ ಇದಾಗಿದೆ. ಮಹಿಳೆಯರ ಶೌಚಾಲಯದಲ್ಲಿ ರಹಸ್ಯವಾಗಿ ವೀಡಿಯೋ ಮಾಡುವುದಕ್ಕಾಗಿ ಆತ ಈ ಫೋನ್ ಅನ್ನು ಇರಿಸಿದ್ದ. ಮಹಿಳೆಯ ಕಣ್ಣಿಗೆ ಫೋನ್ ಬಿದ್ದ ವೇಳೆ ಎರಡು ಗಂಟೆಗಳಿಂದ ಈ ಫೋನ್‌ನಲ್ಲಿ ರೆಕಾರ್ಡಿಂಗ್ ಆನ್ ಆದ ಸ್ಥಿತಿಯಲ್ಲಿ ಇತ್ತು ಎಂದುವ ವರದಿ ಆಗಿದೆ. ಘಟನೆ ನಡೆಯುವ ವೇಳೆ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನಲ್ಲಿದ್ದ ಗ್ರಾಹಕರೊಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಅಯ್ಯಯ್ಯೋ... OYO ರೂಮ್‌ಲ್ಲಿ ಕಳ್ಳ ಕ್ಯಾಮರಾ: ಜೋಡಿಯ ಸಲ್ಲಾಸ ಸೆರೆ ಹಿಡಿದ ನಾಲ್ವರ ಬಂಧನ
ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡ ಮಹಿಳೆ ಹೇಳುವ ಪ್ರಕಾರ, ಈ ಫೋನ್ ಫ್ಲೈಟ್ ಮೋಡ್‌ನಲ್ಲಿತ್ತು. ಹೀಗಾಗಿ ಯಾವುದೇ ಸೌಂಡ್ ಈ ಫೋನ್‌ನಿಂದ ಬರುತ್ತಿರಲಿಲ್ಲ, ಬಹಳ ಜಾಗರೂಕವಾಗಿ ಇದನ್ನು ಕಸದ ಬುಟ್ಟಿಯಲ್ಲಿ ಇಡಲಾಗಿತ್ತು. ರೆಕಾರ್ಡ್ ಮಾಡುವುದಕ್ಕಾಗಿ ಬರೀ ಕ್ಯಾಮರಾದ ಲೆನ್ಸ್ ಮಾತ್ರ ಕಾಣುವಂತೆ ಡಸ್ಟ್‌ಬಿನ್‌ಗೆ ಸಣ್ಣ ತೂತು ಮಾಡಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಈ ಫೋನ್ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನಿಗೆ ಸೇರಿದ್ದು ಎಂಬುದು ನಿಮಿಷದಲ್ಲೇ ಗೊತ್ತಾಗಿತ್ತು. ನಂತರ ಸ್ಥಳಕ್ಕೆ ಪೊಲೀಸರನ್ನು ಕರೆಸಿ ಕ್ರಮ ಕೈಗೊಳ್ಳಲಾಯ್ತು ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದೊಂದು ಭಯಾನಕ ಘಟನೆಯಾಗಿದ್ದು, ಇನ್ನು ಮುಂದೆ ಯಾವುದೇ ಹೊರಗಿನ ಶೌಚಾಲಯವನ್ನು ಬಳಸುವಾಗ ನಾನು ಬಹಳ ಜಾಗರೂಕನಾಗಿರುತ್ತೇನೆ. ಹೊಟೇಲ್, ಕೆಫೆ ಜಾಲ ಎಷ್ಟೇ ಒಳ್ಳೆಯ ಹೆಸರು ಹೊಂದಿದ್ದರು ಸರಿ. ಹಾಗೆಯೇ ನಾನು ನಿಮಗೆಲ್ಲರಿಗೂ ಇದೇ ಸಲಹೆಯನ್ನು ನೀಡುತ್ತೇನೆ. ಇದೊಂದು ಅಸಹ್ಯಕರ ಘಟನೆಯಾಗಿದೆ ಎಂದು ಘಟನೆ ನಡೆಯುವ ವೇಳೆ ಅಲ್ಲಿದ್ದ ಗ್ರಾಹಕರೊಬ್ಬರು ಬರೆದುಕೊಂಡಿದ್ದಾರೆ.
ಉತ್ತರಪ್ರದೇಶದಲ್ಲೂ ಉಡುಪಿ ರೀತಿ ಟಾಯ್ಲೆಟ್‌ನಲ್ಲಿ ವಿಡಿಯೋ : ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ
ಈ ವಿಚಾರಕ್ಕೆ ಸಂಬಂಧಿಸಿದಂತೆ ಥರ್ಡ್ ವೇವ್ ಕಾಫಿ ಶಾಪ್‌ನ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ನಮ್ಮ ಗ್ರಾಹಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಯಾವುದೇ ಕರುಣೆ ಇಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕೃತ್ಯವೆಸಗಿದ ವ್ಯಕ್ತಿಯನ್ನು ಈ ಕ್ಷಣದಿಂದಲೇ ವಜಾ ಮಾಡಲಾಗಿದೆ ಎಂದು ಥರ್ಡ್ ವೇವ್ ಕಾಫಿ ಶಾಪ್ ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.