ಜನ ಸಾಮಾನ್ಯರಿಗೆ ಗುಡ್‌ ನ್ಯೂಸ್‌: ಸಣ್ಣ ಉಳಿತಾಯ ಬಡ್ಡಿದರ ಏರಿಕೆ; 3 ಯೋಜನೆಗಳಿಗೆ ಹೆಚ್ಚಿನ ಬಡ್ಡಿ

By Kannadaprabha News  |  First Published Jul 1, 2023, 9:29 AM IST

5 ವರ್ಷಗಳ ಆರ್‌ಡಿ ಮೇಲೆ ಶೇ. 0.3 ರಷ್ಟು ಬಡ್ಡಿದರ ಏರಿಸಲಾಗಿದ್ದು, ಇನ್ನು ಮುಂದೆ ಆರ್‌ಡಿ ಹೊಂದಿರುವವರು ಶೇ. 6.2ರ ಬದಲಿಗೆ ಶೇ. 6.5 ರಷ್ಟು ಬಡ್ಡಿ ಪಡೆದುಕೊಳ್ಳಲಿದ್ದಾರೆ.


ನವದೆಹಲಿ (ಜುಲೈ 1, 2023): ಕೇಂದ್ರ ಸರ್ಕಾರವು 3 ಆಯ್ದ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಶೇ.0.3 ರವರೆಗೆ ಹೆಚ್ಚಳ ಮಾಡಿದೆ. ಇದು ಜುಲೈನಿಂದ ಆರಂಭವಾಗುವ ತ್ರೈಮಾಸಿಕಕ್ಕೆ ಈ ಬಡ್ಡಿ ದರ ಅನ್ವಯವಾಗಲಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೊಂಚ ಸಮಾಧಾನ ನೀಡಿದೆ.

5 ವರ್ಷಗಳ ಆರ್‌ಡಿ ಮೇಲೆ ಶೇ. 0.3 ರಷ್ಟು ಬಡ್ಡಿದರ ಏರಿಸಲಾಗಿದ್ದು, ಇನ್ನು ಮುಂದೆ ಆರ್‌ಡಿ ಹೊಂದಿರುವವರು ಶೇ. 6.2ರ ಬದಲಿಗೆ ಶೇ. 6.5 ರಷ್ಟು ಬಡ್ಡಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಅಂಚೆ ಕಚೇರಿಗಳಲ್ಲಿನ 1 ಹಾಗೂ 2 ವರ್ಷದ ಅವಧಿಯ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.0.1ರಷ್ಟು ಹೆಚ್ಚಳ ಮಾಡಲಾಗಿದೆ. ಹಾಗಾಗಿ 1 ವರ್ಷದ ಎಫ್‌ಡಿ ಬಡ್ಡಿ ಶೇ. 6.9ಕ್ಕೆ ಹಾಗೂ 2 ವರ್ಷದ ಎಫ್‌ಡಿ ಬಡ್ಡಿ ಶೇ. 7ಕ್ಕೆ ಹೆಚ್ಚಳವಾಗಿದೆ.

Tap to resize

Latest Videos

ಇದನ್ನು ಓದಿ: ಷೇರುಪೇಟೆ ಮತ್ತೆ ದಾಖಲೆ ಎತ್ತರಕ್ಕೆ: 65 ಸಾವಿರದ ಸಮೀಪಕ್ಕೆ ತಲುಪಿದ ಸೆನ್ಸೆಕ್ಸ್‌; ನಿಫ್ಟಿ ಕೂಡ ಹೊಸ ದಾಖಲೆ

ಪಿಪಿಎಫ್‌ ಮತ್ತು ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದ ಕಾರಣ ಅವು ಕ್ರಮವಾಗಿ ಶೇ. 7.1 ಮತ್ತು ಶೇ. 4ರಲ್ಲೇ ಉಳಿದುಕೊಂಡಿವೆ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ. ಇದು ಜುಲೈ 1ರಿಂದ ಸೆಪ್ಟೆಂಬರ್‌ 30ರವರೆಗೆ ಶೇ. 7.7ರಲ್ಲೇ ಮುಂದುವರೆಯಲಿದೆ. ಹಾಗೆಯೇ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವೂ ಸಹ ಶೇ. 8, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್‌ ವಿಕಾಸ್‌ ಪತ್ರದ ಮೇಲಿನ ಬಡ್ಡಿದರ ಕ್ರಮವಾಗಿ ಶೇ. 8.2 ಮತ್ತು ಶೇ. 7.5ರಷ್ಟೇ ಇರಲಿದೆ. ಕಳೆದ ತ್ರೈಮಾಸಿಕಗಳಲ್ಲೂ ಸಹ ಬಡ್ಡಿದರವನ್ನು ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್‌: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’

ಬಡ್ಡಿ ದರ ಏರಿಕೆ ಆದ ಸ್ಕೀಂ
ಯೋಜನೆ               ಹಳೇ ಬಡ್ಡಿ  ಹೊಸ ಬಡ್ಡಿ
5 ವರ್ಷದ ಆರ್‌ಡಿ   ಶೇ.6.2 ಶೇ.6.5
1 ವರ್ಷದ ಎಫ್‌ಡಿ   ಶೇ.6.8 ಶೇ.6.9
2 ವರ್ಷದ ಎಫ್‌ಡಿ   ಶೇ.6.9 ಶೇ.7

ಇದನ್ನೂ ಓದಿ: ರಿಯಲ್ ಎಸ್ಟೇಟ್‌ನಲ್ಲಿ ಕಂಟೆಂಟ್‌ ಮಾರ್ಕೆಟಿಂಗ್‌ನ ಶಕ್ತಿ ಏನು..? ವಿವರ ಹೀಗಿದೆ.. (INDIAN REALTY)

click me!