ಷೇರುಪೇಟೆ ಮತ್ತೆ ದಾಖಲೆ ಎತ್ತರಕ್ಕೆ: 65 ಸಾವಿರದ ಸಮೀಪಕ್ಕೆ ತಲುಪಿದ ಸೆನ್ಸೆಕ್ಸ್‌; ನಿಫ್ಟಿ ಕೂಡ ಹೊಸ ದಾಖಲೆ

By Kannadaprabha News  |  First Published Jul 1, 2023, 8:54 AM IST

ವಿದೇಶಿ ಹೂಡಿಕೆಯಲ್ಲಿ ಉಂಟಾದ ಹೆಚ್ಚಳ ಹಾಗೂ ಯುರೋಪಿನ ಮಾರುಕಟ್ಟೆಯಲ್ಲಿ ನಡೆದ ಬೆಳವಣಿಗೆಗಳು ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಳ ಮಾಡಿದ್ದು, ಏರುಗತಿಯ ವಹಿವಾಟಿಗೆ ಕಾರಣವಾಗಿದೆ.


ಮುಂಬೈ (ಜುಲೈ 1, 2023): ಶುಕ್ರವಾರ ಬಾಂಬೆ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠವನ್ನು ತಲುಪಿದ್ದು, ದಾಖಲೆ ನಿರ್ಮಾಣ ಮಾಡಿವೆ. ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್‌’ 803 ಅಂಕಗಳ ಏರಿಕೆ ಕಾಣುವುದರ ಮೂಲಕ ಇದೇ ಮೊದಲ ಬಾರಿಗೆ 64 ಸಾವಿರದ ಗಡಿ ದಾಟಿದೆ ಹಾಗೂ 65 ಸಾವಿರದ ಸನಿಹಕ್ಕೆ ಲಗ್ಗೆ ಇಟ್ಟಿದೆ.

ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 64,718.56 ಅಂಕಗಳಿಗೆ ಏರಿದರೆ, 216.95 ಅಂಕಗಳ ಏರಿಕೆ ಕಂಡಿರುವ ರಾಷ್ಟ್ರೀಯ ಸಂವೇದಿ ಸೂಚ್ಯಂಕ ದಾಖಲೆಯ 19,189.05 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ವಿದೇಶಿ ಹೂಡಿಕೆಯಲ್ಲಿ ಉಂಟಾದ ಹೆಚ್ಚಳ ಹಾಗೂ ಯುರೋಪಿನ ಮಾರುಕಟ್ಟೆಯಲ್ಲಿ ನಡೆದ ಬೆಳವಣಿಗೆಗಳು ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಳ ಮಾಡಿದ್ದು, ಏರುಗತಿಯ ವಹಿವಾಟಿಗೆ ಕಾರಣವಾಗಿದೆ.

Tap to resize

Latest Videos

ಇದನ್ನು ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!

ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಷೇರುಗಳು ಅತಿ ಹೆಚ್ಚು ಶೇ.4 ರಷ್ಟು ಗಳಿಕೆಯನ್ನು ಕಂಡಿವೆ. ಉಳಿದಂತೆ ಇಂಡಸ್‌ ಬ್ಯಾಂಕ್‌, ಇನ್ಪೋಸಿಸ್‌, ಟಾಟಾ ಕನ್ಸಲ್ಟನ್ಸಿ ಸರ್ವೀಸ್‌, ಮಾರುತಿ, ಟೆಕ್‌ ಮಹೀಂದ್ರಾ, ವಿಪ್ರೋ ಸೇರಿ ಹಲವು ಕಂಪನಿಯ ಷೇರುಗಳು ಏರಿಕೆ ಕಂಡಿವೆ.

ದಾಖಲೆ ಏರಿಕೆಗೆ ಕಾರಣ..

  • ವಿದೇಶಿ ಹೂಡಿಕೆಯಲ್ಲಿ ಆದ ಹೆಚ್ಚಳದಿಂದ ಷೇರುಪೇಟೆಗೆ ಸುಗ್ಗಿ
  • ಯುರೋಪ್‌ನ ಮಾರುಕಟ್ಟೆ ಸೂಚ್ಯಂಕಗಳ ಏರಿಕೆಯೂ ಕಾರಣ
  • ಮಹೀಂದ್ರಾ, ಇನ್ಪೋಸಿಸ್‌, ವಿಪ್ರೋ ಷೇರುಗಳು ಭಾರಿ ಜಿಗಿತ

ಇದನ್ನೂ ಓದಿ: ಹರ್ಷದ್‌ ಮೆಹ್ತಾನಂತೆ ವಂಚನೆ: 3 ತಿಂಗಳಲ್ಲಿ 4,672 ಕೋಟಿ ರೂ. ಅಕ್ರಮ ಷೇರು ವಹಿವಾಟು ಮಾಡಿದ ಸ್ಟಾಕ್‌ ಬ್ರೋಕರ್! 

click me!