ಆಭರಣ ಪ್ರಿಯರಿಗೆ ಬಿಗ್‌ ಶಾಕ್‌: ಬೆಳ್ಳಿ ಈಗ ಕೇಜಿಗೆ ಬರೋಬ್ಬರಿ 1 ಲಕ್ಷ..!

By Kannadaprabha NewsFirst Published May 30, 2024, 8:12 AM IST
Highlights

ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ರು.ನ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರು.ನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರು.ಗಳ ಗಡಿ ದಾಟಿದೆ. ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರು.ಗಳ ಗಡಿ ದಾಟಿದೆ. 

ಮುಂಬೈ(ಮೇ.30):  ಆಭರಣ ಮತ್ತು ಕೈಗಾರಿಕೆ ಎರಡೂ ವಲಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಸಾರ್ವಕಾಲಿಕ ಗರಿಷ್ಠ ಎನ್ನಬಹುದಾದ 1 ಲಕ್ಷ ರು. ತಲುಪಿದೆ. ಇದು ಹಬ್ಬ ಮತ್ತು ಶುಭ ಸಮಾರಂಭಗಳಿಗೆ ಬೆಳ್ಳಿ ಆಭರಣ ಖರೀದಿಗೆ ಮುಂದಾಗಿದ್ದವರಿಗೆ ಭಾರೀ ಶಾಕ್ ನೀಡಿದೆ.

ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ರು.ನ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರು.ನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರು.ಗಳ ಗಡಿ ದಾಟಿದೆ. ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರು.ಗಳ ಗಡಿ ದಾಟಿದೆ. ಉಳಿದಂತೆ ದೆಹಲಿಯಲ್ಲಿ 97100 ರು., ಮುಂಬೈನಲ್ಲಿ 94180 ರು., ಬೆಂಗಳೂರಿನಲ್ಲಿ 97100 ರು. ತಲುಪಿದೆ. ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರು. ಏರಿಕೆ ಕಂಡು 73200 ರು. ತಲುಪಿದೆ.

Latest Videos

ಚಿನ್ನದ ದರದಲ್ಲಿ ಮತ್ತೆ ಏರಿಕೆ: ಹೇಗಿದೆ ನಿಮ್ಮ ನಗರದಲ್ಲಿ ಬೆಳ್ಳಿ ಬಂಗಾರದ ದರ?

ಬೆಲೆ ಏರಿಕೆ ಏಕೆ: ಚಿನ್ನವನ್ನು ಕೇವಲ ಆಭರಣ ಅಥವಾ ಹೂಡಿಕೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಬೆಳ್ಳಿಯನ್ನು ಆಭರಣದ ಜೊತೆಗೆ ಕೈಗಾರಿಕಾ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಉತ್ಪಾದನೆ ಹಿಂದಿನ ಮಟ್ಟದಲ್ಲೇ ಮುಂದುವರೆದಿದ್ದರೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಎಲೆಕ್ನಿಕ್ ವಾಹನಗಳು, ಸೌರಫಲಕ, 5ಜಿ ಆ್ಯಂಟೆನಾ, ಫೋಟೋಗ್ರಾಫಿ ಮೊದ ಲಾದ ವಲಯಗಳಲ್ಲಿ ಬೇಡಿಕೆ ಹೆಚ್ಚಳವಾಗಿರುವುದು ಕಳೆದ ಕೆಲ ವರ್ಷಗಳಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆ ಕಾರಣವಾಗಿದೆ.

ಮತ್ತೊಂದೆಡೆ ಮಧ್ಯಪ್ರಾಚ್ಯ ದೇಶಗಳ ನಡುವಿನ ಬಿಕ್ಕಟ್ಟು, ಮಧ್ಯಪ್ರಾಚ್ಯ ದೇಶಗಳ ಮೂಲಕ ಹಾದುಹೋಗುವ ಸರಕು ಹಡಗುಗಳ ಮೇಲೆ ಮುಂದುವರೆದ ದಾಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಜೊತೆಗೆ ಅಮೆರಿಕದಲ್ಲಿ ಹಣದುಬ್ಬರದ ಆತಂಕ ಮುಂದುವರೆದಿರುವುದು ಕೂಡಾ ಬೆಳ್ಳಿ ಬೆಲೆ ದಾಖಲೆ ಮಟ್ಟ ತಲುಪಲು ಕಾರಣವಾಗಿದೆ.

ಬೆಳ್ಳಿ ಬೆಲೆ ಏರಿಕೆಯ ಹಾದಿ
ವರ್ಷ : ದರ 
1980. 2500
2004. 10000
2010. 25000
2011 50000

ಬೆಲೆ ಏರಿಕೆಗೆ ಕಾರಣ ಏನು?

* ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯರ್ಥವಾಗದೇ ಇದಿರುವುದು
* ಬೇಡಿಕೆ, ಲಭ್ಯತೆ ನಡುವಿನ ವ್ಯತ್ಯಾಸ ದಿನೇ ದಿನೇ ಏರಿಕೆ
* ಕೈಗಾರಿಕಾ ವಲಯ ದಿಂದ ಬೆಳ್ಳಿಗೆ ಭಾರೀ ಬೇಡಿಕೆ 

click me!