BPL Ltd: ಪಿಸಿಬಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಆಧರಿಸಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ (Make In India) ಜೊತೆ ಕೈಗೂಡಿಸಿ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಭವಿಷ್ಯದಲ್ಲಿ ಪಿಸಿಬಿ ವ್ಯಾಪ್ತಿಯ ವಿಸ್ತರಣೆಗೆ ಇದು ನಾಂದಿಯಾಗಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಪಿಎಲ್ ಲಿಮಿಟೆಡ್ ಹೊಸ ಪಿಸಿಬಿ ಯುನಿಟ್ (printed circuit board) ಘಟಕ ಸ್ಥಾಪಿಸಿದೆ. ಪ್ರತಿಷ್ಠಿತ ಕನ್ಶುಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಬಿಪಿಎಲ್ ಈಗ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಹೊಸ ಘಟಕವನ್ನು ಸ್ಥಾಪನೆಗೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇದು ವಿಶೇಷ ಎಲೆಕ್ಟ್ರಾನಿಕ್ ವಿಭಾಗಗಳನ್ನು (electronics industry) ಪೂರೈಸುವ ಗುರಿಯನ್ನು ಹೊಂದಿದೆ. ಪಿಸಿಬಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಆಧರಿಸಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ (Make In India) ಜೊತೆ ಕೈಗೂಡಿಸಿ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಭವಿಷ್ಯದಲ್ಲಿ ಪಿಸಿಬಿ ವ್ಯಾಪ್ತಿಯ ವಿಸ್ತರಣೆಗೆ ಇದು ನಾಂದಿಯಾಗಲಿದೆ.
ಅತ್ಯಾಧುನಿಕ ಮೂಲಭೂತ ಸೌಕರ್ಯಗಳು
ಐದು ದಶಕಗಳ ಅನುಭವ ಹೊಂದಿರುವ ಬಿಪಿಎಲ್ ಮಾರುಕಟ್ಟೆಯಲ್ಲಿ ನಾವೀನ್ಯತೆ, ಗುಣಮಟ್ಟ ಮತ್ತು ನಂಬಿಕೆಗೆ ಹೆಸರುವಾಸಿಯಾಗಿದೆ. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನ ಜಾಗತೀಕ ಮಟ್ಟದಲ್ಲಿ ಹೆಚ್ಚಿಸುವ ಗುರಿಯೊಂದಿಗೆ ಪಿಸಿಬಿ ಆರಂಭವಾಗಿದೆ. ಹೊಸ ಪಿಸಿಬಿ ಘಟಕಗಳು ಅತ್ಯಾಧುನಿಕ ಸುಧಾರಿತ ಮೂಲಸೌಕರ್ಯಗಳನ್ನು ಒಳಗೊಂಡಿದೆ. 100k ಕ್ಲೀನ್ ರೂಮ್, ಸುಧಾರಿತ ಲೋಹಲೇಪ ಮಾರ್ಗಗಳು ಮತ್ತು CNC-ನಿಯಂತ್ರಿತ ಯಂತ್ರಗಳನ್ನು ಒಳಗೊಂಡಿದೆ. ಈ ಸುಧಾರಿತ ಸೌಕರ್ಯ ಬಿಪಿಎಲ್ ಹೂಡಿಕೆ ಪ್ರಮಾಣವನ್ನು ತೋರಿಸುತ್ತದೆ.
ವೈಶಿಷ್ಟ್ಯಗಳು
ಪಿಸಿಬಿ ಉತ್ಪಾದನೆಗಾಗಿಯೇ ಉತ್ತಮ ಗುಣಮುಟ್ಟದ ರೂಮ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಸೂಕ್ತವಾದ ಸ್ವಚ್ಛತೆಯ ಮಾನದಂಡಗಳನ್ನು ನಿಗಧಿತಗೊಳಿಸಲಾಗಿದೆ. ಪಿಸಿಬಿ ಉತ್ಪಾದನೆಗಾಗಿ 100K ಕ್ಲೀನ್‌ರೂಮ್‌ಗಳ ಸ್ಥಾಪನೆಯಾಗಿದೆ. ಉತ್ಪಾದನೆಗೆ ಬೇಕಾದ ತಾಮ್ರದ ಶೇಖರಣೆಯನ್ನು ಸಹ ಮಾಡಿಕೊಳ್ಳಲಾಗಿದೆ. ಈ ಸಂಗ್ರಹದಿಂದ ಕಾರ್ಯನಿರ್ವಹಣೆ ಸುಗಮದಿಂದ ಸಾಗಲಿದೆ. CNC-ನಿಯಂತ್ರಿತ ಯಂತ್ರಗಳು PCB ತಯಾರಿಕೆಯಲ್ಲಿ ನಿಖರತೆ ಮತ್ತು ದಕ್ಷತೆಯನ್ನು ಖಾತರಿಪಡಿಸುತ್ತದೆ.
RF ಆಂಟೆನಾ, ಆಟೋಮೋಟಿವ್ ಮತ್ತು ವಿದ್ಯುತ್ ಪರಿವರ್ತನೆಯಂತಹ ವಿಶೇಷ ವಿಭಾಗಗಳನ್ನು ಸಿದ್ಧಪಡಿಸಲಾಗಿದೆ. ಸ್ಟೇಟ್-ಆಫ್-ದಿ-ಆರ್ಟ್ ಟೆಸ್ಟಿಂಗ್ ಫೆಸಿಲಿಟಿಗಾಗಿ ಸೂಕ್ಷ್ಮ-ವಿಭಾಗದ ವಿಶ್ಲೇಷಣೆ ನಡೆಸಲಾಗತ್ತದೆ. 500x ವರೆಗಿನ ಸೂಕ್ಷ್ಮದರ್ಶಕಗಳು ಮತ್ತು ಕಠಿಣವಾದ PCB ಪರೀಕ್ಷೆಗಾಗಿ ಪರೀಕ್ಷಾ ಕೊಠಡಿಗಳನ್ನು ನಿರ್ಮಿಸಲಾಗಿದೆ.
ನಿಮ್ಮ ಪ್ರಯಾಣ ಸ್ಪೂರ್ತಿದಾಯಕ; ಝೋಮ್ಯಾಟೋ ಸಿಇಒ ಸಾಧನೆ ಹೊಗಳಿದ ಪ್ರಧಾನಿ ಮೋದಿBPL Limited
ಭಾರತದಲ್ಲಿ ಪಿಸಿಬಿ ಮಾರುಕಟ್ಟೆ ಗಮನಾರ್ಹವಾಗಿ ಬೆಳವಣಿಗೆಯಾಗುತ್ತಿದೆ. 2024 ರಿಂದ 2032 ರವರೆಗೆ ಶೇ.18.1ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2032 ರ ವೇಳೆಗೆ ಪಿಸಿಬಿ ಮಾರುಕಟ್ಟೆ 20.17 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ. ಬಿಪಿಎಲ್ ವಿಸ್ತರಣೆಗೆ ಈ ಕಾರ್ಯಕ್ಕೆ ಸರ್ಕಾರದಿಂದಲೂ ಬೆಂಬಲ ಸಿಗಲಿದೆ.
60ನೇ ವರ್ಷದಲ್ಲಿ ಶುರು ಮಾಡಿದ್ರು ಬಿಸ್ನೆಸ್; ಮಗನಾದ 2100 ಕೋಟಿ ಕಂಪನಿ ಒಡೆಯ
1989ರಿಂದಲೂ ಉತ್ಪಾದನೆಯ ಅನುಭವ
ಪಿಸಿಬಿ ತಯಾರಿಕೆಯಲ್ಲಿ ಬಿಪಿಎಲ್ ಅಪಾರ ಅನುಭವವನ್ನು ಹೊಂದಿದೆ. 1989ರಿಂದಲೂ ಜಪಾನ್‌ನ ಸ್ಯಾನ್ಯೊದಿಂದ ತಾಂತ್ರಿಕ ನೆರವಿನೊಂದಿಗೆ ಪಿಸಿಬಿ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಆರ್ಥಿಕ ವವರ್ಷದಲ್ಲಿಯೂ ಬಿಪಿಎಲ್ ತನ್ನ ಉದ್ಯಮ ವಿಸ್ತರಣೆಗಾಗಿ 15 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿತ್ತು. ಬಿಪಿಎಲ್ ಗ್ರಾಹಕರ ನಂಬಿಕೆಗೆ ಅರ್ಹವಾದ ಪ್ರಮುಖ ಎಲೆಕ್ಟ್ರಾನಿಕ್ ಮತ್ತು EMS ತಯಾರಕರು ಆಗಿದ್ದಾರೆ.