2024ನೇ ಸಾಲಿನಲ್ಲಿ ಮನೆ ಖರೀದಿ ಉತ್ತಮನಾ ಅಥವಾ ಬಾಡಿಗೆ ಮನೆಯೇ ಓಕೆನಾ? ತಜ್ಞರು ಏನಂತಾರೆ?

By Suvarna News  |  First Published Jan 3, 2024, 6:18 PM IST

2024ನೇ ಸಾಲಿನಲ್ಲಿ ನೀವು ಮನೆ ಅಥವಾ ಆಸ್ತಿ ಖರೀದಿಸುವ ಪ್ಲ್ಯಾನ್ ಮಾಡಿದ್ದೀರಾ? ಹಾಗಿದ್ದಲ್ಲಿ ಈ ವರ್ಷ ಮನೆ ಖರೀದಿ ಮಾಡ್ಬಹುದಾ? ಆಸ್ತಿ ಬೆಲೆ ಎಷ್ಟಿರಲಿದೆ? ಇಲ್ಲಿದೆ ಮಾಹಿತಿ. 


Business Desk: ಮತ್ತೊಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.  ಈ ವರ್ಷದಲ್ಲಿ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ನೀವು ಈಗಾಗಲೇ ಯೋಜನೆ ರೂಪಿಸಿಕೊಂಡಿರುತ್ತೀರಿ. ಹಾಗೆಯೇ 2024ನೇ ಸಾಲಿನಲ್ಲಿ ಆಸ್ತಿಗೆ ಸಂಬಂಧಿಸಿಯೂ ನೀವು ಆಲೋಚಿಸಿರುತ್ತೀರಿ. ಹೀಗಿರುವಾಗ ಈ ವರ್ಷ ಮನೆ ಖರೀದಿ ಉತ್ತಮನಾ ಅಥವಾ ಬಾಡಿಗೆ ಮನೆಯಲ್ಲಿರೋದು ಒಳ್ಳೆಯದಾ? ಇಂಥದೊಂದು ಯೋಚನೆ ಹಲವರಲ್ಲಿ ಮೂಡಿರುತ್ತದೆ. ಗೃಹಸಾಲದ ಬಡ್ಡಿದರದಲ್ಲಿ ಏರಿಕೆ ಹಾಗೂ ಮನೆ ಬೆಲೆಗಳಲ್ಲಿನ ಹೆಚ್ಚಳದ ಹೊರತಾಗಿಯೂ ಮನೆ ಖರೀದಿ ಕುರಿತ ಜನರ ಒಲವು 2023ರಲ್ಲಿ ತಗ್ಗಲಿಲ್ಲ. ಹೀಗಾಗಿ 2023ನೇ ಸಾಲಿನಲ್ಲಿ 2.6 ಲಕ್ಷ ಮನೆಗಳು ಮಾರಾಟವಾಗಿವೆ. ಇದು 2008ರ ಬಳಿಕದ ಅತೀಹೆಚ್ಚು ದೊಡ್ಡ ಪ್ರಮಾಣದ ಮನೆಗಳ ಮಾರಾಟವಾಗಿದೆ. ಇನ್ನು 2024ರಲ್ಲಿ ಕೂಡ ಈ ಬೆಳವಣಿಗೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ಮನೆಗಳ ಮಾರಾಟ 3ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ ಎಂದು ವರದಿಯೊಂದು ಹೇಳಿದೆ.

ಈ ವರದಿ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ 2024ನೇ ಸಾಲಿನಲ್ಲಿ ಕೂಡ ಬೆಳವಣಿಗೆ ದಾಖಲಿಸಲಿದೆ. ಖರೀದಿದಾರರಿಂದಲೂ ಉತ್ತಮ ಪ್ರತಿಕ್ರಿಯೆ ಬರಲಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಇನ್ನಷ್ಟು ವಿಸ್ತರಣೆ ಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅಲ್ಲದೆ, ಪ್ರಮುಖ ನಗರಗಳಲ್ಲಿ ಬಾಡಿಗೆ ದರ ಕೂಡ ಹೆಚ್ಚಿದೆ. ಇನ್ನು 2024 ಚುನಾವಣಾ ವರ್ಷವಾಗಿದ್ದರೂ ಮನೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಹೇಳಲಾಗಿದೆ. ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ಭಾರತದ ಟಾಪ್ ಏಳು ನಗರಗಳಲ್ಲಿ ಸರಾಸರಿ ಗೃಹ ಬೆಲೆಯಲ್ಲಿ ಶೇ.33ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Tap to resize

Latest Videos

ಕೋಟಿಗಟ್ಟಲೆ ಸಂಪಾದಿಸೋ ಸ್ಟಾರ್ಟ್ ಅಪ್ ಬಗ್ಗೆ ಕೇಳಿ, ಬ್ಯುಸಿನೆಸ್ ಶುರು ಮಾಡೋರು ನೀವಾಗಿದ್ದರೆ!?

2024ರಲ್ಲಿ ಆಸ್ತಿ ಖರೀದಿಸಬೇಕಾ?
ನಿವೇಶನ ಅಥವಾ ಮನೆ ಖರೀದಿ ಯೋಚನೆಯುಳ್ಳವರು ಖಂಡಿತಾ ಈ ವರ್ಷ ಅದನ್ನು ಮಾಡಬಹುದು. ಬಾಡಿಗೆ ಮನೆಯಲ್ಲಿದ್ದರೆ ಅದರಿಂದ ನೀವು ಆಸ್ತಿ ಸೃಷ್ಟಿಸಲು ಯಾವುದೇ ನೆರವು ಸಿಗೋದಿಲ್ಲ. ಹಾಗೆಯೇ ಷೇರುಗಳು ಅಥವಾ ಚಿನ್ನದ ಮೇಲಿನ ಹೂಡಿಕೆ ಕೂಡ ಎಲ್ಲ ಸಮಯದಲ್ಲೂ ಕೈಹಿಡಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೆಂಡಾಮಿಕ್ ಸಮಯದಲ್ಲಿ ಇವುಗಳ ಮೇಲಿನ ಹೂಡಿಕೆಯಿಂದ ಉತ್ತಮ ರಿಟರ್ನ್ಸ್ ಬರುತ್ತದೆ ಎಂದು ಅಂದಾಜಿಸಲು ಕೂಡ ಸಾಧ್ಯವಿಲ್ಲ. ಹೀಗಾಗಿ 2024ನೇ ಸಾಲಿನಲ್ಲಿ ಮನೆ ಖರೀದಿ ಮಾಡಲು ಹಿಂದೇಟು ಹಾಕಬೇಡಿ ಎನ್ನುತ್ತಾರೆ ತಜ್ಞರು. ಆಸ್ತಿಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಆಸ್ತಿ ಮೇಲೆ ಹೂಡಿಕೆ ಮಾಡಲು ಅಂಜಬೇಕಾಗಿಲ್ಲ.

ಮನೆ ಖರೀದಿ ಮುನ್ನ ಈ ವಿಚಾರಗಳ ಬಗ್ಗೆ ಯೋಚಿಸಿ:
*ಪ್ರತಿ ತಿಂಗಳು ಇಎಂಐ ಕಟ್ಟಬಲ್ಲೀರಾ?
ಮನೆ ಖರೀದಿ ಪ್ಲ್ಯಾನ್ ಮಾಡುತ್ತಿದ್ದರೆ ನೀವು ಮೊದಲು ಮಾಡಬೇಕಾದ ಕೆಲಸವೆಂದ್ರೆ ಗೃಹಸಾಲದ ಬಗ್ಗೆ ಯೋಚಿಸೋದು. ಬ್ಯಾಂಕುಗಳು ಸುಲಭವಾಗಿ ಸಾಲವೇನೂ ನೀಡುತ್ತವೆ. ಆದರೆ, ಗೃಹಸಾಲದ ಇಎಂಐ ಕಟ್ಟೋದು ಅಷ್ಟು ಸುಲಭವಲ್ಲ. ಏಕೆಂದರೆ ಇದು ದೀರ್ಘಾವಧಿಯ ಕಮಿಟ್ ಮೆಂಟ್. ಹೀಗಾಗಿ ನಿಮಗೆ ಇಎಂಐ ಪಾವತಿಸುವ ಸಾಮರ್ಥ್ಯವಿದೆಯಾ ಎಂಬುದನ್ನು ಮೊದಲು ಆಲೋಚಿಸಿ. 

*ಡೌನ್ ಪೇಮೆಂಟ್ ಗೆ ಬೇಕಾಗುವಷ್ಟು ಹಣವಿದೆಯಾ?
ಇನ್ನು ಮನೆ ಖರೀದಿಗೆ ಬ್ಯಾಂಕ್ ಸಾಲ ನೀಡುತ್ತದೆ. ಆದರೆ, ಇದು ಒಟ್ಟು ಮೊತ್ತದ ಶೇ.80ರಷ್ಟು ಮಾತ್ರ. ಅಂದರೆ ಶೇ.20ರಷ್ಟನ್ನು ನೀವು ನಿಮ್ಮ ಕೈಯಿಂದ ಪಾವತಿಸಬೇಕು. ಹೀಗಾಗಿ ಒಟ್ಟು ಮೊತ್ತದ ಕನಿಷ್ಠ ಶೇ.30ರಿಂದ ಶೇ.40ರಷ್ಟನ್ನು ನೀವೇ ವ್ಯವಸ್ಥೆ ಮಾಡಿಕೊಳ್ಳಿ. ಅಷ್ಟು ಮೊತ್ತ ನಿಮ್ಮ ಬಳಿಯಿದ್ರೆ ಮನೆ ಖರೀದಿ ವಿಚಾರದಲ್ಲಿ ಮುಂದುವರಿಯಬಹುದು. 

ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!

*ಸೂಕ್ತ ಸ್ಥಳ ಆಯ್ಕೆ ಮಾಡಿ
ನೀವು ಮನೆ ಖರೀದಿಸುವಾಗ ಯಾವ ನಗರ ಅಥವಾ ಪ್ರದೇಶ ಎಂಬ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿಕೊಳ್ಳಿ. ಮನೆಯಿರುವ ಸ್ಥಳಕ್ಕೆ ಸೂಕ್ತ ರಸ್ತೆಗಳಿವೆಯಾ? ನೀರಿನ ಪೂರೈಕೆ, ಶಾಲೆ, ಆಸ್ಪತ್ರೆ ಹಾಗೂ ಶಾಪ್ ಗಳು ಹತ್ತಿರವಿಯಾ ಎಂಬುದನ್ನು ಪರಿಶೀಲಿಸಿದ ಬಳಿಕ ಮನೆ ಖರೀದಿ ಮಾಡಿ.

*ರೆಡಿ ಟು ಮೂವ್ ಅಥವಾ ನಿರ್ಮಾಣ ಹಂತದಲ್ಲಿರುವ ಮನೆಯಾ?
ಇನ್ನು ನೀವು ಮನೆ ಖರೀದಿಸುವ ಯೋಚನೆ ಮಾಡಿದ ಬಳಿಕ ರೆಡಿ ಟು ಮೂವ್ ಮನೆಗೆ ಹೋಗೋದಾ ಅಥವಾ ಇನ್ನೂ ನಿರ್ಮಾಣ ಹಂತದಲ್ಲಿರುವ ಮನೆಗೆ ಹೋಗುತ್ತೀರಾ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.


 

click me!