ಕೋಟಿಗಟ್ಟಲೆ ಸಂಪಾದಿಸೋ ಸ್ಟಾರ್ಟ್ ಅಪ್ ಬಗ್ಗೆ ಕೇಳಿ, ಬ್ಯುಸಿನೆಸ್ ಶುರು ಮಾಡೋರು ನೀವಾಗಿದ್ದರೆ!?
ಬ್ಯುಸಿನೆಸ್ ಶುರು ಮಾಡಿದ್ರೆ ಸಾಲದು, ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಬುದ್ಧಿವಂತಿಕೆ ಬೇಕು. ನಾನಾ ಕ್ಷೇತ್ರದ ಮಾಹಿತಿಯನ್ನು ವ್ಯಾಪಾರಸ್ಥರು ಹೊಂದಿರಬೇಕು. ಸ್ಟಾರ್ಟ್ ಅಪ್ ಸಕ್ಸಸ್ ಆಗ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಸ್ಟಾರ್ಟ್ ಅಪ್ ಗಳಿಗೆ ಫಂಡಿಂಗ್ ಸಿಗೋದು ಈಗಿನ ದಿನಗಳಲ್ಲಿ ಕಷ್ಟ. ಸ್ಟಾರ್ಟ್ ಅಪ್ ಉತ್ತೇಜಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಆದ್ರೂ ಸ್ಟಾರ್ಟ್ ಅಪ್ ಗಳಿಗೆ ಫಂಡಿಂಗ್ ಮುಖ್ಯವಾಗುತ್ತದೆ. ಆರ್ಥಿಕ ಸ್ಥಿತಿ ಸರಿಯಲ್ಲದ ಸಂದರ್ಭದಲ್ಲಿ ಸ್ಟಾರ್ಟ್ ಅಪ್ ಗಳು ಬಾಗಿಲು ಮುಚ್ಚುತ್ತವೆ. ಜನರು ಬ್ಯುಸಿನೆಸ್ ಗೆ ಕೈ ಹಾಕ್ತಾರೆ. ಅದ್ರಲ್ಲಿ ಯಶಸ್ವಿಯಾಗುವ ಕನಸು ಕಂಡು ಅದಕ್ಕೆ ಹಣ ಸುರಿಯುತ್ತಾರೆ. ಆದ್ರೆ ದಿನ ಕಳೆದಂತೆ ಹಣಕಾಸಿನ ಸಮಸ್ಯೆ ಹಾಗೂ ಸರಿಯಾದ ಪ್ಲಾನಿಂಗ್ ಇಲ್ಲದೆ ಮಾಡುವ ಕೆಲಸ ವ್ಯವಹಾರದಲ್ಲಿ ಹಿನ್ನಡೆಯಾಗಲು ಕಾರಣವಾಗುತ್ತದೆ.
ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಅಪ್ (Start Up) ಕಂಪನಿಗಳಿಗೆ ಹಣ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಅವು ತಮ್ಮ ಉದ್ಯೋಗಿ (Employee) ಗಳನ್ನು ಕೆಲಸದಿಂದ ತೆಗೆಯುತ್ತಿವೆ. ಐಬಿಎಂನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ. ವರದಿಯ ಪ್ರಕಾರ, 91 ಪ್ರತಿಶತದಷ್ಟು ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾದ ಐದು ವರ್ಷಗಳಲ್ಲಿ ಮುಚ್ಚುತ್ತವೆ. ನೀವು ಈಗಾಗಲೇ ಸ್ಟಾರ್ಟ್ ಅಪ್ ಹೊಂದಿದ್ದರೆ ಅಥವಾ ಸ್ಟಾರ್ಟ್ ಅಪ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಮೊದಲು ಅದ್ರ ಪ್ಲಾನಿಂಗ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಕೊನೆಯಲ್ಲಿ ಕೈಸುಟ್ಟುಕೊಳ್ಳುವ ಬದಲು ಆರಂಭದಿಂದಲೇ ಪ್ಲಾನ್ ರೀತಿಯಲ್ಲಿ ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ.
ಗರ್ಲ್ ಫ್ರೆಂಡ್ ಪಾದದ ಕೆಳಗೆ ನೋಟಿನ ಕಂತೆ, ಇಷ್ಟು ದುಡ್ಡು ನೋಡಿ ನೆಟ್ಟಿಗರು ದಂಗು!
ಸ್ಟಾರ್ಟ್ ಅಪ್ ಸುಧಾರಣೆಗೆ ಈ ಕೆಲಸ ಮಾಡಿ :
ಉತ್ತಮ ಉದ್ಯೋಗಿಗಳು : ನಿಮ್ಮ ಕೆಲಸಕ್ಕೆ ಉದ್ಯೋಗಿಗಳು ಬೇಕು ಎನ್ನುವ ಕಾರಣಕ್ಕೆ ಉದ್ಯೋಗಿಗಳ ನೇಮಕ ಮಾಡಿಕೊಳ್ಳಬೇಡಿ. ನೀವು ಹಾಗೂ ನಿಮ್ಮ ಜೊತೆ ಕೆಲಸ ಮಾಡುವವರು ಸ್ಟಾರ್ಟ್ ಅಪ್ ಕಂಪನಿಯ ಯಶಸ್ಸಿಗೆ ಮುಖ್ಯ ಪಾತ್ರವಗಿಸುತ್ತಾರೆ. ಒಂದಾಗಿ, ಗುಂಪಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕು, ಎಲ್ಲರೂ ಒಂದಾಗಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಅಂದ್ರೆ ಒಳ್ಳೆಯ ಉದ್ಯೋಗಿಗಳ ನೇಮಕ ಮುಖ್ಯ.
ಆನ್‌ಲೈನ್ ಫುಡ್ ಬುಕ್ಕಿಂಗ್ ಇನ್ನು ದುಬಾರಿ, ಫ್ಲಾಟ್‌ಫಾರ್ಮ್ ಫೀ ಏರಿಸಿದ Zomato!
ಗ್ರಾಹಕರನ್ನು ಹಿಡಿದಿಡಿ : ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ನಿಮ್ಮ ಕಂಪನಿ ಏಳ್ಗೆ ಕಾಣುತ್ತದೆ. ಹಾಗಂತ ನೀವು ಹಳೆ ಗ್ರಾಹಕರನ್ನು ನಿರ್ಲಕ್ಷ್ಯ ಮಾಡಬಾರದು. ಈಗಾಗಲೇ ನಿಮ್ಮ ಬಳಿ ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಹೊಸ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಬೇಕು. ಗ್ರಾಹಕರ ಅಗತ್ಯತೆಯನ್ನು ಗಮನಿಸಿ ಉತ್ಪನ್ನ ತಯಾರಿಸಿ. ಕ್ವಾಲಿಟಿಗೆ ಹೆಚ್ಚು ಮಹತ್ವ ನೀಡಬೇಕು ಎಂಬುದನ್ನು ಮರೆಯಬೇಡಿ.
ಪ್ರಚಾರಕ್ಕೆ ಗಮನ ನೀಡಿ : ನೀವೆಷ್ಟೆ ಒಳ್ಳೆಯ ಉತ್ಪನ್ನ ಅಥವಾ ಸೇವೆ ನೀಡ್ತಿದ್ದರೂ ಅದ್ರ ಬಗ್ಗೆ ಜನರಿಗೆ ತಿಳಿದಿಲ್ಲವೆಂದ್ರೆ ಗ್ರಾಹಕರ ಸಂಖ್ಯೆ ಹೆಚ್ಚಾಗೋದಿಲ್ಲ. ಹಾಗಾಗಿ ನಿಮ್ಮ ಸೇವೆ ಮತ್ತು ಉತ್ಪನ್ನದ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಲು ಜಾಹೀರಾತುಗಳ ಸಹಾಯ ಪಡೆಯಬೇಕು. ನಿಮ್ಮ ಸೇಲ್ಸ್ ಟೀಂ ಅತ್ಯುತ್ತಮವಾಗಿದ್ದಲ್ಲಿ, ಜನರನ್ನು ತಲುಪುವುದು ಕಷ್ಟವಾಗೋದಿಲ್ಲ.
ಆಫರ್ ಮತ್ತು ಡಿಸ್ಕೌಂಟ್ ಗೆ ಆದ್ಯತೆ ನೀಡಿ : ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು, ಅವರಿಗೆ ಕಾಲಕಾಲಕ್ಕೆ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುವುದು ಅವಶ್ಯಕ. ಇದಕ್ಕಾಗಿ ಎಲ್ಲಾ ಕಂಪನಿಗಳು ಮಾರ್ಕೆಟಿಂಗ್ ತಂತ್ರವನ್ನು ಬಳಸುತ್ತವೆ. ನೀವು ಫ್ಲಾಟ್ ರಿಯಾಯಿತಿ ಅಥವಾ ಉಚಿತ ಗಿಫ್ಟ್ ವೋಚರ್ ನೀಡಬಹುದು. ಇಲ್ಲವೆ ಬೇರೆ ಸ್ಕೀಂಗಳನ್ನು ತಂದು ಹ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು.
ಸ್ಪರ್ಧಿಗಳ ಬಗ್ಗೆ ತಿಳಿದಿರಿ : ನೀವು ಯಾವ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಲು ಬಯಸಿದ್ದೀರಿ ಆ ಕ್ಷೇತ್ರದಲ್ಲಿ ಸ್ಪರ್ಧೆ ಹೇಗಿದೆ ಎಂಬುದನ್ನು ಮೊದಲು ಅರಿಯಿರಿ. ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಿ. ಉತ್ಪನ್ನಕ್ಕೆ ಎಲ್ಲಿ ಬೇಡಿಕೆ ಹೆಚ್ಚು, ಮಾರುಕಟ್ಟೆ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದಿರಿ.