ಪರಿಸರಸ್ನೇಹಿ ಫೂಟ್ ವೇರ್ ಸ್ಟಾರ್ಟ್ ಅಪ್ ಪ್ರಾರಂಭಿಸಿದ ಗುಜರಾತಿನ ಅಣ್ಣ-ತಂಗಿ; ಕಬ್ಬಿನ ಸಿಪ್ಪೆ ಶೂಗೆ ಭಾರೀ ಬೇಡಿಕೆ

By Suvarna News  |  First Published Oct 11, 2023, 5:29 PM IST

ವಿನೂತನವಾಗಿ ಏನೇ ಮಾಡಿದರೂ ಅದು ಯಶಸ್ಸು ಕಾಣುತ್ತದೆ. ಸ್ಟಾರ್ಟ್ ಅಪ್ ವಿಷಯಗಳಲ್ಲಿ ಕೂಡ ಇದು ನಿಜವಾಗಿದೆ. ಗುಜರಾತ್ ಮೂಲದ ಸಹೋದರ ಹಾಗೂ ಸಹೋದರಿ ಪ್ರಾರಂಭಿಸಿದ ಕಬ್ಬಿನ ಸಿಪ್ಪೆಯಿಂದ ಶೂ ಉತ್ಪಾದಿಸುವ ಸ್ಟಾರ್ಟ್ ಅಪ್ ಕಿರು ಅವಧಿಯಲ್ಲಿ ಜನಪ್ರಿಯತೆ ಗಳಿಸಿದೆ. ಕಬ್ಬಿನ ಸಿಪ್ಪೆ ಶೂಗಳಿಗೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. 


Business Desk:ನಿಮ್ಮ ಹಳೆಯ ಶೂಗಳನ್ನು ಎಸೆಯುವ ಮುನ್ನ ಯೋಚಿಸಿದ್ದೀರಾ? ಪ್ರತಿ ವರ್ಷ ಜಾಗತಿಕವಾಗಿ ಅಂದಾಜು 35 ಕೋಟಿ ಜೊತೆ  ಶೂಗಳನ್ನು ಎಸೆಯಲಾಗುತ್ತದೆ. ಮಣ್ಣಿನಲ್ಲಿ ಕರಗದ ಈ ಶೂಗಳು ನೆಲ ಹಾಗೂ ಸಮುದ್ರದಲ್ಲಿ ತುಂಬಿರುವ ಮೂಲಕ ನಮ್ಮ ಪರಿಸರಕ್ಕೆ ಮಾರಕವಾಗಿವೆ. ಈ ರೀತಿ ಶೂಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂಬುದನ್ನು ಮನಗಂಡ ಗುಜರಾತ್ ಮೂಲದ ಸಹೋದರ ಹಾಗೂ ಸಹೋದರಿ ಇದಕ್ಕೊಂದು ಹೊಸ ಪರಿಹಾರ ಹುಡುಕಿದ್ದಾರೆ. ಕಬ್ಬಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸಿಕೊಂಡು ಶೂಗಳನ್ನು ಉತ್ಪಾದಿಸುವ ಉದ್ಯಮ ಪ್ರಾರಂಭಿಸಿದ್ದಾರೆ. ಪಾರ್ಥ ಹಾಗೂ ಕರೀಶ್ಮಾ ದಲಾಲ್ ಅವರು ಈ ವರ್ಷದ ಮೇನಲ್ಲಿ 'ರೀರೂಟ್' ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದಾರೆ. ಇವರ ಈ ಸ್ಟಾರ್ಟ್ ಅಪ್ ನಲ್ಲಿ ಶೂಗಳ ತಯಾರಿಗೆ ಬಳಸುವ ಸಾಮಗ್ರಿಗಳು ಕಾರ್ಬನ್ ನೆಗೆಟಿವ್ ಗುಣ ಹೊಂದಿವೆ. ಈ ಶೂ ಉತ್ಪಾದನೆ ಸ್ಟಾರ್ಟ್ ಅಪ್ ಪ್ರಾರಂಭಗೊಂಡ ಕೆಲವೇ ತಿಂಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಬೆಂಗಳೂರು ಹಾಗೂ ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಈ ಶೂಗಳು ಗ್ರಾಹಕರನ್ನು ಸೆಳೆಯುತ್ತಿವೆ. 

'ಶೇ.100ರಷ್ಟು ಕಾರ್ಬನ್ ನ್ಯೂಟ್ರಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಮೊದಲಿಗೆ ಕಬ್ಬಿನ ಸಿಪ್ಪೆ ಹಾಗೂ ಪ್ಲಾಸ್ಟಿಕ್ ಬಾಟಲ್ ಗಳಂತಹ ತ್ಯಾಜ್ಯಗಳನ್ನು ತಗ್ಗಿಸೋದು ನಮ್ಮ ಉದ್ದೇಶ. ಹಾಗೆಯೇ ಈ ತ್ಯಾಜ್ಯಗಳಿಗೆ ಮರುಜೀವ ನೀಡುವುದು ಕೂಡ ನಮ್ಮ ಗುರಿ' ಎನ್ನುತ್ತಾರೆ ಪಾರ್ಥ. ಕಳೆದ ಒಂದೇ ತಿಂಗಳಲ್ಲಿ 400 ಜೊತೆ ಶೂಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಕೂಡ ಪಾರ್ಥ ನೀಡಿದ್ದಾರೆ.

Tap to resize

Latest Videos

ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಬಾಲೆ, 2022ರಲ್ಲಿ ಸ್ಥಾಪಿಸಿದ ಕಂಪೆನಿ ಈಗ 100 ಕೋಟಿ ಮೌಲ್ಯ

ತಂದೆ ಆಸೆ ಪೂರೈಸಿದ ಮಕ್ಕಳು
ಗುಜರಾತ್ ಸೂರತ್ ನಲ್ಲಿ ಹುಟ್ಟಿ ಬೆಳೆದ ಪಾರ್ಥ 2016ರಲ್ಲಿ ನ್ಯೂಯಾರ್ಕ್ ಗೆ ತೆರಳಿ ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಾರೆ. ಆ ಬಳಿಕ ಅವರು ಫಾರ್ಮಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಕೂಡ. ಆದರೆ, 2019ರಲ್ಲಿ ಕೋವಿಡ್ -19 ಪೆಂಡಾಮಿಕ್ ಕಾಣಿಸಿಕೊಳ್ಳುವ ಮುನ್ನ ಭಾರತಕ್ಕೆ ಹಿಂತಿರುಗುತ್ತಾರೆ. ನಂತರ ಸ್ಟಾರ್ಟ್ ಅಪ್ ಪ್ರಾರಂಭಿಸುವ ಕುರಿತು ತಂದೆ ಹಾಗೂ ಸಹೋದರಿ ಕರೀಶ್ಮಾ ಜೊತೆ ಮಾತುಕತೆ ನಡೆಸುತ್ತಾ ಆಗ ಅವರ ತಂದೆ, ಸೊಸೈಟಿಗಳಲ್ಲಿ ಎಷ್ಟು ಶೂಗಳನ್ನು ಎಸೆಯಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಇಂಥ ಶೂಗಳನ್ನು ಪರಿಸರದ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸುತ್ತಾರೆ. 

ತಂದೆಯ ಮಾತುಗಳು ಪಾರ್ಥ ಹಾಗೂ ಅವರ ಸಹೋದರಿ ಕರೀಶ್ಮಾ ಅವರನ್ನು ಈ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಪರಿಣಾಮ ಪಾರ್ಥ ಹಾಗೂ ಕರೀಶ್ಮಾ ಸುಸ್ಥಿರ ಹಾಗೂ ಪರಿಸರಸ್ನೇಹಿ ಶೂಗಳನ್ನು ಉತ್ಪಾದಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಶೂಗಳನ್ನು ಲೆದರ್ ಅಥವಾ ರಬ್ಬರ್ ಶೂಗಳಂತೆ ಅಲ್ಲ. ಬದಲಿಗೆ ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ. ಆದರೆ, ಕೊರೋನಾ ಪ್ರಾರಂಭವಾದ ಸಮಯದಲ್ಲೇ ಪಾರ್ಥ ತಂದೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ತಂದೆ ನೀಡಿದ ಸಲಹೆ ಹಾಗೂ ಮಾರ್ಗದರ್ಶನವನ್ನು ಮರೆಯದ ಪಾರ್ಥ ಆಗೂ ಕರೀಶ್ಮಾ 2021ರಲ್ಲಿ ಕಂಪನಿ ಪ್ರಾರಂಭಿಸುತ್ತಾರೆ. 

ಉದ್ಯಮ ಪ್ರಾರಂಭಿಸಲು ಕಾಲೇಜ್ ಪ್ರಾಜೆಕ್ಟ್ ಸ್ಫೂರ್ತಿ;6 ವರ್ಷಗಳ ಹಿಂದೆ ಸ್ಥಾಪಿಸಿದ ಕಂಪನಿ ಮೌಲ್ಯ ಈಗ 30 ಸಾವಿರ ಕೋಟಿ

ಎರಡು ವರ್ಷ ಅಧ್ಯಯನ
ಎರಡು ವರ್ಷಗಳ ಕಾಲ ಶೂ ಉತ್ಪಾದನೆ ಉದ್ಯಮಗಳ ಬಗ್ಗೆ ಪಾರ್ಥ ಹಾಗೂ ಕರೀಶ್ಮಾ ಅಧ್ಯಯನ ನಡೆಸುತ್ತಾರೆ. ಈ ಸಮಯದಲ್ಲಿ ಅವರಿಗೆ ಸುಸ್ಥಿರ ಹಾಗೂ ಪರಿಸರಸ್ನೇಹಿ ಶೂಗಳನ್ನು ಉತ್ಪಾದಿಸುವ ಯೋಚನೆ ಸರಿಕಾಣುತ್ತದೆ. ಭಾರತದಲ್ಲಿ ಕಬ್ಬನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ಇದರ ಸಿಪ್ಪೆಯನ್ನು ಬಳಸಿಕೊಂಡು ಶೂ ಸಿದ್ಧಪಡಿಸುವ ಯೋಚನೆ ಮಾಡುತ್ತಾರೆ. ಹಾಗೆಯೇ ಮೆರಿನೊ ಉಣ್ಣೆ ಹಾಗೂ 3ಡಿ ವಾಟರ್ ಬಾಟಲ್ ಗಳನ್ನು ಬಳಸಿಕೊಂಡು ಶೂ ತಯಾರಿಸಲು ಯೋಚಿಸುತ್ತಾರೆ. ಆ ಬಳಿಕ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಕೂಡ. ರೀರೂಟ್ ಶೂಗಳ ಬೆಲೆ 2,999 ರೂ. ಇದೆ. 


 

click me!