Gold Price: ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್;‌ 10 ಗ್ರಾಂಗೆ 37,000 ರೂ. ಕೊಟ್ಟು ಹಾಲ್‌ಮಾರ್ಕ್ ಆಭರಣ ಖರೀದಿಸಿ!

Published : Aug 13, 2025, 03:35 PM IST
what is 9k gold and difference between 22k and 24k

ಸಾರಾಂಶ

Gold Price In India: ಇಂದು ಬಂಗಾರದ ದರ ಹೆಚ್ಚಾಗಿದ್ದು, ಆಭರಣ ಖರೀದಿ ಮಾಡಬೇಕು ಎಂದುಕೊಳ್ಳುವವರಿಗೆ ನಿರಾಸೆ ಆಗಿದೆ. ಹೀಗಾಗಿ 9k ಗೋಲ್ಡ್‌ ಪರಿಚಯ ಮಾಡಲಾಗಿದೆ. ಇದಕ್ಕೂ ಹಾಲ್‌ಮಾರ್ಕ್‌ ಇದೆ. 

ಇಂದು ಬಂಗಾರದ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಗೋಲ್ಡ್‌ ಖರೀದಿ ( Gold Price ) ಮಾಡೋದು ತುಂಬ ಕಷ್ಟ ಆಗಿದೆ. ಎಷ್ಟೋ ಜನರು ಬಂಗಾರದ ಆಭರಣ ಹಾಕಿಕೊಳ್ಳೋ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಹೀಗಾಗಿ ಕಡಿಮೆ ಬೆಲೆಯ ಬಂಗಾರದ ಆಭರಣಗಳನ್ನು ನೀಡುವುದು ಅತ್ಯಗತ್ಯ.

9 ಕ್ಯಾರೆಟ್‌ ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಲಭ್ಯ

ಚಿನ್ನದ ಬೆಲೆ ಗಗನಕ್ಕೇರಿದ್ದಕ್ಕಾಗಿ 9 ಕ್ಯಾರೆಟ್‌ ಚಿನ್ನದ ಆಭರಣಗಳ ಪರಿಚಯ ಮಾಡಲಾಗಿದೆ. ಹೆಚ್ಚು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗಿಸುವ ಗುರಿಯಿಂದ ಈ ರೀತಿ ಮಾಡಲಾಗಿದೆ. ಸರ್ಕಾರವು ಇತ್ತೀಚೆಗೆ 9 ಕ್ಯಾರೆಟ್ ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕಿಂಗ್ ಕೂಡ ಲಭ್ಯವಿದೆ. ಇದು ಸರ್ಕಾರದ ನಿರ್ಧಾರ. ಇದನ್ನು ಆಭರಣ ಉದ್ಯಮವು ಖುಷಿಯಿಂದ ಸ್ವಾಗತಿಸಿದೆ.

ಎಷ್ಟೆಷ್ಟು ಕ್ಯಾರೆಟ್‌ ಗೋಲ್ಡ್‌ ಹಾಲ್‌ಮಾರ್ಕ್‌ ಇದೆ?

ಇದುವರೆಗೆ, ಭಾರತೀಯ ಗುಣಮಟ್ಟದ ಬ್ಯೂರೋ (BIS) 24K, 23K, 22K, 20K, 18K, ಮತ್ತು 14K ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ನಿಯಮಗಳನ್ನು ಹೊಂದಿತ್ತು. ಈಗ 9kಗೂ ಹಾಲ್‌ಮಾರ್ಕ್‌ ಬಂದಿದೆ. ಕಳೆದ ಜೂನ್‌ನಲ್ಲಿ, ಚಿನ್ನದ ಮಾರಾಟವು ಪರಿಮಾಣದ ಆಧಾರದ ಮೇಲೆ 60% ಕುಸಿತ ಕಂಡಿತ್ತು. ಇದು ಕೊರೊನಾ ಬಳಿಕ ಅತಿದೊಡ್ಡ ಕುಸಿತವಾಗಿತ್ತು.

9 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟು?

9 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 37,000 ರೂಪಾಯಿಗಳಷ್ಟಿದೆ, ಇದು 24 ಕ್ಯಾರೆಟ್‌ ಚಿನ್ನಕ್ಕೆ ಹೋಲಿಸಿದರೆ ( 10 ಗ್ರಾಂಗೆ 97,828 ರೂಪಾಯಿ ) ಕಡಿಮೆಯಾಗಿದೆ. 3% ಜಿಎಸ್‌ಟಿ ಸೇರಿದಂತೆ, 9 ಕ್ಯಾರೆಟ್ ಚಿನ್ನದ ಚಿಲ್ಲರೆ ಬೆಲೆ 10 ಗ್ರಾಂಗೆ ಸುಮಾರು 38,110 ರೂಪಾಯಿಗಳಾಗಿದೆ.

ಚಿನ್ನದ ಬೇಡಿಕೆ ಹೆಚ್ಚಾಗೋದು ಯಾವಾಗ?

9 ಕ್ಯಾರೆಟ್‌ ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಬಂದಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್‌ನ ರಕ್ಷಾಬಂಧನದಿಂದ ದೀಪಾವಳಿಯವರೆಗೆ , ನವೆಂಬರ್‌ನಲ್ಲಿ ಆರಂಭವಾಗುವ ಚಳಿಗಾಲದ ಮದುವೆಯ ಋತುವಿನವರೆಗೆ ಚಿನ್ನದ ಬೇಡಿಕೆಯು ಹೆಚ್ಚಾಗುವುದು.

ಗೋಲ್ಡ್‌ ರೇಟ್‌ ಹೆಚ್ಚಾಗಿದ್ದು ಯಾಕೆ?

ಭಾರತವು ವಾರ್ಷಿಕವಾಗಿ 800–850 ಟನ್‌ಗಳಷ್ಟು ಚಿನ್ನವನ್ನು ಬಳಸುತ್ತದೆ. ಇದರಲ್ಲಿ ಗ್ರಾಮೀಣ ಪ್ರದೇಶಗಳಿಂದ ಸುಮಾರು 60% ಬೇಡಿಕೆಯು ಬರುತ್ತದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಕಳೆದ ವರ್ಷ ಚಿನ್ನದ ಬೆಲೆ 25% ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಬಜೆಟ್‌ಗೆ ತಕ್ಕಂತೆ ಖರೀದಿಸಲು ಇಷ್ಟಪಡುವ ಗ್ರಾಹಕರಿಗೋಸ್ಕರ ಆಭರಣ ವ್ಯಾಪಾರಿಗಳು 9 ಕ್ಯಾರೆಟ್‌ ಆಭರಣಗಳನ್ನು ನೀಡುತ್ತಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!