
ಮುಂಬೈ: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಬರಲಿದೆ ಎಂದು ಹೇಳಿರುವ ಬೆನ್ನಲ್ಲೇ ಶೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸಾವಿರ ಅಂಕಗಳ ಏರಿಕೆ ಕಂಡಿದೆ.
"
ಡಾಲರ್ ಎದರು ಭಾರತದ ರುಪಾಯಿ ಬಲಗೊಂಡಿದ್ದು, ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ, ಮಾರಕಟ್ಟೆ ಜಿಗಿತ ಕಂಡಿದೆ.
ಮತ್ತೊಂದೆಡೆ ನಿಫ್ಟಿಯೂ ಉತ್ತಮ ಪ್ರಗತಿ ತೋರುತ್ತಿದ್ದು, ಉದ್ಯಮದ ಸಂತಸಕ್ಕೆ ಕಾರಣವಾಗಿದೆ. ಸ್ಥಿರ ಸರಕಾರದ ರಚನೆ ಹಾಗೂ ಉದ್ಯಮ ಸ್ನೇಹಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದೆ ಎಂದು ಕೂಡಲೇ ಮಾರುಕಟ್ಟೆ ಜಿಗಿತ ಕಂಡಿದೆ, ಎನ್ನುವುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆಯಾಗಿದೆ.
ಚುನಾವಣೋತ್ತರ ಸಮೀಕ್ಷೆ: ಸಿ-ವೋಟರ್‌ನಲ್ಲೂ ಎನ್ಡಿಎ ಫೆವರಿಟ್!
ಲೋಕಸಭಾ ಚುನಾಣೆ ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಲಿ ಉಳಿದಿದ್ದು, ಚುನಾವಣೆ ಮುಕ್ತಾವಾಗುತ್ತಿದ್ದಂತೆ ಹಲವು ಸಮೀಕ್ಷೆಗಳು ಬಿಜೆಪಿ ನೇತೃತ್ವದ NDAಗೆ ಬಹುಮತ ಪಡೆಯುವ ನಿರೀಕ್ಷೆ ಇದ್ದು, ಶೇರುಪೇಟೆ ಚೇತರಿಸಿಕೊಂಡಿದೆ. ಹಲವು ಸಮೀಕ್ಷೆಗಳ ಪ್ರಕಾರ NDA 300ರ ಆಸುಪಾಸಿನಲ್ಲಿದ್ದರೆ, UPA 100ರ ಆಸುಪಾಸಿನಲ್ಲಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಒಲಿದ 3 ರಾಜ್ಯಗಳು ಲೋಕಸಭೆಯಲ್ಲಿ ಬಿಜೆಪಿಗೆ!
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.