ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೂಡಿಕೆ ಅವಧಿ, ಬಡ್ಡಿ ದರ, ಮತ್ತು ವಿಸ್ತರಣೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಬೆಂಗಳೂರು (ಏ.4): ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಮಾರ್ಗವೆಂದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆ. ತೆರಿಗೆ ವಿನಾಯಿತಿಗಳೊಂದಿಗೆ ಖಚಿತ ಆದಾಯವನ್ನು ಈ ಯೋಜನೆ ನೀಡುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಈ ಯೋಜನೆ ಲಭ್ಯವಿದೆ. ಸಾಮಾನ್ಯವಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಂತಹ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಬದಲಾಯಿಸುತ್ತದೆ. ಇತರ ಉಳಿತಾಯ ಯೋಜನೆಗಳಿಗಿಂತ ಈ ಯೋಜನೆಗೆ ಸರ್ಕಾರ ಹೆಚ್ಚಿನ ಬಡ್ಡಿ ದರವನ್ನು ನಿಗದಿಪಡಿಸಿದೆ. ಈ ಬಾರಿ ಏಪ್ರಿಲ್-ಜೂನ್ ತ್ರೈಮಾಸಿಕದ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕಳೆದ ನವೆಂಬರ್‌ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಕೆಲವು ಮುಖ್ಯ ನಿಯಮಗಳನ್ನು ಸರ್ಕಾರ ಬದಲಾಯಿಸಿತ್ತು. ಅವು ಯಾವುವು ಎಂದು ನೋಡೋಣ.
1. ಸದ್ಯಕ್ಕೆ, ನಿವೃತ್ತಿ ಸೌಲಭ್ಯಗಳು ಸಿಕ್ಕ ಒಂದು ತಿಂಗಳ ಒಳಗಾಗಿ ಹೂಡಿಕೆ ಮಾಡಬೇಕು. ಇದನ್ನು ಮೂರು ತಿಂಗಳಿಗೆ ಹೆಚ್ಚಿಸಲಾಗಿದೆ.
2. ಕೆಲಸದಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಹೆಂಡತಿಯಂದಿರು ಸಹ ಈ ಯೋಜನೆಯಲ್ಲಿ ಹಣ ಹೂಡಲು ಹೊಸ ನಿಯಮಗಳು ಅನುಮತಿ ನೀಡುತ್ತವೆ. ಮೃತ ಸರ್ಕಾರಿ ನೌಕರನಿಗೆ 50 ವರ್ಷ ತುಂಬಿದ್ದರೆ, ಇದು ಅನ್ವಯಿಸುತ್ತದೆ. ನಿವೃತ್ತಿ ಸೌಲಭ್ಯ ಅಥವಾ ಮರಣ ಪರಿಹಾರಕ್ಕೆ ಅರ್ಹರಾದ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೂ ಈ ಸೌಲಭ್ಯ ಸಿಗಲಿದೆ. ಇದು ಅರ್ಹತೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮರಣ ಹೊಂದಿದ ಸರ್ಕಾರಿ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.
3. ಹೊಸ ನಿಯಮಗಳ ಪ್ರಕಾರ, ಹೂಡಿಕೆ ಮಾಡಿದ ಒಂದು ವರ್ಷದ ಅವಧಿ ಮುಗಿಯುವ ಮೊದಲು ಖಾತೆಯನ್ನು ಮುಚ್ಚಿದರೆ, ಹೂಡಿಕೆಯ ಒಂದು ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ. ಒಂದು ವರ್ಷದ ನಂತರ ಖಾತೆ ಮುಚ್ಚಿದರೆ, ಸಂಪೂರ್ಣ ಹಣ ಖಾತೆದಾರರಿಗೆ ಸಿಗುತ್ತಿತ್ತು, ಆದರೆ ಈಗ ಸಾಧ್ಯವಿಲ್ಲ.
4. ಖಾತೆದಾರರು ಈಗ ಎಷ್ಟು ಬ್ಲಾಕ್‌ಗಳಿಗೆ ಬೇಕಾದರೂ ಖಾತೆಯನ್ನು ವಿಸ್ತರಿಸಬಹುದು, ಪ್ರತಿ ಬ್ಲಾಕ್ ಮೂರು ವರ್ಷಗಳವರೆಗೆ ಇರುತ್ತದೆ. ಈ ಮೊದಲು ಒಂದು ಬಾರಿ ಮಾತ್ರ ವಿಸ್ತರಣೆಗೆ ಅವಕಾಶವಿತ್ತು.
5. ಅವಧಿ ಮುಗಿದ ನಂತರ ವಿಸ್ತರಿಸುವ ಠೇವಣಿಗಳಿಗೆ ಅನ್ವಯವಾಗುವ ಬಡ್ಡಿ ದರವನ್ನು ಸರ್ಕಾರ ಸ್ಪಷ್ಟಪಡಿಸಿದೆ. ಮೆಚ್ಯೂರಿಟಿ ದಿನಾಂಕ ಅಥವಾ ವಿಸ್ತರಿಸಿದ ಮೆಚ್ಯೂರಿಟಿ ದಿನಾಂಕದಂದು ಅನ್ವಯವಾಗುವ ಬಡ್ಡಿ ದರ ಲಭ್ಯವಿರುತ್ತದೆ.
Budget 2025: ನಿವೃತ್ತರು ಹಾಗೂ ಪಿಂಚಣಿ ಪಡೆಯೋರಿಗೆ ಬಜೆಟ್‌ನ ಲಾಭಗಳೇನು?
6. ಭವಿಷ್ಯ ನಿಧಿ ಬಾಕಿಗಳು, ಗ್ರಾಚ್ಯುಟಿಗಳು, ಕಮ್ಯುಟೆಡ್ ಪಿಂಚಣಿ ಮುಂತಾದವುಗಳನ್ನು ಒಳಗೊಂಡಂತೆ ನಿವೃತ್ತಿ ಸೌಲಭ್ಯಗಳ ವ್ಯಾಪ್ತಿಯನ್ನು ಸರ್ಕಾರವು ವ್ಯಾಖ್ಯಾನಿಸಿದೆ. ನಿವೃತ್ತಿ ಅಥವಾ ಸೂಪರ್‌ಆನ್ಯುಯೇಷನ್ ಕಾರಣದಿಂದ ವ್ಯಕ್ತಿಗಳಿಗೆ ಸಿಗುವ ಸೌಲಭ್ಯಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹವಾಗಿವೆ ಎಂದು ಇದು ಖಚಿತಪಡಿಸುತ್ತದೆ.
ಪಿಪಿಎಫ್‌ನಿಂದ-ನ್ಯಾಷನ್ ಸೇವಿಂಗ್ಸ್ ಸ್ಕೀಮ್‌ವರೆಗೆ.. ದೇಶದ 10 ಸರ್ಕಾರಿ ಉಳಿತಾಯ ಯೋಜನೆಗಳು