Personal Finance: ಏಜೆಂಟ್ ಇಲ್ಲದೆ ಆಸ್ತಿ ಮಾರಾಟಕ್ಕೆ ಇಳಿದ್ರೆ ಆಗೋ ನಷ್ಟವೇನು?

By Suvarna NewsFirst Published Dec 14, 2022, 2:39 PM IST
Highlights

ಕೆಲವರು ತಮ್ಮ ಆಸ್ತಿ ಮಾರಾಟ ಮಾಡುವ ವೇಳೆ ಏಜೆಂಟ್ ಸಹಾಯ ಪಡೆಯಲು ಮುಂದಾಗೋದಿಲ್ಲ. ಏಜೆಂಟ್ ಗೆ ಹಣ ನೀಡಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರ್ತಾರೆ. ಆದ್ರೆ ಈ ಕೆಲಸದಲ್ಲಿ ಮತ್ತೊಂದಿಷ್ಟು ನಷ್ಟ ಅನುಭವಿಸುತ್ತಾರೆ.
 

ಏಜೆಂಟ್ ಎಂಬ ಹೆಸರು ಕೇಳಿದಾಗ ಮೂಗು ಮುರಿಯುವವರೇ ಹೆಚ್ಚು. ಅದು ಯಾವುದೇ ಏಜೆಂಟ್ ಇರಲಿ. ಬಾಡಿಗೆ ಮನೆಯಿಂದ ಹಿಡಿದು ವಧು ಹುಡುಕುವವರೆಗೆ ಎಲ್ಲ ರೀತಿಯ ಏಜೆಂಟ್ ನಮ್ಮಲ್ಲಿ ಲಭ್ಯವಿದ್ದಾರೆ. ನಾವು ಏಜೆಂಟ್ ಹೆಸರು ಬಂದಾಗ ಅವರು ಹೆಚ್ಚು ಹಣ ಕಬಳಿಸುತ್ತಾರೆ ಎನ್ನುವ ದೃಷ್ಟಿಯಲ್ಲಿಯೇ ಅವರನ್ನು ನೋಡ್ತೇವೆ. ಆದ್ರೆ ಎಲ್ಲ ಕ್ಷೇತ್ರದಲ್ಲಿ ನೀವು ಏಜೆಂಟ್ ನಿರ್ಲಕ್ಷ್ಯ ಮಾಡಿ ನಿಮ್ಮ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಿಯಬೇಕು. ರಿಯಲ್ ಎಸ್ಟೇಟ್ ವಿಷ್ಯದಲ್ಲಿ ನೀವು ಏಜೆಂಟ್ ಸಹಾಯ ಪಡೆಯದೆ ಮನೆ ಮಾರಾಟ ಮಾಡಲು ಮುಂದಾಗಿದ್ದರೆ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೆವೆ.

ಅನೇಕರು ಏಜೆಂಟ್ (Agent) ಮೂಲಕ ಮನೆ ಅಥವಾ ಆಸ್ತಿ (Property) ಮಾರಾಟ ಮಾಡಲು ಹಿಂದೇಟು ಹಾಕ್ತಾರೆ. ಸ್ವತಃ ತಾವೇ ತಮ್ಮ ಆಸ್ತಿ ಮಾರಾಟಕ್ಕೆ ಇಳಿಯುತ್ತಾರೆ. ಆದ್ರೆ ಇದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್ ಬಗ್ಗೆ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ರಿಯಲ್ ಎಸ್ಟೇಟ್ (Real Estate) ಏಜೆಂಟ್ ಗಳು ಅದ್ರಲ್ಲಿ ಮಿಂದೆದ್ದಿರುತ್ತಾರೆ. ಅವರಿಗೆ ಅವರ ಕ್ಷೇತ್ರದ ಎಲ್ಲ ಮಾಹಿತಿ ಲಭ್ಯವಿರುತ್ತದೆ. ಏಜೆಂಟ್ ಇಲ್ಲದೆ ನಿಮ್ಮ ಆಸ್ತಿಯನ್ನು ಮಾರಾಟ ಮಾಡುವಾಗ ನೀವು ಮಾಡುವ ತಪ್ಪುಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೆವೆ.

2023ರಲ್ಲಿ ನಿಮ್ಮ ಗಳಿಕೆ ಹೆಚ್ಚಿಸುತ್ತೆ ಈ ಸುಲಭ ವಾಸ್ತು ಪರಿಹಾರ!

ಆಸ್ತಿ ಮೌಲ್ಯ : ನಮಗೆ ಪ್ರಸ್ತುತ ಮಾರುಕಟ್ಟೆ (Market) ಯ ಬೆಲೆ ತಿಳಿದಿರುವುದಿಲ್ಲ. ಹಾಗಾಗಿ ನಾವು ಆಸ್ತಿ ಬೆಲೆಯನ್ನು ಏರಿಸಿರುವ ಸಾಧ್ಯತೆಯಿರುತ್ತದೆ. ಮಾರುಕಟ್ಟೆ ಬೆಲೆಗಿಂತ ನಮ್ಮ ಆಸ್ತಿ ಬೆಲೆ ಹೆಚ್ಚಿದ್ದರೆ ನಮ್ಮ ಆಸ್ತಿ ಮಾರಾಟವಾಗದೆ ದೀರ್ಘಕಾಲ ಮಾರುಕಟ್ಟೆಯಲ್ಲಿ ಉಳಿಯುವ ಸಾಧ್ಯತೆಯಿರುತ್ತದೆ. ಆನ್‌ಲೈನ್ ಮೂಲಕ ನೀವು ಸ್ಥಳೀಯ ಬೆಲೆಯನ್ನು ಪತ್ತೆ ಮಾಡಬಹುದು. ಅನೇಕ ಬಾರಿ ನಾವು ಆಸ್ತಿಯೊಂದಿಗೆ ವಿಶೇಷ ಸಂಬಂಧ ಹೊಂದಿರುತ್ತೇವೆ. ಭಾವುಕವಾಗಿ ಅದ್ರ ಬೆಲೆಯನ್ನು ಉಳಿದವರ ಆಸ್ತಿಗಿಂತ ಹೆಚ್ಚಿಡುತ್ತೇವೆ. ಎಲ್ಲರಿಗಿಂತ ನಮ್ಮ ಆಸ್ತಿ ಉತ್ತಮವಾಗಿದ್ದು, ಖರೀದಿದಾರ ಮಾತುಕತೆ ಮೂಲಕ ಬೆಲೆ ಇಳಿಸಿಯೇ ಇಳಿಸುತ್ತಾನೆ. ಹಾಗಾಗಿ ಬೆಲೆ ಸ್ವಲ್ಪ ಹೆಚ್ಚಿರಲಿ ಎಂದು ಭಾವಿಸುತ್ತೀರಿ. ಆದ್ರೆ ಇದು ನಿಮಗೆ ಹೊಡೆತ ನೀಡುತ್ತದೆ. ನೀವು ಎಷ್ಟೇ ಮಾತಿನ ಕೌಶಲ್ಯ ಹೊಂದಿದ್ದರೂ ಏಜೆಂಟ್ ಮೂಲಕ ಆಸ್ತಿ ಮಾರಾಟ ಮಾಡುವುದು ಉತ್ತಮ ಆಯ್ಕೆಯಾಗಿದೆ. 

ನಿಮಗೆ ಸೋಲು : ಖರೀದಿದಾರ ಏಜೆಂಟ್ ಮೂಲಕ ನಿಮ್ಮನ್ನು ಸಂಪರ್ಕಿಸಬಹುದು. ಏಜೆಂಟ್ ಗೆ ಎಲ್ಲ ವಿಷ್ಯಗಳು ತಿಳಿದಿರುವ ಕಾರಣ ಆತ ನಿಮ್ಮನ್ನು ಸುಲಭವಾಗಿ ಹಿಮ್ಮೆಟ್ಟಿಸುವ ಸಾಧ್ಯತೆಯಿರುತ್ತದೆ. ನೀವು ನಿಮ್ಮ ಸಂಪತ್ತನ್ನು ಇರುವ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದರೆ ಏಜೆಂಟ್ ಬದಲು ಸ್ವಂತ ಮಾರಾಟಕ್ಕೆ ಮುಂದಾಗಬಹುದು. 

ಖರೀದಿಗೆ ಬರುವವರ ಸಂಖ್ಯೆ ಕಡಿಮೆ : ಇತ್ತೀಚಿನ ದಿನಗಳಲ್ಲಿ ಏಜೆಂಟ್ ಇಲ್ಲದೆ ಖರೀದಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ಮಾತಿನ ಮೂಲಕ ಅಥವಾ ನೀವು ಆನ್ಲೈನ್ ನಲ್ಲಿ ಜಾಹೀರಾತು ಹಾಕಿದ್ದರೆ ಅದನ್ನು ಕೇಳಿ ಬರುವವರು ಮಾತ್ರ ನಿಮ್ಮ ಆಸ್ತಿ ಮಾರಾಟದ ಬಗ್ಗೆ ವಿಚಾರಣೆ ನಡೆಸುತ್ತಾರೆ. ಏಜೆಂಟ್ ಮೂಲಕ ನೀವು ಹೋದ್ರೆ ನಿಮಗೆ ಹೆಚ್ಚಿನ ಗ್ರಾಹಕರು ಸಿಗ್ತಾರೆ. 

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಂತಿಮ ಗಡುವು ಮುಗಿದಿದ್ರೂ 3 ದಿನಗಳ ಕಾಲ ದಂಡ ವಿಧಿಸುವಂತಿಲ್ಲ, ಏಕೆ ಗೊತ್ತಾ?

ಸಮಯ ಹಾಳು : ಅನೇಕ ಬಾರಿ ಖರೀದಿದಾರರು ಅನಗತ್ಯವಾಗಿ ನಿಮ್ಮ ಸಮಯ ಹಾಳು ಮಾಡ್ತಾರೆ. ಅವರ ಮೂಲ ಉದ್ದೇಶ ಖರೀದಿಯಾಗಿರುವುದಿಲ್ಲ. ನಿಮಗೆ ಸಂಭಾವ್ಯ ಹಾಗೂ ಅರ್ಹ ಖರೀದಿದಾರರ ಪತ್ತೆ ಕಷ್ಟವಾಗುತ್ತದೆ. ಏಜೆಂಟರ್ ಗೆ ಇದ್ರ ಬಗ್ಗೆ ಮಾಹಿತಿ ಇರುವ ಕಾರಣ ಅವರು ಅರ್ಹರನ್ನು ಮಾತ್ರ ನಿಮ್ಮ ಬಳಿ ಕಳುಹಿಸುತ್ತಾರೆ. ಇದಲ್ಲದೆ ಏಜೆಂಟ್ ಆಸ್ತಿ ವೀಕ್ಷಣೆ ಸೇರಿದಂತೆ ಎಲ್ಲ ಕಾಗದದ ಕೆಲಸವನ್ನು ಮಾಡ್ತಾನೆ. ನೀವೇ ಕೆಲಸಕ್ಕೆ ಇಳಿದಾಗ ನಿಮ್ಮ ಉಳಿದ ಕೆಲಸ ಬಿಟ್ಟು ಖರೀದಿದಾರರಿಗೆ ಆಸ್ತಿ ತೋರಿಸುತ್ತ ನಿಮ್ಮ ಸಮಯ ಹಾಳು ಮಾಡಬೇಕಾಗುತ್ತದೆ.

click me!