ದಿನಕ್ಕೆ 7 ರಿಂದ 8 ಸಾವಿರ ಸಂಪಾದನೆ: ಡಬಲ್ ಡಿಗ್ರಿ ಮಾಡಿದವ್ರು ಇವರ ಮುಂದೆ ಝೀರೋ!

Published : May 01, 2025, 11:43 AM IST
ದಿನಕ್ಕೆ 7 ರಿಂದ 8 ಸಾವಿರ ಸಂಪಾದನೆ: ಡಬಲ್ ಡಿಗ್ರಿ ಮಾಡಿದವ್ರು ಇವರ ಮುಂದೆ ಝೀರೋ!

ಸಾರಾಂಶ

ಎಳನೀರು ವ್ಯಾಪಾರದಿಂದ ದಿನಕ್ಕೆ ₹7-8 ಸಾವಿರ ಗಳಿಸಬಹುದು. ಬೇಸಿಗೆಯಲ್ಲಿ ಲಾಭ ಹೆಚ್ಚು. ಆರೋಗ್ಯದ ಕಾಳಜಿಯಿಂದ ವರ್ಷಪೂರ್ತಿ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಒಂದು ಎಳನೀರು ₹೭೦-೮೦ಕ್ಕೆ ಮಾರಾಟವಾಗುತ್ತದೆ. ರೈತರಿಂದ ನೇರವಾಗಿ ಖರೀದಿಸಿದರೆ ಲಾಭ ಹೆಚ್ಚು. ಒಬ್ಬ ವ್ಯಾಪಾರಿ ದಿನಕ್ಕೆ ೨೦೦೦ ಎಳನೀರು ಮಾರುತ್ತಾನೆ ಎಂಬ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಅಸಾಧ್ಯ ಎಂದಿದ್ದಾರೆ.

Summer Business Idea: ಇಂದು ಯಾವ ಬ್ಯುಸಿನೆಸ್ ಮಾಡಿದ್ರೂ ಅದು ಮಾರುಕಟ್ಟೆಯ ಅಪಾಯಗಳನ್ನು ಒಳಗೊಂಡಿರುತ್ತದೆ. ಇಂದು ನಾವು ಹೇಳುತ್ತಿರುವ ಬ್ಯುಸಿನೆಸ್ ಮಾಡಿದ್ರೆ ದಿನಕ್ಕೆ 7 ರಿಂದ 8 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಬೇಸಿಗೆಗಾಲದಲ್ಲಿ ಮಾರಾಟ ಹೆಚ್ಚಾಗುವ ಕಾರಣ  ಲಾಭದ ಪ್ರಮಾಣ ಸಹ ಅಧಿಕವಾಗಿರುತ್ತದೆ. ಬೇಸಿಗೆ ನಂತರದ ದಿನಗಳಲ್ಲಿಯೂ ಇದರ ಮಾರಾಟ ಸಾಮಾನ್ಯವಾಗಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿರುವ ಕಾರಣ ಈ ವಸ್ತುವಿಗೆ ಬಹುತೇಕ ಎಲ್ಲಾ ದಿನಗಳಲ್ಲಿಯೂ ಬೇಡಿಕೆ ಇರುತ್ತದೆ. 

ಇಂದು ನಾವು ಹೇಳುತ್ತಿರೋದು ಎಳನೀರು ಮಾರಾಟ. ಬೇಸಿಗೆಗಾಲ ಆಗಿರೋದರಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಉತ್ತಮವಾದ ಒಂದು ಎಳನೀರು 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತದೆ. ಎಳನೀರು ವ್ಯಾಪಾರ ಮಾರಾಟ ಮಾಡುವ ಮೂಲಕ ಪ್ರತಿದಿನ 7 ರಿಂದ 8 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ರೈತರಿಂದ ನೇರವಾಗಿ ಖರೀದಿಸಿದ್ರೆ ನಿಮ್ಮ ಲಾಭದ ಪ್ರಮಾಣವೂ ಹೆಚ್ಚಾಗುತ್ತದೆ. ಸಾರಿಗೆ ಸೇರಿದಂತೆ ಇನ್ನಿತರ ವೆಚ್ಚಗಳನ್ನು ತೆಗೆದರೂ ನಿಮಗೆ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಲಾಭವಾಗುತ್ತದೆ. ಅಂದ್ರೆ ತಿಂಗಳಿಗೆ ನಿಮ್ಮ ಸಂಪದಾನೆ 50 ರಿಂದ 60 ಸಾವಿರ ರೂಪಾಯಿ ಆಗಲಿದೆ. 

ಎಳನೀರು ಮಾರಾಟದ ರೀಲ್ಸ್ 
cassiusclydepereira ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ದಿನಗಳ ಹಿಂದೆ ಎಳನೀರು ವ್ಯಾಪಾರದ ರೀಲ್ಸ್ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಕಂಟೆಂಟರ್ ಒಂದು ದಿನದಲ್ಲಿ ಎಳನೀರು ಮಾರಾಟ ಮಾಡೋದನ್ನು ಕಲಿಯಲು ಹೋಗುತ್ತಾನೆ. ವ್ಯಾಪಾರಿ ಹೇಗೆ ಚಾಕಚಕ್ಯತೆಯಿಂದ ಎಳನೀರು ಕೊಚ್ಚುತ್ತಾನೆ ಎಂದು ತೋರಿಸಲಾಗಿದೆ. ವ್ಯಾಪಾರಿಯಿಂದ ಎಳನೀರು ಕೊಚ್ಚುವ ವಿಧಾನ ಕಲಿಯಲು ಕಂಟೆಂಟ್ ಕ್ರಿಯೇಟರ್ ಪ್ರಯತ್ನಿಸುತ್ತಾನೆ.

ಇದಕ್ಕಾಗಿ ಕಂಟೆಂಟ್ ಕ್ರಿಯೇಟರ್ ಯುವಕ, ವ್ಯಾಪಾರಿಗೆ ಸಹಾಯ ಮಾಡುತ್ತಾನೆ. ಗ್ರಾಹಕರಿಗೆ ಎಳನೀರು ನೀಡುವುದು, ನಂತರ ಉಳಿದ ಎಳನೀರು ಚಿಪ್ಪುಗಳನ್ನು ಚೀಲದಲ್ಲಿ ತುಂಬಿಸಿ ಕಸದ ಗಾಡಿಗೆ ಹಾಕುತ್ತಾನೆ. ಆನಂತರ ಎಳನೀರು ಮಾರಾಟ ಮಾಡುತ್ತಿರುವ ಸುತ್ತಲಿನ ಜಾಗವನ್ನು ಶುಚಿಗೊಳಿಸುತ್ತಾನೆ. ಕೊನೆಗೆ ಆನ್‌ಲೈನ್‌ನಿಂದ ಎಳನೀರು ಮಾರಾಟ ಮಾಡುವ ಪೋಸ್ಟರ್ ತಯಾರಿಸುತ್ತಾನೆ. ಪೋಸ್ಟರ್ ಹಿಡಿದುಕೊಂಡು ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಯುವಕ ಮಾಡುತ್ತಾನೆ. ಕೊನೆಗೆ ವ್ಯಾಪಾರಿಯಿಂದ ಎಳನೀರು ಕೊಚ್ಚೋದು ಹೇಗೆ ಎಂದು ಕಲಿಯುತ್ತಾನೆ. 

ಇದನ್ನೂ ಓದಿ: ಆಡಿ ಕಾರಲ್ಲಿ ಬಂದು ಹಾಲು ಮಾರುವ ಅಮಿತ್ ಭಡಾನಾ; ಶ್ರೀಮಂತನಾದ ಕಥೆ

ಕೊನೆಯಲ್ಲಿ ಶಾಕಿಂಗ್ ನ್ಯೂಸ್ 
ವಿಡಿಯೋ ಕ್ರಿಯೇಟರ್ ಯುವಕ ಕೊನೆಯಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಶಾಕಿಂಗ್ ವಿಷಯ ಹೇಳುತ್ತಾನೆ. ತಾನು ಭೇಟಿಯಾದ ವ್ಯಾಪಾರಿ ದಿನಕ್ಕೆ 2,000 ಎಳನೀರು ಮಾರಾಟ ಮಾಡುತ್ತಾರೆ. ಬೆಳಗಿನ ಜಾವ 6ಕ್ಕೆ ತೆರೆಯುವ ಈ ಅಂಗಡಿ ಮಧ್ಯರಾತ್ರಿಯವರೆಗೂ ಇರುತ್ತದೆ. ಒಂದು ಎಳನೀರಿಗೆ 70 ರೂಪಾಯಿ ಆದ್ರೆ, 2,000 ಮಾರಾಟ ಮಾಡಿದ್ರೆ ದಿನದ ಸಂಪಾದನೆ 1,42,000 ರೂಪಾಯಿ ಆಗುತ್ತದೆ ಎಂದು ಹೇಳುತ್ತಾನೆ. ಆ ವ್ಯಾಪಾರಿ ನಿಜಕ್ಕೂ ದಿನಕ್ಕೆ 2 ಸಾವಿರ ಎಳನೀರು ವ್ಯಾಪಾರ ಮಾಡುತ್ತಾನಾ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಈ ವಿಡಿಯೋ 3.96 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಒಂದೂವರೆ ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ದಿನಕ್ಕೆ 2 ಸಾವಿರ ಎಳನೀರು ಮಾರಾಟ ಅಸಾಧ್ಯ. ಆ ವ್ಯಕ್ತಿ ತಿಂಗಳಿಗೆ 2 ಸಾವಿರ ಎಳನೀರು ಮಾರಾಟ ಮಾಡುತ್ತಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Disclaimer:ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: Business Idea: ಮನೆಯಲ್ಲೇ ಕುಳಿತು ಹಳೆ ಬಟ್ಟೆಯಿಂದ ಹಣ ಮಾಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!