ಗುಡ್ ನ್ಯೂಸ್, ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಾಗಿದೆ ದರ?

Published : May 01, 2025, 09:47 AM ISTUpdated : May 01, 2025, 10:04 AM IST
ಗುಡ್ ನ್ಯೂಸ್, ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಾಗಿದೆ ದರ?

ಸಾರಾಂಶ

ಮೇ ೧ರಿಂದ ೧೯ ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ೧೭ ರೂ. ಇಳಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಇದು ಅನುಕೂಲ. ಆದರೆ, ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಏಪ್ರಿಲ್‌ನಲ್ಲಿ ೫೦ ರೂ. ಏರಿಕೆಯಾಗಿತ್ತು. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ೧,೮೬೮.೫೦ ರೂ., ಬೆಂಗಳೂರಿನಲ್ಲಿ ೧,೮೨೦.೫೦ ರೂ. ಇದೆ.

ನವದೆಹಲಿ(ಮೇ.01) ರಷ್ಯಾ ಉಕ್ರೇನ್ ಯುದ್ಧ, ಮತ್ತೊಂದೆ ಇಸ್ರೇಲ್ ಸಾರಿದ ಹಮಾಸ್ ವಿರುದ್ದ ದಾಳಿ, ಇದೀಗ ಭಾರತದಿಂದ ಪೆಹಲ್ಗಾಂ ಉಗ್ರರ ವಿರುದ್ದ ಪ್ರತೀಕಾರದ ತಯಾರಿ ನಡೆಯುತ್ತಿದೆ. ಹೀಗಾಗಿ ಹಲವು ವಸ್ತುಗಳ ಪೂರೈಕೆ ನಿಂತಿದೆ. ಇದು ಬೆಲೆ ಏರಿಕೆಗೆ ಕಾರಣಾಗಿದೆ. ಆದರೆ ಈ ಬೆಳವಣಿಗೆ ನಡುವೆ ಗುಡ್ ನ್ಯೂಸ್ ಹೊರಬಿದ್ದಿದೆ. ಇಂದಿನಿಂದ ಅಡುಗೆ ಅನಿಲ(ಎಲ್‌ಪಿಜಿ ಸಿಲಿಂಡರ್) ಬೆಲೆ ಇಳಿಕೆಯಾಗಿದೆ. ಮೇ.1 ರಿಂದ ಹಲವು ದರಗಳು ಪರಿಷ್ಕರಣೆಯಾಗಿದೆ. ಈ ಪೈಕಿ ಆಯಿಲ್ ಮಾರ್ಕೆಂಟಿಂಗ್ ಕಂಪನಿ ಎಲ್‌ಪಿಜಿ ದರ ಇಳಿಕೆ ಮಾಡಿದೆ. ಮೇ. 1ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.

ಎಲ್‌ಪಿಡಿ ಸಿಲಿಂಡರ್ ಇಂದಿನಿಂದ ಅಗ್ಗ
ಆಯಿಲ್ ಮಾರ್ಕೆಂಟಿಂಗ್ ಕಂಪನಿ ಮೇ.1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 17 ರೂಪಾಯಿ ಇಳಿಕೆಯಾಗಿದೆ. ಈ ದರ ಪರಿಷ್ಕರಣೆ ಹೊಟೆಲ್, ರೆಸ್ಟೋರೆಂಟ್ ಸೇರಿದಂತೆ ಇತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವವರಿಗೆ ನೆರವಾಗಲಿದೆ. ಇದರ ನೇರ ಫಲ ಗ್ರಾಹಕರಿಗೆ ಸಿಗಲಿದೆ.  ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಾಡಿರುವ ಇಳಿಕೆಗೆ ವಾಣಿಜ್ಯೋದ್ಯಮಗಳು ಸಂತಸ ವ್ಯಕ್ತಪಡಿಸಿದೆ.

ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ: ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ

ಗೃಹ ಬಳಕೆ ಅಡುಗೆ ಅನಿಲದ ಬೆಲೆ ಎಷ್ಟು?
ವಾಣಿಜ್ಯ ಎಲ್‌ಪಿಡಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಕತೆ ಏನು ಅನ್ನೋದು ಹಲವರ ಪ್ರಶ್ನೆ. ಆದರೆ ಗೃಹ ಬಳಕೆ ಅಡುಗೆ ಅನಿಲ ದರದಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. ಎಂದಿನಂತೆ ಇರಲಿದೆ. ಮೇ1 ರಿಂದ ಹಲವು ದರಗಳು ಪರಿಷ್ಕರಣೆಯಾದರೂ ಗೃಹ ಬಳಕೆಯ ಅಡುಗೆ ಅನಿಲದ ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಗೃಹ ಬಳಕೆ ಅಡುಗೆ ಅನಿಲ ದರ ಸ್ಥಿರವಾಗಿದೆ.  ಕಳೆದ ತಿಂಗಳು ಅಂದರೆ ಏಪ್ರಿಲ್ ಆರಂಭದಲ್ಲಿ ವಿತರಣೆ ಕಂಪನಿಗಳು ಡೋಮೆಸ್ಟಿಕ್ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಿತ್ತು. ಇದು ಜನಸಾಮಾನ್ಯರಿಗೆ ತೀವ್ರ ಹೊರೆಯಾಗಿತ್ತು. ಎಪ್ರಿಲ್ 8 ರಿಂದ ಈ ದರ ಜಾರಿಗೆ ಬಂದಿತ್ತ.ಉಜ್ವಲ ಹಾಗೂ ಜನರಲ್ ವಿಭಾಗದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಇದರಿಂದ 14.2 ರೆಜಿ ಎಲ್‌ಪಿಜಿ ಜನರಲ್ ಸಿಲಿಂಡರ್ ಬೆಲೆ 803 ರೂಪಾಯಿಯಿಂದ ನೇರವಾಗಿ 853 ರೂಪಾಯಿಗೆ ಏರಿಕೆಯಾಗಿತ್ತು. ಇನ್ನು ಉಜ್ವಲ ಫಲಾನುಭವಿಗಳ ಎಲ್‌ಪಿಜಿ ಸಿಲಿಂಡರ್ ಬೆಲೆ 503 ರಿಂದ 553 ರೂಪಾಯಿಗೆ ಏರಿಕೆಯಾಗಿತ್ತು.  

ವಾಣಿಜ್ಯ ಅಡುಗೆ ಅನಿಲ ದರ ಸತತ ಇಳಿಕೆ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸತತವಾಗಿ ಇಳಿಕೆ ಮಾಡಲಾಗಿದೆ. ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 6 ರೂಪಾಯಿ ಇಳಿಕೆ ಮಾಡಲಾಗಿತ್ತು. ಇನ್ನು ಎಪ್ರಿಲ್ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 41 ರೂಪಾಯಿ ಇಳಿಕೆ ಮಾಡಲಾಗಿತ್ತು. ಇದೀಗ ಮೇ ತಿಂಗಳ ಆರಂಭದಲ್ಲೇ 17 ರೂಪಾಯಿ ಇಳಿಕೆ ಮಾಡಲಾಗಿದೆ.

ಸದ್ಯ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 1,868.50 ರೂಪಾಯಿ ಆಗಿದ್ದರೆ, ಮುಂಬೈನಲ್ಲಿ 1713.50 ರೂಪಾಯಿ ಹಾಗೂ ಚೆನ್ನೈನಲ್ಲಿ 1,921.50 ಆಗಿದೆ. ಇನ್ನು ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,820.50 ರೂಪಾಯಿ ಆಗಿದೆ.  ಕೋಲ್ಕತಾದಲ್ಲಿ ಇದೇ ಸಿಲಿಂಡರ್ ಬೆಲೆ 1851.50 ರೂಪಾಯಿ ಆಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

LPG ಬೆಲೆ ಏರಿಕೆಗೆ ಕೈ ಪ್ರತಿಭಟನೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ