ಕೊರೋನಾ ಕಲಿಸಿದ ಪಾಠ ಒಂದೆರಡಲ್ಲ. ದುಡಿಯೋಕೆ ಹಲವರಿಗೆ ದಾರಿ ಹುಡುಕಿಕೊಟ್ಟಿದ ಈ ಕಷ್ಟಕಾಲ. ಆ ಸಂದರ್ಭದಲ್ಲಿ ಇನ್ನೇನು ಬದುಕು ಹೇಗೆ ಎಂದು ಯೋಚಿಸುತ್ತಿರುವಾಗಲೇ ಸ್ಟಾರ್ಟ್ ಅಪ್ ಹುಟ್ಟಿಕೊಂಡು, ಯಶಸ್ವಿಯಾಗಿವೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಅಂದು ತನ್ನ ದಿಟ್ಟ ಹೋರಾಟದ ಮೂಲಕ ಸ್ವಾತಂತ್ರ್ಯ ಬೆಳ್ಳಿಚುಕ್ಕಿಯಾಗಿ ಮಿನುಗಿದ ಝಾನ್ಸಿರಾಣಿ ಲಕ್ಷ್ಮಿಬಾಯಿ ನಮಗೆಲ್ಲ ಗೊತ್ತು. ಆದರೆ ಇಲ್ಲೊಬ್ಬ ಝಾನ್ಸಿರಾಣಿ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕಿನ ಸಾರ್ಥಕತೆ ಮೆರೆಯುವ ಜತೆಗೆ ಸಾವಿರಾರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಆ ಮಹಿಳೆ ಮಾಡುವ ಕೆಲಸವನ್ನು ಕಂಡರೆ ನೀವು ಅಚ್ಚರಿ ಪಡುತ್ತಿರಿ!
undefined
ಸ್ವಾವಲಂಬಿ ಮಹಳೆಯಾಗಿ ಸಾವಿರಾರು ಮಹಿಳೆಯರಿಗೆ ಮಾದರಿಯಾದ ಝಾನ್ಸಿ ಹೂಗಾರ(Jhansi hugar) ಮೂಲತಃ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮ(Uppina betageri village)ದ ನಿವಾಸಿಗಳು ಅವರು ಮೊದ ಮೊದಲು ಈ ಉದ್ಯೂಗ ಆರಂಭಿಸುವ ಮೊದಲು ಬೇರೆ ಖಾಸಗಿ ಕೆಲಸ ಮಾಡಿಕ್ಕೊಂಡು, ಅವರು ಕೊಡೋ ಸ್ವಲ್ಪ ವೇತನದಲ್ಲಿ ಜೀವನವನ್ನ ನಡೆಸುತ್ತಿದ್ದರು. ಆದರೆ ಇವರು ಸದ್ಯ ಇದೀಗ ತಮ್ಮ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗಾಣದ ಎಣ್ಣೆ ಉದ್ಯಮ ಸ್ಥಾಪಿಸಿ, ಸ್ವಾವಲಂಬಿ ಜೀವನ ನಡೆಸುತ್ತಿರುವ ಝಾನ್ಸಿಲಕ್ಷ್ಮೀ ಸದ್ಯ ಸಾವಿರಾರು ಮಹಿಳೆಯರಿಗೆ ಮಾದರಿಯಾಗಿ ಬದುಕನ್ನು ಮುನ್ನಡಸಿಕೊಂಡು ಹೋಗುತ್ತಿದ್ದಾರೆ.
ರೊಟ್ಟಿ ತಟ್ಟೋದೇ ತಲೆ ನೋವಾಗಿರುವವರಿಗೆ ಸಹಾಯ 'ಜ್ಯೋತಿ'!
ಕೋವಿಡ್ ನಂತರ ಅದೆಷ್ಡೋ ಮಂದಿ ಕೆಲಸ ಕಳೆದುಕೊಂಡು, ಹಳ್ಖಿಗಳತ್ತ ಮುಖ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಸದ್ಯ ಈ ಮಹಿಳೆ ಕೋಲ್ಡ್ ಪ್ರೆಸ್ಡ್ ಆಯಿಲ್ ಉತ್ಪಾದಿಸಿ, ಜನರಲ್ಲಿ ಆರೋಗ್ಯದ ಅರಿವು ಮೂಡಿಸಿ, ಶುದ್ಧ ಗಾಣದೆಣ್ಣೆ ನೀಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣದತ್ತ ಪುಟ್ಟ ಹೆಜ್ಜೆ ಇರಿಸಿದ್ದು, ಅಮೃತ್ ಪ್ರೂಡ್ ಪ್ರೋಡಕ್ಟ್ಸ್ ಎಂಬ ಹೆಸರಿನಲ್ಲಿ ಹಳ್ಳಿಯಲ್ಲಿ ಪುಟ್ಟ ಉದ್ಯಮ ಸ್ಥಾಪಿಸಿದ್ದಾರೆ.
ಇನ್ನು ಕುಸಬಿ, ಶೇಂಗಾ ಸೇರಿ ಎಣ್ಣೆ ಕಾಳನ್ನು ಸ್ಥಳೀಯ ರೈತರಿಂದ ಖರೀದಿಸಿ, ಹಲವು ಬಗೆಯ ಖಾದ್ಯ ತೈಲಗಳನ್ನು ತಯಾರಿಸುತ್ತಿರುವ ಝಾನ್ಸಿಲಕ್ಷ್ಮೀ ನಾನೂ ಬೆಳೆಯಬೇಕು, ನನ್ನೊಟ್ಟಿಗೆ ಇತರರೂ ಬೆಳೆಯಬೇಕು ಎಂದು ನಂಬಿದೋರು. ಕೆಲವು ಮಹಿಳೆಯರಿಗೆ ಉದ್ಯೋಗದ ಅಭಯವನ್ನೂ ನೀಡಿದ್ದಾರೆ. 2025ರ ಹೊತ್ತಿಗೆ ಸುಮಾರು 10 ಮಹಿಳೆಯರನ್ನು ತನ್ನೊಟ್ಟಿಗೆ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿರುವ ಝಾನ್ಸಿ, ಸದ್ಯ ಪ್ರತಿ ತಿಂಗಳೂ 1 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುತ್ತಾರೆ. ಮಾಸಿಕ 30 ಸಾವಿರ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಉತ್ಪನ್ನಗಳ ಜತೆ ಇತರ ಮಹಿಳೆಯರೂ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮೂಲಕ ಅವರಿಗೂ ಆಸರೆಯ ಅಕ್ಕ ಆಗಿದ್ದಾಳೆ. ಅಡುಗೆಗೆ ಬಳಸುವ ಶುದ್ದ ಎಣ್ಣೆ ಗಾಣವನ್ನಿಟ್ಟಿಕ್ಕೊಂಡು ಗಾಂದ ಎಣ್ಣಿ, ಕುಸುಬಿ ಎಣ್ಣಿ, ಶೇಂಗಾ ಎಣ್ಣಿ, ಎಳ್ಳೆಣ್ಣಿ,ಕೊಬ್ಬರಿ ಎಣ್ಣಿ, ಶುದ್ದವಾದ ಎಣ್ಣೆ ತಾಯಾರಿಸಿ, ಮಾರುತ್ತಾರೆ. ಯಾವುದೇ ಕಲ ಬೆರಕೆ ಮಾಡದೇ ಎಣ್ಣೆ ಮಾರುತ್ತಿರುವ ಮಹಿಳೆಯ ನೋಡಿ, ಅಕ್ಕಪಕ್ಕದವರು ಹುಬ್ಬೆರಿಸುತ್ತಿದ್ದಾರೆ. ಮಹಿಳೆಯ ಮಾದರಿ ಕೆಲಸಕ್ಕೆ ಪತಿ ಸಾಥ್ ಕೊಟ್ಡಿದ್ದಾರೆ. ಝಾನ್ಸಿ ಹೂಗಾರ ಇವಳು ಇನ್ನಿಬ್ಬರನ ಮಹಿಳೆಯರನ್ನಿಟ್ಡುಕ್ಕೊಂಡು, ಗಾಣದ ಶಾಲ್ ಆರಂಭ ಮಾಡಿ ಪ್ರತಿ ದಿನ 5 ಸಾವಿರ ಆದಾಯ ಗಳಿಸುತ್ತಿದ್ದಾರೆ.
ಗಂಡನಿಂದ ದೂರವಾಗಿ ತನ್ನದೇ ಕಂಪನಿ ಸ್ಥಾಪಿಸಿ, ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು ಮಹಿಳೆ
ಇನ್ನು ಇವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಲ ಸೌಲಭ್ಯಗಳು ಅದು ಸಬ್ಸಿಡಿ ದರದಲ್ಲಿ ಸಿಗುತ್ತದೆ. ಆದರೆ ಸರಕಾರದಿಂದ ವಿವಿಧ ಸೌಲಭ್ಯಗಳಿದ್ದರೆ ಅವುಗಳನ್ನ ಬೇರೆ ಯಾವ ಯಾವದೋ ಕೆಲಸಕ್ಕೆ ಬಳಸಿಕ್ಕೊಂಡು ಹಾಳಾದವರೇ ಹೆಚ್ಚು. ಅಂತದರಲ್ಲಿ ಈ ಮಹಿಳೆ ಒಂಟಿಯಾಗಿ, ಗ್ರಾಮದಲ್ಲಿ ಒಬ್ಬಳೇ ಈ ಕಿರು ಉದ್ಯಮ ಸ್ಥಾಪಿಸಿ, ತಮ್ಮ ಜೊತೆಗೆ ಮತ್ತಿಬ್ಬರು ಮಹಿಳೆಯರಿಗೆ ಕೆಲಸ ಕೊಟ್ಟು ಸ್ವಾವಲಂಬಿಯಾಗಿರುವುದು ಎಲ್ಲರಿಗೂ ಮಾದರಿ.