10 ಸಂಸ್ಥೆಗಳ ಮೇಲೆ 50ಲಕ್ಷ ರೂ.ದಂಡ ವಿಧಿಸಿದ ಸೆಬಿ;ಯಾವ ಕಾರಣಕ್ಕೆ?ಇಲ್ಲಿದೆ ಮಾಹಿತಿ

By Suvarna NewsFirst Published May 18, 2023, 6:13 PM IST
Highlights

ಅಕ್ರಮ ಟ್ರೇಡಿಂಗ್ ವ್ಯವಹಾರಗಳಿಗೆ ಕಡಿವಾಣ ಹಾಕಲು 10 ಸಂಸ್ಥೆಗಳ ಮೇಲೆ ಸೆಬಿ ಒಟ್ಟು 50ಲಕ್ಷ ರೂ. ದಂಡ ವಿಧಿಸಿದೆ. ಪ್ರತಿ ಸಂಸ್ಥೆ ಮೇಲೆ ತಲಾ 5ಲಕ್ಷ ರೂ. ದಂಡ ವಿಧಿಸಿದೆ. ಇದು ಇತರ ಸಂಸ್ಥೆಗಳಿಗೆ ಸೆಬಿ ನೀಡುತ್ತಿರುವ ಎಚ್ಚರಿಕೆಯೂ ಆಗಿದೆ.

ಮುಂಬೈ (ಮೇ18): ಅಕ್ರಮ ಟ್ರೇಡಿಂಗ್ ವ್ಯವಹಾರಗಳಿಗೆ ಕಡಿವಾಣ ಹಾಕಲು ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 10 ಸಂಸ್ಥೆಗಳ ಮೇಲೆ ಒಟ್ಟು 50ಲಕ್ಷ ರೂ. ದಂಡ ವಿಧಿಸಿದೆ. ಈ ಸಂಬಂಧ ಸೆಬಿ 10 ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದು,ಪ್ರತಿ ಸಂಸ್ಥೆ ಮೇಲೆ ತಲಾ 5ಲಕ್ಷ ರೂ.ನಂತೆ ಒಟ್ಟು 50ಲಕ್ಷ ರೂ. ದಂಡ ವಿಧಿಸಿದೆ. ಒರೋಫ್ಲಸ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಬಾಬಾ ಐರನ್ ಇಂಡಸ್ಟ್ರೀಸ್, ಅಟ್ಲಾಂಟಿಕ್ ಇನ್ವೆಸ್ಟ್ ಅಡ್ವೈಸರಿ, ಅವಿನಾಶ್ ವಿ ಮೆಹ್ತಾ ಎಚ್ ಯುಎಲ್, ನವನೀತ್ ಅಗರ್ವಾಲ್ ಮತ್ತು ಸನ್ಸ್ ಎಚ್ ಯುಎಫ್, ನೀರಜ್ಗಾಂಧಿ ಎಚ್ ಯುಎಫ್, ಅಥ್ವಾನಿ ಶ್ರೀಚಂದ್, ಅವಿರಲ್ ಗುಪ್ತ, ಆಯುಷಿ ಅಗರ್ವಾಲ್ ಹಾಗೂ ಸಲೋನಿ ರುಯಾ. ಸಂಸ್ಥೆಗಳ ಮೇಲೆ ಸೆಬಿ ದಂಡ ವಿಧಿಸಿದೆ. ಈ ಸಂಸ್ಥೆಗಳ ವ್ಯಾಪಾರ ವಹಿವಾಟುಗಳ ಕುರಿತು ತನಿಖೆ ನಡೆಸಿದ ಬಳಿಕ ಸೆಬಿ ದಂಡ ವಿಧಿಸುವ ತೀರ್ಮಾನ ಕೈಗೊಂಡಿದೆ. ಅದರಲ್ಲೂ ಮುಖ್ಯವಾಗಿ 2014ರ ಏಪ್ರಿಲ್ ನಿಂದ 2015ರ ಸೆಪ್ಟೆಂಬರ್ ನಡುವಿನ ಅವಧಿಯ ವ್ಯವಹಾರಗಳ ತನಿಖೆ ನಡೆಸಿದೆ. ಬಿಎಸ್ ಇಯಲ್ಲಿ ಇಲಿಕ್ವಿಡ್ ಸ್ಟಾಕ್ ಆಯ್ಕೆಗಳ ವಿಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಿವರ್ಸಲ್ ಟ್ರೇಡ್ ಗಳು ನಡೆದಿರೋದನ್ನು ನಿಯಂತ್ರಕರು ಪತ್ತೆ ಹಚ್ಚಿದ್ದಾರೆ.

ಮೋಸ ಹಾಗೂ ಅನ್ಯಾಯದ ವಹಿವಾಟು ಅಭ್ಯಾಸಗಳ ನಿರ್ಮೂಲನೆ (PFUTP) ನಿಯಮಗಳನ್ನು ಈ ಸಂಸ್ಥೆಗಳು ಉಲ್ಲಂಘನೆ ಮಾಡಿವೆ ಎಂದು ಸೆಬಿ ತನ್ನ ಆದೇಶದಲ್ಲಿ ತಿಳಿಸಿದೆ. ಸೆಬಿ ಪ್ರಕಾರ ರಿವರ್ಸಲ್ ಟ್ರೇಡ್ಸ್ ನಡೆಸೋದು ನೈಜ್ಯವಲ್ಲದ ಹಾಗೂ ಮೋಸದ ಟ್ರೇಡಿಂಗ್ ಅಭ್ಯಾಸವಾಗಿದೆ. ಈ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಸೆಬಿ ಹತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸಿದೆ.

PAN Card Misuse: ಚೆಕ್ ಮಾಡೋದು ಹೇಗೆ? ತಡೆಗೆ ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಅಲೈಡ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಣಕಾಸು ಸೇವೆಗಳ ನೋಂದಣಿ ಪ್ರಮಾಣಪತ್ರವನ್ನು ಸೆಬಿ ರದ್ದುಗೊಳಿಸಿದೆ. ಕಂಪನಿಯ ನಿಯಂತ್ರಕ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ನೋಂದಣಿ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿತ್ತು. ಅಲೈಡ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ನೋಂದಾಯಿತ ಸದಸ್ಯರಾಗಿದ್ದಾರೆ. ಈ ಹಿಂದೆ ಕೂಡ ಸೆಬಿ ಅನೇಕ ಸಂಸ್ಥೆಗಳಿಗೆ ದಂಡ ವಿಧಿಸಿದೆ.

ಸುಸ್ತಿದಾರರ ಮಾಹಿತಿ ನೀಡಿದ್ರೆ 20ಲಕ್ಷ ರೂ. ಬಹುಮಾನ
ಸುಸ್ತಿದಾರರ (ಸಾಲ ತೀರಿಸದವರು) ಬಗ್ಗೆ ಸಮರ್ಪಕ ಮಾಹಿತಿ ನೀಡುವ ಸಾರ್ವಜನಿಕರಿಗೆ ಭಾರತೀಯ ಮಾರುಕಟ್ಟೆಗಳ ನಿಯಂತ್ರಕ ಸೆಬಿ 20ಲಕ್ಷ ರೂ. ಬಹುಮಾನ ನೀಡುವುದಾಗಿ ಈ ವರ್ಷದ ಮಾರ್ಚ್ ನಲ್ಲಿ ಘೋಷಿಸಿದೆ. ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಈ ಹೊಸ ಯೋಜನೆ ಅನ್ವಯ ಸುಸ್ತಿದಾರರ ಸಾಲದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮಾಹಿತಿದಾರರಿಗೆ 20ಲಕ್ಷ ರೂ. ತನಕ ಬಹುಮಾನ ನೀಡಲಾಗತ್ತದೆ. ಇದಕ್ಕೆ ಸಂಬಂಧಿಸಿದಂತೆ ಸೆಬಿ 515 ಸುಸ್ತಿದಾರರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಸುಸ್ತಿದಾರರ ಬಗ್ಗೆ ಸಾರ್ವಜನಿಕರು ತಮಗೆ ತಿಳಿದಿದ್ದರೆ ಸೆಬಿಗೆ ಮಾಹಿತಿ ನೀಡಬಹುದು. ಬಹುಮಾನದ ಮೊತ್ತವನ್ನು ಹೂಡಿಕೆದಾರರ ರಕ್ಷಣೆ ಮತ್ತು ಶಿಕ್ಷಣ ನಿಧಿಯಿಂದ ಪಾವತಿಸಲಾಗುವುದು ಎಂದು ಸೆಬಿ ತಿಳಿಸಿದೆ.

Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ

ಇನ್ನು ಮಾಹಿತಿದಾರರಿಗೆ ಸೆಬಿ ಎರಡು ಹಂತಗಳಲ್ಲಿ ಬಹುಮಾನದ ಹಣವನ್ನು ಹಂಚಲಿದೆ. ಮಾಹಿತಿ ಹಂಚಿಕೊಂಡಾಗ ಮಾಹಿತಿದಾರರಿಗೆ ಮಧ್ಯಂತರ ಬಹುಮಾನದ ಮೊತ್ತವನ್ನು ನೀಡಲಾಗುವುದು. ಈ ಮೊತ್ತವು ಯಾವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದರ ಆಧಾರದಲ್ಲಿ ಸುಸ್ತಿದಾರರ ಆಸ್ತಿ ಮೌಲ್ಯದ ಶೇ.2.5  ಅಥವಾ 5ಲಕ್ಷ ರೂ. ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟಾಗಿರಲಿದೆ. ಇನ್ನು ಅಂತಿಮ ಬಹುಮಾನದ ಮೊತ್ತ ಸುಸ್ತಿದಾರರ ಆಸ್ತಿಯ ಶೇ.10 ಅಥವಾ 20ಲಕ್ಷ ರೂ. ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟಿರಲಿದೆ. 

click me!