ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಅಂತಿಮ ಗಡುವು ಮತ್ತೆ ಮುಂದೂಡಿಕೆ; ಜೂ.30ರ ತನಕ ಕಾಲಾವಕಾಶ

Published : Dec 28, 2023, 05:50 PM IST
ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಅಂತಿಮ ಗಡುವು ಮತ್ತೆ ಮುಂದೂಡಿಕೆ; ಜೂ.30ರ ತನಕ ಕಾಲಾವಕಾಶ

ಸಾರಾಂಶ

ಡಿಮ್ಯಾಟ್ ಖಾತೆ ಹಾಗೂ ಮ್ಯೂಚುವಲ್ ಫಂಡ್ ಗೆ ನಾಮಿನಿ ಸೇರ್ಪಡೆಗೆ ನೀಡಿದ್ದ ಅಂತಿಮ ಗಡುವನ್ನು ಸೆಬಿ ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ ನೀಡಿದ್ದ ಗಡುವಾದ ಡಿ.31ರಿಂದ ಜೂನ್ 30ರ ತನಕ ವಿಸ್ತರಿಸಲಾಗಿದೆ.    

ನವದೆಹಲಿ (ಡಿ.28): ಡಿಮ್ಯಾಟ್ ಖಾತೆ ಹಾಗೂ ಮ್ಯೂಚುವಲ್ ಫಂಡ್ ಗೆ ನೀವು ಇನ್ನೂ ನಾಮಿನಿ ಹೆಸರಿಸದಿದ್ದರೆ ಚಿಂತೆ ಮಾಡ್ಬೇಡಿ, ಅಂತಿಮ ಗಡುವನ್ನು 2024ರ ಜೂನ್ 30ರ ತನಕ ವಿಸ್ತರಿಸಲಾಗಿದೆ. ಈ ಹಿಂದೆ ಡಿಮ್ಯಾಟ್ ಖಾತೆ ಹಾಗೂ ಮ್ಯೂಚುವಲ್ ಫಂಡ್ ಗೆ ನಾಮಿನಿ ಸೇರ್ಪಡೆಗೆ ಡಿ.31 ಅಂತಿಮ ಗಡುವಾಗಿತ್ತು. ಆದರೆ, ಮಾರುಕಟ್ಟೆ ನಿಯಂತ್ರಕ ಸೆಬಿ ಈ ಗಡುವನ್ನು ಮುಂದಿನ ವರ್ಷದ ಜೂನ್ 30ರ ತನಕ ವಿಸ್ತರಿಸಿದೆ.  ಅಂತಿಮ ಗಡುವಿನೊಳಗೆ ನಾಮಿನಿ ಸೇರ್ಪಡೆ ಮಾಡದಿದ್ರೆ ಡಿಮ್ಯಾಟ್ ಖ್ಯಾತೆಯನ್ನು ನಿಷ್ಕ್ರಿಯಗೊಳಿಸೋದಾಗಿ ಸೆಬಿ ತಿಳಿಸಿತ್ತು.  ಇದಕ್ಕೂ ಮುನ್ನ ನಾಮಿನಿ ಸೇರ್ಪಡೆಗೆ ಸೆ.30 ಅಂತಿಮ ಗಡುವಾಗಿತ್ತು. ಅದಕ್ಕೂ ಹಿಂದೆ ಮಾ.31ರ ಗಡುವು ನೀಡಲಾಗಿತ್ತು. ಸೆಬಿ  ಈ ಗಡುವನ್ನು ಪದೇಪದೆ ವಿಸ್ತರಣೆ ಮಾಡುತ್ತ ಬಂದಿದೆ.  

ಹೂಡಿಕೆದಾರರಿಗೆ ತಮ್ಮ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ನೆರವು ನೀಡಲು ಹಾಗೂ ಅದನ್ನು ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸಲು ನೆರವು ನೀಡುವ ಉದ್ದೇಶದಿಂದ ಡಿಮ್ಯಾಟ್ ಖಾತೆಗಳಿಗೆ ನಾಮಿನಿ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ. 

ಪಿಎಫ್‌ ವಿತ್‌ಡ್ರಾ ವಿಚಾರವಾಗಿ ಬಿಗ್‌ ಅಪ್‌ಡೇಟ್‌ ನೀಡಿದ EPFO!

ಮಾರುಕಟ್ಟೆ ಭಾಗಿದಾರರಿಂದ ಬಂದ ಮನವಿಯನ್ನು ಪರಿಗಣಿಸಿ ಹೂಡಿಕೆದಾರರ ಅನುಕೂಲಕ್ಕಾಗಿ ಡಿಮ್ಯಾಟ್ ಖಾತೆಗಳು ಹಾಗೂ ಮ್ಯೂಚುವಲ್ ಫಂಡ್ ಗಳ ಫೋಲಿಯೋಸ್ 'ಚಾಯ್ಸ್ ಆಫ್ ನಾಮಿನೇಷನ್' ಸಲ್ಲಿಕೆಗೆ ಅಂತಿಮ ಗಡುವನ್ನು 2024ರ ಜೂನ್ 30ರ ತನಕ ವಿಸ್ತರಿಸಲಾಗಿದೆ ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ. 

2021ರ ಜುಲೈನಲ್ಲಿ ಸೆಬಿ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಸೇರ್ಪಡೆಗೆ ಆಯ್ಕೆ ನೀಡಿತ್ತು. ಈಗಾಗಲೇ ಇರುವ ಹೂಡಿಕೆದಾರರು 2021ರ ಜುಲೈನಲ್ಲಿ ಸುತ್ತೋಲೆ ಹೊರಡಿಸುವ ಮುನ್ನ ನಾಮಿನಿ ಮಾಹಿತಿಗಳನ್ನು ನೀಡಿದ್ರೆ ಅವರು ಅದನ್ನು ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ಸೆಬಿ ತಿಳಿಸಿತ್ತು. ಈಗಾಗಲೇ ಇರುವ ಹೂಡಿಕೆದಾರರು ಈ ಹಿಂದೆ ನಾಮಿನಿ ಮಾಹಿತಿ ನೀಡಿದ್ದರೆ ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ.ನಾಮಿನಿ ಸೇರಿಸದ ಹೂಡಿಕೆದಾರರು ತನ್ನ ನಾಮಿನಿ ಸಲ್ಲಿಕೆ ಮಾಡಬಹುದು ಅಥವಾ ಸ್ಟಾಕ್ ಬ್ರೋಕರ್ಸ್ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ನಲ್ಲಿ  2-ಫ್ಯಾಕ್ಟರ್ ದೃಢೀಕರಣ ಮೂಲಕ ನಾಮಿನಿ ಸಲ್ಲಿಕೆ ಮಾಡಬಹುದು. ಇಲ್ಲವೆ ಇಂಥ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಕೂಡ ನಾಮಿನಿ ಸಲ್ಲಿಕೆ ಮಾಡಲು ಅವಕಾಶವಿದೆ. 

ITRನಲ್ಲಿ ಸಮರ್ಪಕ ಮಾಹಿತಿ ದಾಖಲಿಸದ ತೆರಿಗೆದಾರರು ತಕ್ಷಣ ಪ್ರತಿಕ್ರಿಯಿಸಿ: ಐಟಿ ಇಲಾಖೆ ಮನವಿ

ಹೊಸ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳನ್ನು ತೆರೆಯುತ್ತಿರುವ ಹೂಡಿಕೆದಾರರು ಕಡ್ಡಾಯವಾಗಿ ನಾಮಿನಿ ಮಾಹಿತಿ ನೀಡಬೇಕು. ಘೋಷಣೆ ಅರ್ಜಿ ಮೂಲಕ ನಾಮಿನಿ ಮಾಹಿತಿ ನೀಡಬಹುದು ಎಂದು ಸೆಬಿ ತಿಳಿಸಿತ್ತು. ನಾಮಿನಿ ಅಥವಾ ಅಪ್ರಾಪ್ತ ವಯಸ್ಸಿನ ನಾಮಿನಿಯ ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ಗುರುತಿನ ಮಾಹಿತಿಗಳನ್ನು ನೀಡುವುದು ಅವರ ಆಯ್ಕೆಗೆ ಬಿಟ್ಟಿದ್ದು ಎಂದು ಸೆಬಿ ಹೇಳಿತ್ತು.

ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಹೇಗೆ?
ಹಂತ: 1: ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಆಗಿ
ಹಂತ 2:ಪ್ರೊಫೈಲ್ ವರ್ಗದಲ್ಲಿ 'My nominees'ಆಯ್ಕೆ ಮಾಡಿ. ಈಗ ನಾಮಿನಿ ಮಾಹಿತಿ ಪುಟ ತೆರೆದುಕೊಳ್ಳುತ್ತದೆ.
ಹಂತ 3: Ig 'add nominee' ಅಥವಾ 'opt-out'ಆಯ್ಕೆ ಮಾಡಿ.
ಹಂತ 4: ನಾಮಿನಿ ಮಾಹಿತಿ ಭರ್ತಿ ಮಾಡಿ ಹಾಗೂ ನಾಮಿನಿ ಐಡಿ ಪ್ರೂಫ್ ಅಪ್ಲೋಡ್ ಮಾಡಿ. ಆ ಬಳಿಕ ನಾಮಿನಿಗೆ ನೀವು ನೀಡಬಯಸುವ ಷೇರಿನ ಪ್ರಮಾಣವನ್ನು 'percentage' ಫೀಲ್ಡ್ ನಲ್ಲಿ ನಮೂದಿಸಿ.
ಹಂತ 5: ಆಧಾರ್ ಒಟಿಪಿ  (OTP) ಬಳಸಿಕೊಂಡು ದಾಖಲೆಗೆ ಇ-ಸಹಿ ಮಾಡಿ.
ಹಂತ 6: ನಾಮಿನಿ ಮಾಹಿತಿಯನ್ನು ಪರಿಶೀಲಿಸಿ ಡಿಮ್ಯಾಟ್ ಖಾತೆಗೆ 24-48 ಗಂಟೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?