ಎಸ್ ಬಿಐ ಗ್ರಾಹಕರಿಗೆ ಶಾಕ್, ಇಂದಿನಿಂದಲೇ ಬಡ್ಡಿ ದರ ಕಡಿತದ ಹೊಸ ಲೆಕ್ಕಾಚಾರ

By Web DeskFirst Published May 1, 2019, 7:37 PM IST
Highlights

ಸದ್ದಿಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.  ಒಂದು ಲಕ್ಷಕ್ಕಿಂತ ಜಾಸ್ತಿ ಠೇವಣಿ ಹೊಂದಿರುವವರಿಗೆ ಕೊಂಚ ನಷ್ಟವಾಗಬಹುದು.

ನವದೆಹಲಿ[ಮಾ. 01] ಸದ್ದಿಲ್ಲದೆ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಣ್ಣ  ಆಘಾತ ನೀಡಿದೆ. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ 1 ಲಕ್ಷ ರು ಗೂ ಅಧಿಕ ಮೊತ್ತದ ಠೇವಣಿ ಇಟ್ಟವರಿಗೆ ಇಂದಿನಿಂದ ಕಡಿಮೆ ಬಡ್ಡಿ ದರ ನೀಡಲಿದೆ.

ಈ ಹಿಂದಿಗಿಂತ ಕಡಿಮೆ ಮೊತ್ತದ ಬಡ್ಡಿ ಇದಾಗಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿದರ 0.25 ರಿಂದ 0.75 ರಷ್ಟು ಇಳಿಕೆಯಾಗಲಿದೆ.ಹೀಗಾಗಿ, ಶೇ 3.5 ಬದಲಿಗೆ ಶೇ 3.25ರಷ್ಟು ಬಡ್ಡಿ ಲಭ್ಯವಾಗಲಿದೆ.

ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಈ ಚಿಪ್ ಇಲ್ಲಾಂದ್ರೆ ಅಷ್ಟೇ ಗತಿ!

ಎಂಎಲ್‌ಸಿಆರ್‌ನೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಸಾಲಗಳ ಮೇಲಿನ ಬಡ್ಡಿ ದರವನ್ನು ಏಪ್ರಿಲ್​ 10, 2019ರಿಂದ 5 ಬೇಸಿಸ್‌ ಪಾಯಿಂಟ್‌ನಷ್ಟು ಎಸ್ಬಿಐ ಇಳಿಕೆ ಮಾಡಿತ್ತು. ಇದರಿಂದಾಗಿ 30 ಲಕ್ಷ ರು ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆಯಾಗಿತ್ತು. ಈ ಸಾಲದ ಮೇಲಿನ ಬಡ್ಡಿ ದರ ಶೇ 8.6ರಿಂದ ಶೇ 8.9ರಷ್ಟಾಗಲಿದೆ.

click me!