
ಮುಂಬೈ: ದೇಶಭಕ್ತಿಯ ಪ್ರಮಾಣವನ್ನೂ ಸಮೀಕ್ಷೆ ಮೂಲಕ ಅಳೆಯುವ ಕಾಲ ಬಂದಿದೆ. ಸಮೀಕ್ಷೆಯೊಂದರ ಪ್ರಕಾರ, ಭಾರತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಅತಿಹೆಚ್ಚು ದೇಶಭಕ್ತಿಯ ಬ್ರಾಂಡ್ ಎನ್ನಲಾಗಿದೆ. ನಂತರದ ಸ್ಥಾನಗಳಲ್ಲಿ ಟಾಟಾ ಮೋಟಾರ್, ಪತಂಜಲಿ, ರಿಲಯನ್ಸ್ ಜಿಯೋ, ಬಿಎಸ್‌ಎನ್‌ಎಲ್ ಇವೆ. ಆನ್‌ಲೈನ್ ಮಾರುಕಟ್ಟೆಸಂಶೋಧನೆ ಮತ್ತು ಡಾಟಾ ಅನಾಲಿಟಿಕ್ಸ್ ಸಂಸ್ಥೆ ‘ಯುಗವ್’ ಈ ಸಮೀಕ್ಷೆ ನಡೆಸಿದೆ.
ಸಮೀಕ್ಷೆಯ ಪ್ರಕಾರ, ಶೇ.16ರಷ್ಟುಮಂದಿ ಎಸ್‌ಬಿಐ ಅತಿಹೆಚ್ಚು ದೇಶಭಕ್ತಿಯ ಬ್ರಾಂಡ್ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಟಾಟಾ ಮೋಟಾರ್ಸ್ ಮತ್ತು ಪತಂಜಲಿಗೆ ಶೇ.8 ಮತ್ತು ರಿಲಯನ್ಸ್ ಜಿಯೋ ಮತ್ತು ಬಿಎಸ್‌ಎನ್‌ಎಲ್‌ಗೆ ಶೇ.6 ಮಂದಿ ದೇಶಭಕ್ತಿಯ ಬ್ರಾಂಡ್‌ಗಳೆಂಬ ಅಭಿಪ್ರಾಯ ನೀಡಿದ್ದಾರೆ. 11 ವಿಭಾಗಗಳಲ್ಲಿ 152 ಬ್ರಾಂಡ್‌ಗಳು ಸಮೀಕ್ಷೆಗೊಳಪಟ್ಟಿವೆ.
ಹಣಕಾಸು ವಲಯದಲ್ಲಿ ಎಸ್‌ಬಿಐ ಮತ್ತು ಎಲ್‌ಐಸಿ ಮೊದಲ ಎರಡು ಸ್ಥಾನಗಳಲ್ಲಿವೆ. ಆಹಾರ ವಿಭಾಗದಲ್ಲಿ ಅಮುಲ್‌ಗೆ ಮೂರನೇ ಎರಡರಷ್ಟುಮಂದಿ ದೇಶಭಕ್ತಿ ಬ್ರಾಂಡ್‌ನ ಮೊಹರು ಒತ್ತಿದ್ದು, ಅದು ನಂ.1 ಸ್ಥಾನದಲ್ಲಿದೆ. ಗೃಹ ಬಳಕೆ ವಸ್ತುಗಳಲ್ಲಿ ನಿರ್ಮಾ ಮೊದಲನೇ ಸ್ಥಾನದಲ್ಲಿದ್ದರೆ, ಪಾನೀಯಗಳ ವಿಭಾಗದಲ್ಲಿ ಟಾಟಾ ಟೀ ಮೊದಲನೇ ಸ್ಥಾನದಲ್ಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.