
ನವದೆಹಲಿ(ಆ.12): ಭಾರತ-ಅಮೆರಿಕ ಅಭಿವೃದ್ಧಿ ವಿಷಯದಲ್ಲಿ ನನ್ನ ಹಾಗೂ ಟ್ರಂಪ್ ಅವರ ಗುರಿ ಒಂದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಾಣಿಜ್ಯ ಹಾಗೂ ವೀಸಾ ನೀತಿಗಳಿಗೆ ಸಂಬಂಧಿಸಿದಂತೆ ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಅಸ್ಥಿರತೆ ಉಂಟಾಗಿರುವ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜಾಗತಿಕ ವಣಿಜ್ಯ ಸಮರ, ಅಮೆರಿಕ-ಚೀನಾ ನಡುವಿನ ವೈಮನಸ್ಸು, ಜಾಗತಿಕ ತೈಲ ಬೆಲೆ ಏರಿಕೆ ಮುಂತಾದ ಹಲವು ಅಡೆತಡೆಗಳ ನಡುವೆಯೂ ನಾವಿಬ್ಬರೂ ನಮ್ಮ ರಾಷ್ಟ್ರದ ಹಿತ ಕಾಪಾಡಲು ಬದ್ಧ ಎಂದು ಮೋದಿ ಹೇಳಿದ್ದಾರೆ.
ಜಾಗತಿಕ ವಾಣಿಜ್ಯ ಏರುಪೇರು ಸಹಜ ವಿದ್ಯಮಾನವಾಗಿದ್ದು, ಇದರಿಂದ ಭಾರತ-ಅಮೆರಿಕ ನಡುವಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬುದು ಕೇವಲ ಊಹಾಪೋಹ ಎಂದಿರುವ ಮೋದಿ, ವಾಣಿಜ್ಯದ ಹೊರತಾಗಿಯೂ ಎರಡೂ ರಾಷ್ಟ್ರಗಳ ನಡುವೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಹಕಾರ ಹೊಂದಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ರಾಷ್ಟ್ರದ ಜನತೆಯ ಒಳಿತಿಗಾಗಿ ಅಮೆರಿಕ-ಭಾರತ ಪಾಲುದಾರಿಕೆಯ ಮೂಲಕ ನಾನು ಹಾಗೂ ಟ್ರಂಪ್ ಒಂದೇ ದೃಷ್ಟಿಕೋನ ಹೊಂದಿದ್ದೇವೆ, ನಾನು ಹಾಗೂ ಟ್ರಂಪ್ ಹಲವು ಬಾರಿ ಭೇಟಿ ಮಾಡಿದ್ದೇವೆ, ಹಲವು ಸಂದರ್ಭಗಳಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಭಾರತ-ಅಮೆರಿಕ 2+2 ದ್ವಿಪಕ್ಷೀಯ ಮಾತುಕತೆ ನಡೆಯುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿರುವುದು ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.