ಎಸ್ ಬಿಐ ಗ್ರಾಹಕರು 5ಲಕ್ಷ ರೂ. ಮೀರಿದ ಚೆಕ್ ಗಳ ಕ್ಲಿಯರೆನ್ಸ್ ಗೆ ಪಾಸಿಟಿವ್ ಪೇ ವ್ಯವಸ್ಥೆ ಅನುಸರಿಸೋದು ಕಡ್ಡಾಯ.ಆದ್ರೆ ಈ ಮಾಹಿತಿ ನೀಡಲು ಬ್ಯಾಂಕ್ ಶಾಖೆಗೆ ಭೇಟಿ ನೀಡಲೇಬೇಕಾದ ಅಗತ್ಯವಿಲ್ಲ. ಎಸ್ ಬಿಐ ಯೋನೋ ಆ್ಯಪ್, ನೆಟ್ ಬ್ಯಾಂಕಿಂಗ್ ಮುಖಾಂತರ ಕೂಡ ಸಲ್ಲಿಕೆ ಮಾಡಬಹುದು.ಅದು ಹೇಗೆ? ಇಲ್ಲಿದೆ.ಮಾಹಿತಿ.
Business Desk:ದೊಡ್ಡ ಮೊತ್ತದ ಚೆಕ್ ಗಳ ಕ್ಲಿಯರಿಂಗ್ ಗೆ ಅನೇಕ ಬ್ಯಾಂಕುಗಳು ಈಗಾಗಲೇ ಪಾಸಿಟಿವ್ ಪೇ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಪಾಸಿಟಿವ್ ಪೇ ವ್ಯವಸ್ಥೆಯಲ್ಲಿ ಖಾತೆದಾರರು ಚೆಕ್ ವಿತರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಆಧಾರಿಸಿ ಚೆಕ್ ಗಳನ್ನು ಪಾವತಿಗೆ ಕಳುಹಿಸುವ ಪ್ರಕ್ರಿಯೆಯನ್ನು ಬ್ಯಾಂಕ್ ಮಾಡುತ್ತದೆ. ಅಂದ್ರೆ ಚೆಕ್ ಕ್ಲಿಯರ್ ಆಗಬೇಕೆಂದ್ರೆ ಅದನ್ನು ನೀಡಿರೋ ಕುರಿತು ಕೆಲವು ಮಾಹಿತಿಗಳನ್ನು ಮುಂಚಿತವಾಗಿ ನೀಡಬೇಕು. ಅಂದ್ರೆ ಚೆಕ್ ಸಂಖ್ಯೆ , ಚೆಕ್ ದಿನಾಂಕ, ಪಾವತಿ ಸ್ವೀಕರಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ ಇತ್ಯಾದಿ. ಈ ಮಾಹಿತಿಯನ್ನು ಎಸ್ ಬಿಐ ಗ್ರಾಹಕ ಬ್ಯಾಂಕ್ ಖಾತೆಗೆ ಭೇಟಿ ನೀಡಿಯೇ ಕೊಡಬೇಕೆಂದೇನೂ ಇಲ್ಲ. ಮೊಬೈಲ್ ಬ್ಯಾಂಕಿಂಗ್ (ಯೋನೋಲೈಟ್), ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ (ಆರ್ ಐಎನ್ ಬಿ), ಕಾರ್ಪೋರೇಟ್ ಇಂಟರ್ನೆಟ್ ಬ್ಯಾಂಕಿಂಗ್ (ಸಿಐಎನ್ ಬಿ) ಹಾಗೂ ಯೋನೋ (ಮೊಬೈಲ್ ಅಪ್ಲಿಕೇಷನ್) ಮೂಲಕ ಕೂಡ ನೀಡಬಹುದು. ಈ ಮಾಹಿತಿಗಳೊಂದಿಗೆ ಚೆಕ್ನಲ್ಲಿರೋ ಮಾಹಿತಿಗಳನ್ನು ತಾಳೆ ಹಾಕಿ ನೋಡಿದ ಬಳಿಕವೇ ಬ್ಯಾಂಕ್ ಚೆಕ್ ಕ್ಲಿಯರ್ ಮಾಡುತ್ತದೆ.
'5ಲಕ್ಷ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಉಳಿತಾಯ ಖಾತೆ ಚೆಕ್ ಗಳಿಗೆ ಹಾಗೂ 10 ಲಕ್ಷ ರೂ. ಮತ್ತು ಮೇಲ್ಪಟ್ಟ ಇತರೆ ಎಲ್ಲ ಖಾತೆಗಳ (ಚಾಲ್ತಿ ಖಾತೆ/ಕ್ಯಾಶ್ ಕ್ರೆಡಿಟ್/ಓವರ್ ಡ್ರಾಫ್ಟ್) ಚೆಕ್ ಗಳ ಕ್ಲಿಯರೆನ್ಸ್ ಗೆ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿ ಮಾಡಲು ಯೋಜನೆ ರೂಪಿಸಿದೆ' ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.
ಎಸ್ ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಹೇಗೆ?
ಎಸ್ ಬಿಐ ಪಾಸಿಟಿವ್ ಪೇ ಮಾಹಿತಿಗಳನ್ನು ಗ್ರಾಹಕರು ಎಸ್ ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಈ ಕೆಳಗಿನಂತೆ ಸಲ್ಲಿಕೆ ಮಾಡಬಹುದು.
ಹಂತ1: ಎಸ್ ಬಿಐ ಯೋನೋ ಲೈಟ್ (SBI YONO Lite) ಅಪ್ಲಿಕೇಷನ್ ತೆರೆಯಿರಿ.
ಹಂತ 2: ಈಗ ಲಾಗಿ ಇನ್ ಆಗಿ.
ಹಂತ 3: 'Services'ವಿಭಾಗದ ಮೇಲೆ ಕ್ಲಿಕ್ ಮಾಡಿ ಅದನ್ನು ತೆರೆಯಿರಿ.
ಹಂತ 4: ಆ ಬಳಿಕ 'Positive Pay System' ಮೇಲೆ ಕ್ಲಿಕ್ ಮಾಡಿ.
ಹಂತ 5: 'Cheque Lodgement Details'ಮೇಲೆ ಕ್ಲಿಕ್ ಮಾಡಿ.
ಹಂತ 6: ಈಗ ನಿಮ್ಮ ಖಾತೆ ಸಂಖ್ಯೆ (account number) ಆಯ್ಕೆ ಮಾಡಿ.
ಹಂತ 7: ಚೆಕ ಸಂಖ್ಯೆ, ಚೆಕ್ ನೀಡಿದ ದಿನಾಂಕ, ಮೊತ್ತ ಇತ್ಯಾದಿ ಮಾಹಿತಿ ನಮೂದಿಸಿ.
ಹಂತ 8: ಮಾಹಿತಿಗಳನ್ನು ಸಲ್ಲಿಕೆ ಮಾಡಿ.
ಸರ್ಕಾರದ ಖಜಾನೆ ವ್ಯವಸ್ಥೆಗೆ Karnataka Bank ಸೇರ್ಪಡೆ
ಮೊಬೈಲ್ ಬ್ಯಾಂಕಿಂಗ್ ಮೂಲಕ ಹೇಗೆ?
ಎಸ್ ಬಿಐ ಕ್ವಿಕ್ ಗೆ (SBI Quick) ನೋಂದಣಿಯಾಗಿರುವ ಗ್ರಾಹಕರು ಚೆಕ್ ಸಂಖ್ಯೆ, ಮೊತ್ತ, ಚೆಕ್ ನೀಡಿದ ದಿನಾಂಕ, ಫಲಾನುಭವಿ ಹೆಸರು ಇಷ್ಟು ಮಾಹಿತಿಗಳನ್ನು 917208933145 ಸಂಖ್ಯೆಗೆ ಮೆಸೇಜ್ ಮಾಡಬೇಕು.
ಅಕ್ರಮ ಹಣ ವರ್ಗಾವಣೆ: ಷೇರುಪೇಟೆ ಮಾಜಿ ಮುಖ್ಯಸ್ಥ ರವಿ ನಾರಾಯಣ್ ಸೆರೆ: ಇಂದು ಕೋರ್ಟ್‌ಗೆ ಹಾಜರು
ಆನ್ ಲೈನ್ ನಲ್ಲಿ ಹೀಗೆ ಸಲ್ಲಿಕೆ ಮಾಡಿ
ಹಂತ1: ಎಸ್ ಬಿಐ ನೆಟ್ ಬ್ಯಾಂಕಿಂಗ್ ಗೆ ಲಾಗಿ ಇನ್ ಆಗಿ.
ಹಂತ 2: ಚೆಕ್ ಬುಕ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 3: ಪಾಸಿಟಿವ್ ಪೇ ಸೇವೆಗಳ ಮೇಲೆ ಕ್ಲಿಕಿಸಿ.
ಹಂತ 4: ನಿಮ್ಮ ಖಾತೆ ಸಂಖ್ಯೆ ಆಯ್ಕೆ ಮಾಡಿ.
ಹಂತ 5: ಆ ಬಳಿಕ ಚೆಕ್ ಸಂಖ್ಯೆ, ಮೊfತ, ಇನ್ಸ್ಟ್ರುಮೆಂಟ್ ಟೈಪ್, ಮೊತ್ತ, ಚೆಕ್ ದಿನಾಂಕ ಹಾಗೂ ಯಾರಿಗೆ ಪಾವತಿಸುತ್ತೀರಿ ಅವರ ಹೆಸರು ನಮೂದಿಸಿ.
ಹಂತ 6: ಈಗ ಸಲ್ಲಿಕೆ ಮಾಡಿ.