ಸರ್ಕಾರದ ಖಜಾನೆ ವ್ಯವಸ್ಥೆಗೆ Karnataka Bank ಸೇರ್ಪಡೆ

By Kannadaprabha News  |  First Published Sep 7, 2022, 11:39 AM IST

ಕರ್ಣಾಟಕ ಬ್ಯಾಂಕ್‌ ಈಗ ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಖಜಾನೆ- ಐಐ (ಕೆ 2)ಸರ್ವ ವಿತ್ತೀಯ ವಹಿವಾಟು ನಿರ್ವಹಿಸಬಹುದಾಗಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ(ಸಿಎಸ್‌ಎಸ್‌) ಏಕ ನೋಡಲ್‌ ಏಜೆನ್ಸಿ(ಎಸ್‌ಎನ್‌ಎ)ಖಾತೆಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ.


ಮಂಗಳೂರು (ಸೆ.7) ಕರ್ಣಾಟಕ ಬ್ಯಾಂಕ್‌ ಈಗ ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಖಜಾನೆ- ಐಐ (ಕೆ 2)ಸರ್ವ ವಿತ್ತೀಯ ವಹಿವಾಟು ನಿರ್ವಹಿಸಬಹುದಾಗಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ(ಸಿಎಸ್‌ಎಸ್‌) ಏಕ ನೋಡಲ್‌ ಏಜೆನ್ಸಿ(ಎಸ್‌ಎನ್‌ಎ)ಖಾತೆಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ.

Vehicle finance: ಸುಲಭ ಕಾರು ಸಾಲ, ಕಡಿಮೆ ಕಂತು ಸೌಲಭ್ಯಕ್ಕಾಗಿ ಟೋಯೋಟಾ, ಕರ್ನಾಟಕ ಬ್ಯಾಂಕ್ ಒಪ್ಪಂದ!

Tap to resize

Latest Videos

ಈ ಕುರಿತು ಮಾತನಾಡಿದ ಬ್ಯಾಂಕಿನ ಮೆನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌(Mahabaleshwar M.S), ಭಾರತೀಯ ರಿಸವ್‌ರ್‍ ಬ್ಯಾಂಕ್‌(Reserve Bank of India)ನಿಂದ ನಮ್ಮ ಬ್ಯಾಂಕ್‌ ‘ಏಜೆನ್ಸಿ ಬ್ಯಾಂಕ್‌(Agency Bank)’ ಆಗಿ ನೇಮಕಗೊಂಡ ನಂತರ ಸರ್ಕಾರಿ ಇಲಾಖೆಗಳ ಹಣಕಾಸು ವ್ಯವಹಾರಗಳಲ್ಲಿ ಕರ್ಣಾಟಕ ಬ್ಯಾಂಕ್‌(Karnataka Bank) ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈಗ ಸ್ವಯಂಚಾಲಿತವಾಗಿ ಖಜಾನೆ-ಐಐ(ಕೆ2)ನೊಂದಿಗೆ ಸಂಯೋಜಿತಗೊಂಡಿದೆ.

ಸರ್ಕಾರದ ವಿವಿಧ ಯೋಜನೆಗಳ ಉದ್ದೇಶಿತ ಫಲಾನುಭವಿಗಳಿಗೆ, ಸುರಕ್ಷಿತವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ಪ್ರಯೋಜನಗಳನ್ನು ತರಿಸಲಿದೆ. ಅಲ್ಲದೆ ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಬ್ಯಾಂಕ್‌, ಸರ್ಕಾರದ ಉದ್ದೇಶವನ್ನು ಕ್ಷಿಪ್ರವಾಗಿ ಅನುಷ್ಠಾನಗೊಳಿಸಲಿದೆ. ಬ್ಯಾಂಕ್‌ ತನ್ನ ತಂತ್ರಜ್ಞಾನ ಮತ್ತು ಡಿಜಿಟಲ್‌ ವ್ಯವಹಾರಗಳ ಮೂಲಕ ಸಾರ್ವಜನಿಕ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿಯಾಗಲು ಈ ಪಾಲುದಾರಿಕೆ ತುಂಬಾ ಸಹಕಾರಿಯಾಗಲಿದೆ ಎಂದಿದ್ದಾರೆ.Bank Account; ಕರ್ನಾಟಕ ಬ್ಯಾಂಕ್‌ನಿಂದ 4.15 ಲಕ್ಷ ಖಾತೆ ತೆರೆವ ಅಭಿಯಾನ

 

 

click me!