SBI hikes Interest Rates: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬೇಸ್ ರೇಟ್ ನಲ್ಲೂ ಏರಿಕೆ

By Suvarna News  |  First Published Dec 17, 2021, 2:59 PM IST

* 2 ಕೋಟಿ ರೂಪಾಯಿಗೂ ಮೇಲ್ಪಟ್ಟ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ
*ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಈಗ ಶೇ.7.55 ಆಗಿದೆ
*ಎಸ್ ಬಿಐ ಮೂಲದರದಲ್ಲಿ ( base rate)ಕೂಡ 10 ಮೂಲ ಅಂಕಗಳಷ್ಟು ಏರಿಕೆ


ಭಾರತದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) 2 ಕೋಟಿ ರೂಪಾಯಿಗೂ ಮೇಲ್ಪಟ್ಟ ಸ್ಥಿರ ಠೇವಣಿ (Fixed Deposits) ಮೇಲಿನ ಬಡ್ಡಿದರವನ್ನು (Interest rate) ಇತ್ತೀಚೆಗೆ ಹೆಚ್ಚಳ ಮಾಡಿದೆ. ಇದ್ರಿಂದ ಸ್ಥಿರ ಠೇವಣಿ ಮೇಲಿನ ಹೊಸ ಬಡ್ಡಿ ದರ ಈಗ ಶೇ.7.55 ಆಗಿದೆ,. ಇನ್ನು ಎಸ್ ಬಿಐ ಮೂಲದರವನ್ನು ( base rate) ಕೂಡ 10 ಮೂಲ ಅಂಕಗಳಷ್ಟು (basis points)ಹೆಚ್ಚಿಸಲಾಗಿದೆ.  ಈ ಹೊಸ FD ಬಡ್ಡಿ ದರಗಳು 15 ಡಿಸೆಂಬರ್ 2021 ರಿಂದ ಜಾರಿಗೆ ಬಂದಿವೆ.ಎಸ್ ಬಿಐ (SBI)ತನ್ನ ವೆಬ್ ಸೈಟ್ನಲ್ಲಿ ಈ ಬಗ್ಗೆ ಅಧಿಸೂಚನೆ ಪ್ರಕಟಿಸೋ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.
ಈ ವರ್ಷದ ಪ್ರಾರಂಭದಲ್ಲಿ ಎಸ್ ಬಿಐ ಬೇಸ್ ರೇಟ್ ಅನ್ನು ಶೇ.0.5ರಷ್ಟು ಇಳಿಕೆ ಮಾಡಿತ್ತು. ಹಾಗಾಗಿ ಬಡ್ಡಿ ದರ ಶೇ.7.45ಗೆ ಇಳಿಕೆಯಾಗಿತ್ತು. ಈಗ ಎಸ್‌ಬಿಐನಲ್ಲಿ ಠೇವಣಿ ಮೇಲಿನ ಬಡ್ಡಿ ದರವು ವಾರ್ಷಿಕ ಶೇ.3 ರಿಂದ ಪ್ರಾರಂಭವಾಗುತ್ತಿದೆ. ಹಿರಿಯ ನಾಗರಿಕರಿಗೆ ಇದು ವರ್ಷಕ್ಕೆ ಶೇ.3.50 ರಿಂದ ಪ್ರಾರಂಭವಾಗುತ್ತದೆ.

ಬೇಸ್ ರೇಟ್ ಅಂದ್ರೇನು?
ಬೇಸ್ ರೇಟ್  ಅಂದ್ರೆ ಬ್ಯಾಂಕ್ ಗ್ರಾಹಕರಿಗೆ  ಸಾಲ ನೀಡೋ ಕನಿಷ್ಠ ಬಡ್ಡಿದರ.  ಹೀಗಾಗಿ ಬೇಸ್ ರೇಟ್ ನಲ್ಲಿ ವ್ಯತ್ಯಾಸವಾದ್ರೆ ಬ್ಯಾಂಕಿನಿಂದ ಸಾಲ ಪಡೆದಿರೋರ ಜೇಬಿನ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಫ್ಲೋಟೆಂಗ್ ರೇಟ್ ನಲ್ಲಿ ( Floating rate) ಗೃಹ ಸಾಲ ಪಡೆದಿರೋರ ಬಡ್ಡಿದರದ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಬೇಸ್ ರೇಟ್ ಹೆಚ್ಚದಂತೆ ಅವರ ಸಾಲದ ಮೇಲಿನ ಬಡ್ಡಿದರ ಕೂಡ ಹೆಚ್ಚುತ್ತದೆ. ಇದ್ರಿಂದ ಸಹಜವಾಗಿ ಇಎಂಐಯಲ್ಲಿ (EMIs) ಹೆಚ್ಚಳವಾಗುತ್ತದೆ ಇಲ್ಲವೇ ಸಾಲದ ಅವಧಿ ವಿಸ್ತರಣೆಗೊಳ್ಳುತ್ತದೆ.

Latest Videos

undefined

ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!

ಆರ್ ಬಿಐನಿಂದ ಕನಿಷ್ಠ ಬಡ್ಡಿದರ ನಿಗದಿ
ಭಾರತೀಯ ರಿಸರ್ವ್ ಬ್ಯಾಂಕ್ ಕನಿಷ್ಠ ಬಡ್ಡಿ ದರವನ್ನು ನಿಗದಿಪಡಿಸುತ್ತದೆ. ಇದನ್ನು ಎಲ್ಲ ಬ್ಯಾಂಕ್ ಗಳು ಅನುಸರಿಸುತ್ತವೆ. ಸ್ಟೇಟ್ ಬ್ಯಾಂಕ್ ಸೇರಿದಂತೆ ಯಾವ ಬ್ಯಾಂಕ್ ಕೂಡ ಇದಕ್ಕಿಂತ ಕಡಿಮೆ ಬಡ್ಡಿದರವನ್ನು ವಿಧಿಸುವಂತಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರವನ್ನು ಹೆಚ್ಚಳ ಮಾಡೋ ನಿರ್ಧಾರವನ್ನು ಆರ್ ಬಿಐ ದ್ವಿಮಾಸಿಕ ಹಣಕಾಸು ನೀತಿ ಸಮಿತಿ (MPC)ಸಭೆ ನಡೆದ 15 ದಿನಗಳ ಬಳಿಕ ಘೋಷಿಸಿದೆ.  ಡಿಸೆಂಬರ್ 8ರಂದು ಎಂಪಿಸಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆರ್ ಬಿಐ ರೆಪೋ(Repo rate) ದರವನ್ನು ಈ ಹಿಂದಿನಂತೆ ಶೇ.4ರಷ್ಟೇ ಮುಂದುವರಿಸಲು ನಿರ್ಧರಿಸಿತ್ತು. 

Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

ಬಡ್ಡಿದರ ಹೆಚ್ಚಿಸಿರೋ ಇತರ ಬ್ಯಾಂಕ್ ಗಳು
ಖಾಸಗಿ ವಲಯದ ಬ್ಯಾಂಕ್ ಗಳಾದ ಎಚ್ ಡಿಎಫ್ ಸಿ (HDFC), ಐಸಿಐಸಿ ಬ್ಯಾಂಕ್ ಕೂಡ ಎಫ್ ಡಿ ಬಡ್ಡಿದರಗಳನ್ನು ಇತ್ತೀಚೆಗೆ ಹೆಚ್ಚಳ ಮಾಡಿವೆ. ಎಚ್ ಡಿಎಫ್ ಸಿ ಬ್ಯಾಂಕ್ ಇತ್ತೀಚೆಗೆ ತನ್ನ ವೆಬ್ ಸೈಟ್ ನಲ್ಲಿ 7ರಿಂದ 29 ದಿನಗಳ ಮೆಚ್ಯುರಿಟಿ ಅವಧಿ ಹೊಂದಿರೋ  ಠೇವಣೆಗಳ ಮೇಲಿನ ಬಡ್ಡಿದರವನ್ನು ಶೇ.2.50ಕ್ಕೆ ಹಾಗೂ 30 ರಿಂದ 90 ದಿನಗಳ ಮೆಚ್ಯುರಿಟಿ ಹೊಂದಿರೋ ಎಫ್ ಡಿಗಳ ಮೇಲಿನ ಬಡ್ಡಿದರವನ್ನು ಶೇ.3ಕ್ಕೆ ಹೆಚ್ಚಳ ಮಾಡಿರೋದಾಗಿ ತಿಳಿಸಿದೆ. ಇನ್ನು ಐಸಿಐಸಿಐ ಬ್ಯಾಂಕ್ (ICICI Bank ) ಕೂಡ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದೆ.  ಬಜಾಜ್ ಫೈನಾನ್ಸ್ ಕೂಡ ಈ ವಾರದ ಪ್ರಾರಂಭದಲ್ಲಿ ಬಡ್ಡಿದರದಲ್ಲಿ ಹೆಚ್ಚಳ ಮಾಡಿದೆ. 

click me!